ಜನವರಿ 1ರಂದು ನಡೆದ ದಾಳಿಯಲ್ಲಿ ಭಾಗಿಯಾದ ನಾಲ್ವರು ಉಗ್ರರು ಹಾಗೂ ಅವರಿಗೆ ಕರೆ ಮಾಡಿದ್ದ ದೂರವಾಣಿ ಸಂಖ್ಯೆಯ ವಿವರಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೇಳಿದೆ.
ಈ ಮೂಲಕ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಂಡರಷ್ಟೇ ಮಾತುಕತೆ ಸಾಧ್ಯ ಎಂದು ಸ್ಪಷ್ಟ ಮಾತುಗಳಲ್ಲಿ ಭಾರತ ತಿಳಿಸಿದೆ.
ಈ ಮಧ್ಯೆ ವಾಯುಪಡೆ ಸಿಬ್ಬಂದಿಯ ತಂಗುದಾಣದಲ್ಲಿ ಉಗ್ರರು ಅಡಗಿರಲಿಲ್ಲ ಎಂಬುದು ತನಿಖೆಯಿಂದ ಗೊತ್ತಾಗಿದೆ. ಉಗ್ರರು ಇಲ್ಲಿ ಅಡಗಿರಬಹುದು ಎಂಬ ಶಂಕೆಯಿಂದ 48 ಗಂಟೆಗಳ ಕಾಳ ಈ ಕಟ್ಟಡವನ್ನು ಸೇನಾ ಸಿಬ್ಬಂದಿ ಸುತ್ತುವರಿದಿದ್ದರು.
ಆದರೆ, ಈ ಕುರಿತು ಎನ್‌ಐಎ ಮಾತ್ರ ಮೌನವಹಿಸಿದೆ. ಚಂಡೀಗಢದ ಸಿಎಫ್‌ಎಸ್‌ಎಲ್ ಕೇಂದ್ರದಲ್ಲಿ ವಿಧಿವಿಜ್ಞಾನ ಪರೀಕ್ಷೆ ನಡೆಯುತ್ತಿದ್ದು ಈ ವರದಿಗಾಗಿ ಕಾಯುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಉಗ್ರರು ಅಡಗಿದ್ದರು ಎಂಬ ಶಂಕೆ ಮೇರೆಗೆ ಭಾರತೀಯ ಸೇನೆಯೇ ಧ್ವಂಸಗೊಳಿಸಿದ ಏರ್‌ಮೆನ್‌ಗಳ ತಂಗುದಾಣದಲ್ಲಿ ಮನುಷ್ಯರ ಮಾಂಸದ ತುಣುಕಾಗಲೀ, ಶಸ್ತ್ರಾಸ್ತ್ರಗಳಾಗಲೀ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ದಾಳಿ ಶುರುವಾದಾಗ ನಾಲ್ವರು ಉಗ್ರರು ವಾಯುನೆಲೆ ಸಿಬ್ಬಂದಿ ತಂಗುದಾಣದಲ್ಲಿ ಅಡಗಿದ್ದಾರೆ ಎಂದು ಶಂಕಿಸಲಾಗಿತ್ತು. ಘಟನೆಯಲ್ಲಿ ಹುತಾತ್ಮರಾದ ಲೆಫ್ಟಿನೆಂಟ್ ಕರ್ನಲ್ ನೀರಜ್ ಅವರ ಮೇಲೂ ಇದೇ ಸ್ಥಳದಿಂದ ಗುಂಡು ಸಿಡಿದುಬಂತು ಎಂದು ಹೇಳಲಾಗುತ್ತಿತ್ತು.
ತನಿಖಾ ತಂಡ ಭೇಟಿ ನಂತರ ಮಾತು
ಈ ಮಧ್ಯೆ, ದ್ವಿಪಕ್ಷೀಯ ಮಾತುಕತೆ ಬಗ್ಗೆ ವಿವರ ನೀಡಿರುವ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್, ಪಾಕ್ ತನಿಖಾ ತಂಡ ಪಠಾಣ್‌ಕೋಟ್‌ಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತುಕತೆಯ ದಿನಾಂಕ ನಿಗದಿಯಾಗಲಿದೆ ಎಂದು ತಿಳಿಸಿದ್ದಾರೆ.
ಯಾರ ದೂವಾಣಿ ಸಂಖ್ಯೆ ಇದು?
ದಾಳಿಗೂ ಮುನ್ನ ಉಗ್ರರಿಗೆ ಪಾಕ್ ದೂರವಾಣಿ ಸಂಖ್ಯೆಯಿಂದ ಕರೆ ಬಂದಿತ್ತು. ಇದು ಜೈಷೆ ಮೊಹಮದ್ ಉಗ್ರ ಮುಲ್ಲಾ ದಾದುಲ್ಲಾ ಮತ್ತು ಕಾಶೀಫ್ ಜಾನ್ ಸೇರಿದಂತೆ ಇನ್ನಿತರರಿಂದ ಬಂದಿದ್ದ ಕರೆ ಇರಬಹುದು ಎಂದು ಎನ್‌ಐಎ ಅಧಿಕಾರಿಗಳು ಶಂಕಿಸಿದ್ದಾರೆ. ಈ ದೂರವಾಣಿ ಸಂಖ್ಯೆಗಳು ಪಾಕ್ ದೂರಸಂಪರ್ಕ ಕಂಪನಿಗಳಾದ ಮೊಬಿಲಿಂಕ್, ವೈರ್ಡ್ ಮತ್ತು ಟೆಲಿನಾರ್‌ಗೆ ಸೇರಿದ್ದಾಗಿವೆ.
ದಾಳಿಕೋರರ ಪೈಕಿ ಇಬ್ಬರನ್ನು ನಾಸಿರ್ ಮತ್ತು ಸಲೀಮ್ ಎಂದು ಗುರುತಿಸಲಾಗಿದೆ. ದಾಳಿ ನಡೆಯುತ್ತಿರುವಾಗಲೇ ನಾಸಿರ್, ಪಾಕಿಸ್ತಾನದಲ್ಲಿರುವ ತನ್ನ ತಾಯಿಯೊಂದಿಗೆ ಮಾತನಾಡಿದ್ದ. ಜ್ಯುವೆಲರ್‌ವೊಬ್ಬರ ಬಳಿ ಮೊಬೈಲ್ ಕಸಿದಿದ್ದ ಉಗ್ರರು ಅದನ್ನು ಬಳಸಿದ್ದರು.
ಮಾತಿಗಿಂತ ಉಗ್ರ ಧಮನವೇ ಮುಖ್ಯ
ಭಾರತ-ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ದ್ವಿಪಕ್ಷೀಯ ಮಾತುಕತೆ ನಡೆಯುವ ಬಗ್ಗೆ ಭಾರತ ಸರ್ಕಾರ ಪ್ರತಿಕ್ರಿಯಿಸಿದ್ದು, ಭಯೋತ್ಪಾದಕರ ವಿರುದ್ಧ ಕ್ರಮ ದ್ವಿಪಕ್ಷೀಯ ಮಾತುಕತೆಗಿಂತಲೂ ಮುಖ್ಯವಾದದ್ದು ಎಂದು ಹೇಳಿದೆ.
'ಭಯೋತ್ಪಾದಕರ ವಿರುದ್ಧ ಕ್ರಮ ಮುಖ್ಯವೋ ಅಥವಾ ದ್ವಿಪಕ್ಷೀಯ ಮಾತುಕತೆ ಮುಖ್ಯವೋ ಎಂದರೆ, ಭಯೋತ್ಪಾದಕರ ವಿರುದ್ಧ ಕ್ರಮ ಜರುಗಿಸುವುದೇ ಭಾರತ ಸರ್ಕಾರದ ಆದ್ಯತೆಯ ವಿಷಯವಾಗಿರಲಿದೆ,' ಎಂದು ಭಾರತದ ವಿದೇಶಾಂಗ ಕಾರ‌್ಯದರ್ಶಿ ಎಸ್ ಜೈಶಂಕರ್ ತಿಳಿಸಿದ್ದಾರೆ.
ಜನವರಿ ತಿಂಗಳ ಮಧ್ಯದಲ್ಲಿ ಭಾರತ- ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ದ್ವಿಪಕ್ಷೀಯ ಮಾತುಕತೆ ನಿಗದಿಯಾಗಿತ್ತು, ಆದರೆ ಪಠಾಣ್‌ಕೋಟ್ ದಾಳಿಯಿಂದಾಗಿ ರದ್ದುಗೊಳಿಸಲಾಗಿತ್ತು.
ಹೊಸದಿಲ್ಲಿ: ಪಠಾಣ್‌ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದ ನಾಲ್ವರು ಉಗ್ರರ ಕುರಿತ ಮಾಹಿತಿ ಕೇಳಿ ಭಾರತವು, ಪಾಕ್‌ನ ವಿಶೇಷ ತನಿಖಾ ತಂಡಕ್ಕೆ ಪತ್ರ ಬರೆದಿದೆ.