ಗೃಹ ಇಲಾಖೆಯ ಸಹಾಯಕ ಸಚಿವ ಹರಿಬಾಯ್ ಚೌಧರಿ ಬುಧವಾರ ರಾಜ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು.
'ನೇತಾಜಿ ಸಂಬಂಧಪಟ್ಟ ದಾಖಲೆಗಳಿದ್ದರೆ ಅದನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಹಲವಾರು ದೇಶಗಳಿಗೆ ಮನವಿ ಮಾಡಲಾಗಿದೆ. ಆಸ್ಟ್ರೇಲಿಯಾ, ಜರ್ಮನಿ, ಇಟಲಿ, ಜಪಾನ್, ರಷ್ಯಾ, ಬ್ರಿಟನ್ ಮತ್ತು ಅಮೆರಿಕ ಸರ್ಕಾರಗಳಿಗೆ ಮನವಿ ಮಾಡಲಾಗಿದೆ,' ಎಂದು ಚೌಧರಿ ತಿಳಿಸಿದರು.
'ಈ ಸಂಬಂಧ ರಷ್ಯನ್ ಫೆಡರೇಷನ್, ಜರ್ಮನಿ ಫೆಡರಲ್ ರಿಪಬ್ಲಿಕ್, ಜಪಾನ್ ಮತ್ತು ಇಂಗ್ಲೆಂಡ್ ನಿಂದ ಪ್ರತಿಕ್ರಿಯೆ ಬಂದಿದೆ. ಆದರೆ, ಆಸ್ಟ್ರೇಲಿಯಾ, ಇಟಲಿ ಮತ್ತು ಅಮೆರಿಕ ಮೌನ ವಹಿಸಿವೆ,' ಎಂದು ಅವರು ತಿಳಿಸಿದರು.
'ಈಗಾಗಲೇ ಸರ್ಕಾರದ ಬಳಿ ಇದ್ದ ನೇತಾಜಿಗೆ ಸಂಬಂಧ ಪಟ್ಟ ದಾಖಲೆಗಳನ್ನು ಬಹಿರಂಗಗೊಳಿಸಲಾಗಿದೆ. ಇವನ್ನೆಲ್ಲ ರಾಷ್ಟ್ರೀಯ ಪತ್ರಾಗಾರ ಇಲಾಖೆಗೆ ಹಸ್ತಾಂತರಿಸಲಾಗಿದೆ. ಮತ್ತಷ್ಟು ದಾಖಲೆಗಳನ್ನು ಕಲೆ ಹಾಕುವುದಕ್ಕೆ ಭಾರತ ಪ್ರಯತ್ನಿಸುತ್ತಿದೆ,' ಎಂದು ಅವರು ಮಾಹಿತಿ ನೀಡಿದ್ದಾರೆ.
ಹೊಸದಿಲ್ಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಕುರಿತ ದಾಖಲೆಗಳನ್ನು ಒದಗಿಸುವಂತೆ ಜಪಾನ್, ರಷ್ಯಾ, ಬ್ರಿಟನ್ ಸೇರಿದಂತೆ ಹಲವು ದೇಶಗಳಿಗೆ ಭಾರತ ಮನವಿ ಮಾಡಿದೆ.