Quantcast
Channel: VijayKarnataka
Viewing all articles
Browse latest Browse all 6795

ಡಾನ್ಸ್‌ಬಾರ್ ಲೈಸೆನ್ಸ್ ನೀಡಲು ಮಹಾ ಸರಕಾರಕ್ಕೆ ಮಾ.15ರ ಗಡುವು; ಸುಪ್ರೀಂ

$
0
0

ಹೊಸದಿಲ್ಲಿ: ಮಾ.15ರೊಳಗೆ ಡ್ಯಾನ್ಸ್‌ಬಾರ್‌ಗಳಿಗೆ ಪರವಾನಗಿ ನೀಡುವಂತೆ ಮಹಾರಾಷ್ಟ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ. ಡ್ಯಾನ್ಸ್ ಬಾರ್‌ನಲ್ಲಿ ಸಿಸಿ ಟಿವಿ ಅಳವಡಿಸಿ ಹತ್ತಿರದ ಪೊಲೀಸ್ ಠಾಣೆಗಳಿಗೆ ಲೈವ್ ಚಿತ್ರೀಕರಣ ಹರಿಸಬೇಕೆಂಬ ಸರಕಾರದ ಮನವಿಯನ್ನೂ ತಿರಸ್ಕರಿಸಿರುವ ನ್ಯಾಯಾಲಯವು, ಇದು ಖಾಸಗಿತನದ ಉಲ್ಲಂಘನೆಯಾಗಲಿದೆ ಎಂದು ತಿಳಿಸಿದೆ.

ಡ್ಯಾನ್ಸ್‌ಬಾರ್‌ಗಳನ್ನು ತೆರೆಯಲು ಮಹಾ ಪೊಲೀಸರು 24 ನಿರ್ಬಂಧಗಳನ್ನು ಹೇರಿದ್ದನ್ನು ವಿರೋಧಿಸಿ, ಡ್ಯಾನ್ಸ್ ಬಾರ್ ಒಕ್ಕೂಟದ ಸದಸ್ಯರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ಪೊಲೀಸರು ಹಾಕಿರುವ ನಿಯಮಗಳು ಪ್ರಾಯೋಗಿಕವಾಗಿ ನಡೆಯುವಂಥವಲ್ಲ. ಪೊಲೀಸ್ ಠಾಣೆಗಳಲ್ಲಿ ಲೈವ್ ಡ್ಯಾನ್ಸ್ ಪ್ರದರ್ಶನವೇ ಅಲ್ಲದೆ, ನೃತ್ಯ ಮಾಡುವವರ ಹಾಗೂ ಕೂರುವವರ ನಡುವೆ 3 ಅಡಿಗಳ ಗೋಡೆಗಳಿರಬೇಕು, ಅಪರಾಧ ಹಿನ್ನೆಲೆಯಿಂದ ಬಂದವರು ಬಾರ್‌ಗಳಲ್ಲಿ ನೌಕರಿ ಮಾಡುವಂತಿಲ್ಲ ಎಂಬೆಲ್ಲ ನಿರ್ಬಂಧಗಳು ಸರಿಯಲ್ಲ ಎಂದು ಬಾರ್ ಮಾಲೀಕರು ವಾದಿಸಿದ್ದರು.

ಇವುಗಳಲ್ಲಿ ಕೆಲವೊಂದು ನಿರ್ಬಂಧಗಳಿಗೆ ಬದಲಾವಣೆ ತಂದಿರುವ ನ್ಯಾಯಾಲಯವು, ಮೂರು ದಿನಗಳ ಒಳಗೆ ಈ ಕರಾರುಗಳನ್ನು ಅಳವಡಿಸಿಕೊಳ್ಳುವಂತೆ ಬಾರ್‌ಗಳಿಗೆ ತಿಳಿಸಿದೆಯಲ್ಲದೆ, ಮಾ.15ರೊಳಗೆ ಡ್ಯಾನ್ಸ್‌ಬಾರ್‌ಗಳಿಗೆ ಪರವಾನಗಿ ನೀಡುವಂತೆ ರಾಜ್ಯ ಸರಕಾರಕ್ಕೆ ಆದೇಶಿಸಿದೆ.

ಡ್ಯಾನ್ಸ್‌ಬಾರ್‌ಗಳನ್ನು ನಿಷೇಧಿಸುವ ಮಹಾ ಸರಕಾರದ ನಿರ್ಧಾರಕ್ಕೆ ಕಳೆದ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್ ತಡೆ ಹೇರಿತ್ತು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್