Quantcast
Channel: VijayKarnataka
Viewing all articles
Browse latest Browse all 6795

ವಿಜಯ್ ಜತೆ ಕಾಜಲ್

$
0
0

ಕಾಲಿವುಡ್ ಸ್ಟಾರ್ ಹೀರೋ ವಿಜಯ್‌ರ ಅರವತ್ತನೇ ತಮಿಳು ಚಿತ್ರಕ್ಕೆ ಪ್ರಮುಖ ನಾಯಕಿಯಾಗಿ ಕಾಜಲ್ ಅಗರ್‌ವಾಲ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. 'ರಜನಿ ಮುರುಗನ್' ತಮಿಳು ಸಿನಿಮಾ ಖ್ಯಾತಿಯ ಕೀರ್ತಿ ಸುರೇಶ್ ಚಿತ್ರದ ನಾಯಕಿಯರಲ್ಲೊಬ್ಬರು ಎಂದು ಈ ಮೊದಲು ಘೋಷಿಸಲಾಗಿತ್ತು. ಇದೀಗ ಚಿತ್ರದ ಮತ್ತೊಬ್ಬ ನಾಯಕಿಯಾಗಿ ಕಾಜಲ್ ಬಂದಿದ್ದಾರೆ. ಚಿತ್ರತಂಡದ ಮೂಲಗಳು ಹೇಳುವಂತೆ ಚಿತ್ರಕ್ಕೆ ಮೂರನೇ ನಾಯಕಿ ಬೇಕಂತೆ! 'ಕಾಕ ಮುತ್ತೈ' ತಮಿಳು ಸಿನಿಮಾ ಖ್ಯಾತಿಯ ಐಶ್ವರ್ಯಾ ರಾಜೇಶ್ ಅವರನ್ನು ಕರೆದಿದ್ದು, ಆಕೆಯಿಂದ ಇನ್ನೂ ಒಪ್ಪಿಗೆ ಸಿಕ್ಕಿಲ್ಲವಂತೆ.

'ಇದು ವಿಜಯ್ ವೃತ್ತಿ ಬದುಕಿನ ಮೈಲಿಗಲ್ಲು. ಹಾಗಾಗಿ ದೊಡ್ಡ ಬಜೆಟ್‌ನಲ್ಲಿ ಸಿನಿಮಾ ಮಾಡುತ್ತಿದ್ದೇವೆ. ನಟಿಯರ ಆಯ್ಕೆ ವಿಚಾರದಲ್ಲಿ ಎಚ್ಚರಿಕೆ ವಹಿಸಿದ್ದು, ಚಿತ್ರದ ಮೂವರು ನಾಯಕಿಯರ ಪಾತ್ರಗಳಿಗೂ ಪ್ರಾಮುಖ್ಯತೆಯಿರುತ್ತದೆ' ಎನ್ನುತ್ತಾರೆ ಚಿತ್ರದ ನಿರ್ದೇಶಕ ಭರತನ್. 'ವಿಜಯ್ 60' ಶೀರ್ಷಿಕೆಯಡಿ ಚಿತ್ರದ ಮೊದಲ ಹಂತದ ತಯಾರಿ ನಡೆದಿದ್ದು, ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದ ಖಳಪಾತ್ರಕ್ಕೆಂದು ಬಾಲಿವುಡ್ ನಟರೊಬ್ಬರು ದಕ್ಷಿಣಕ್ಕೆ ಬರಲಿದ್ದಾರೆ ಎನ್ನುವ ಸುದ್ದಿಯೊಂದು ಚಿತ್ರತಂಡದಲ್ಲಿ ಹರಿದಾಡುತ್ತಿದೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>