Quantcast
Channel: VijayKarnataka
Viewing all articles
Browse latest Browse all 6795

ಮಲಯಾಳಂಗೆ ಜಗಪತಿ

$
0
0

ಟಾಲಿವುಡ್‌ನ ಹಿರಿಯ ನಟ ಜಗಪತಿ ಬಾಬು ತಮ್ಮನ್ನು ಭಿನ್ನ ಪಾತ್ರಗಳಿಗೆ ಒಡ್ಡಿಕೊಳ್ಳುತ್ತಿದ್ದಾರೆ. ಅವರೀಗ ವಿಶಿಷ್ಟ ಪಾತ್ರವೊಂದರ ಮೂಲಕ ಮಲಯಾಳಂ ಚಿತ್ರಜಗತ್ತನ್ನು ಪ್ರವೇಶಿಸುತ್ತಿದ್ದಾರೆ! ಮೋಹನ್‌ಲಾಲ್ ಅಭಿನಯದ 'ಪುಲಿ ಮುರುಗನ್' ಚಿತ್ರದಲ್ಲಿ ಜಗಪತಿ ಬಾಬು ಖಳಪಾತ್ರದಲ್ಲಿ ನಟಿಸುವುದು ಖಾತ್ರಿಯಾಗಿದೆ. ಬಾಲಕೃಷ್ಣ ಹೀರೋ ಆಗಿ ನಟಿಸಿದ್ದ 'ಲೆಜೆಂಡ್' ತೆಲುಗು ಸಿನಿಮಾ ಜಗಪತಿ ಬಾಬು ವೃತ್ತಿಬದುಕಿಗೆ ದೊಡ್ಡ ತಿರುವು ನೀಡಿತು. ಇದಾದ ನಂತರ ಅವರು ಟಾಲಿವುಡ್‌ನ ಸ್ಟಾರ್ ಹೀರೋಗಳ ಚಿತ್ರಗಳ ಖಳನಾಗಿ ಘರ್ಜಿಸತೊಡಗಿದರು. ಖಳನಾಗಿ ಮಾತ್ರವಲ್ಲ, ಅಪ್ಪನ ಪಾತ್ರಗಳು ಕೂಡ ಅವರಿಗೆ ಹೆಸರು ತಂದುಕೊಟ್ಟವು. ಇತ್ತೀಚೆಗೆ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದ 'ನನ್ನಕು ಪ್ರೇಮತೋ' ತೆಲುಗು ಸಿನಿಮಾ ಕೇರಳದಲ್ಲಿ ಉತ್ತಮ ಪ್ರದರ್ಶನ ಕಂಡಿತ್ತು. ಇದರಿಂದ ಪ್ರೇರಿತರಾಗಿರುವ ಮಾಲಿವುಡ್ ನಿರ್ಮಾಪಕರು ತಮ್ಮ ಸಿನಿಮಾಗಳ ಮಹತ್ವದ ಪಾತ್ರಗಳಿಗೆ ಜಗಪತಿ ಬಾಬುರನ್ನು ಕರೆಯುತ್ತಿದ್ದಾರೆ. ಈ ಯಾದಿಯಲ್ಲಿ 'ಪುಲಿ ಮುರುಗನ್' ಅವರಿಗೆ ಮೊದಲ ಸಿನಿಮಾ. ವೈಶಾಖ್ ನಿರ್ದೇಶನದ ಚಿತ್ರದಲ್ಲಿ ಅವರು ಖಳನಾಗಿ ವಿಜೃಂಭಿಸಲಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>