'ಅಂದಾಲ ರಾಕ್ಷಸಿ' ಚಿತ್ರದೊಂದಿಗೆ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ ಬೆಡಗಿ ನಿಧಾನವಾಗಿ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನೆಲೆ ಕಂಡುಕೊಳ್ಳತೊಡಗಿದರು. ಇದೀಗ ಆಕೆಗೆ ಅವಕಾಶಗಳು ಹೆಚ್ಚಾಗುತ್ತಿದ್ದ ವರುಣ್ ತೇಜ್ ಸಿನಿಮಾ ವರವಾಗಿ ಬಂದಿದೆ. 'ಇದೊಂದು ರೊಮ್ಯಾಂಟಿಕ್ ಎಂಟರ್‌ಟೇನರ್. ಲಾವಣ್ಯ ಚಿತ್ರಕತೆಯನ್ನು ತುಂಬಾ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುವ ಹುಡುಗಿ. ನಮ್ಮ ಚಿತ್ರದಲ್ಲಿ ಆಕೆಗೆ ನಟನೆಗೂ ಉತ್ತಮ ಸ್ಕೋಪ್ ಇದ್ದು, ಸದ್ಯದಲ್ಲೇ ಚಿತ್ರದ ಕುರಿತಾಗಿ ಇತರೆ ಮಾಹಿತಿ ಬಹಿರಂಗಪಡಿಸಲಿದ್ದೇವೆ' ಎಂದು ಚಿತ್ರತಂಡದ ಮೂಲಗಳು ಹೇಳುತ್ತವೆ.
ಮಾಡೆಲಿಂಗ್‌ನಿಂದ ಬೆಳ್ಳಿತೆರೆಗೆ ಪರಿಚಯವಾದ ಲಾವಣ್ಯ ತ್ರಿಪಾಠಿ ಅವರಿಗೆ ಸಾಲಾಗಿ ಸಿನಿಮಾಗಳ ಅವಕಾಶಗಳು ಸಿಗುತ್ತಿವೆ. ಮೊನ್ನೆಯಷ್ಟೇ ಸಂದೀಪ್ ಕಿಶನ್ ನಟಿಸುತ್ತಿರುವ ಸೈನ್ಸ್ ಫಿಕ್ಷನ್ ಚಿತ್ರದ ನಾಯಕಿಯಾಗಿ ಅವರು ಅವಕಾಶ ಗಿಟ್ಟಿಸಿದ್ದರು. ಇದೀಗ ಶ್ರೀನು ವೈಟ್ಲಾ ನಿರ್ದೇಶನದಲ್ಲಿ ವರುಣ್ ತೇಜ್ ನಟಿಸುತ್ತಿರುವ ಚಿತ್ರದ ಹಿರೋಯಿನ್ ಆಗುತ್ತಿದ್ದಾರೆ. ಉತ್ತರ ಪ್ರದೇಶ ಮೂಲದ ಲಾವಣ್ಯ ಮೂಲತಃ ಮಾಡೆಲಿಂಗ್‌ನವರು. ಅಲ್ಲಿನ ಯಶಸ್ಸು ಅವರಿಗೆ ಬಾಲಿವುಡ್‌ನಲ್ಲಿ ಅವಕಾಶ ಕಲ್ಪಿಸಿತು. ನಾಯಕಿಯಾಗಿ ನಟಿಸಿದ ಹಿಂದಿ ಚಿತ್ರಗಳು ವಿಫಲವಾಗುತ್ತಿದ್ದಂತೆ ಅವರು ದಕ್ಷಿಣದತ್ತ ವಲಸೆ ಬಂದಿದ್ದರು.