Quantcast
Channel: VijayKarnataka
Viewing all articles
Browse latest Browse all 6795

ಜಾಮೀನು ಪಡೆಯುವರೇ ಕನ್ಹಯ್ಯ?

$
0
0

*ಜಾಮೀನು ಅರ್ಜಿ ವಿಚಾರಣೆ ಇಂದು *ಬಿಡುಗಡೆಯ ನಿರೀಕ್ಷೆಯಲ್ಲಿ ಜೆಎನ್‌ಯು

ಹೊಸದಿಲ್ಲಿ: ದೇಶದ್ರೋಹ ಆಪಾದನೆಯಲ್ಲಿ ಜೈಲು ಸೇರಿರುವ ದಿಲ್ಲಿಯ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮುಖ್ಯಸ್ಥ ಕನ್ಹಯ್ಯ ಕುಮಾರ್ ಜಾಮೀನು ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಸೋಮವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

ಫೆ. 24ರಂದು ಈ ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಮೂರ್ತಿ ಪ್ರತಿಭಾ ರಾಣಿ ಅವರು ಮುಂದಿನ ವಿಚಾರಣೆಯನ್ನು ಫೆ. 29ಕ್ಕೆ ಮುಂದೂಡಿದ್ದರು. ಹೆಚ್ಚಿನ ವಿಚಾರಣೆಗಾಗಿ ಆರೋಪಿ ಕನ್ಹಯ್ಯನನ್ನು ತಮ್ಮ ವಶಕ್ಕೆ ನೀಡಬೇಕೆಂದು ದಿಲ್ಲಿ ಪೊಲೀಸರು ಕೋರಿಕೊಂಡಿದ್ದ ಹಿನ್ನೆಲೆಯಲ್ಲಿ ಅಂದು ಕೋರ್ಟ್ ಜಾಮೀನು ನೀಡಲು ನಿರಾಕರಿಸಿತ್ತು.

ಈ ಪ್ರಕರಣದಲ್ಲಿ ಶರಣಾಗಿರುವ ಇನ್ನಿಬ್ಬರು ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ಮುಂದೆ ಕನ್ಹಯ್ಯನನ್ನು ಕೂರಿಸಿ ವಿಚಾರಣೆ ನಡೆಸಿರುವ ಪೊಲೀಸರು ತನಿಖೆಯ ಪ್ರಗತಿ ಕುರಿತು ಕೋರ್ಟ್‌ಗೆ ವರದಿ ಸಲ್ಲಿಸುವ ನಿರೀಕ್ಷೆ ಇದೆ. ಈ ವಿಚಾರಣೆ ವೇಳೆ ಫೆ.9ರಂದು ವಿವಿಯ ಆವರಣದಲ್ಲಿ ನಡೆದ ಕಾರ‌್ಯಕ್ರಮದಲ್ಲಿ ದೇಶವಿರೋಧಿ ಘೋಷಣೆಗಳನ್ನು ಕೂಗಲಾಗಿತ್ತು ಎಂಬ ಅಂಶ ಬಯಲಿಗೆ ಬಂದಿರುವುದರಿಂದ ಪೊಲೀಸರು ಸಲ್ಲಿಸಲಿರುವ ವರದಿ ಮಹತ್ವ ಪಡೆಯಲಿದೆ.

ಈ ಹಿಂದಿನ ವಿಚಾರಣೆಯಲ್ಲಿ ಕನ್ಹಯ್ಯ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಹಾಗೂ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಅವರು, ದಿಲ್ಲಿ ಪೊಲೀಸರು ಸಲ್ಲಿಸಿರುವ ವಸ್ಥುಸ್ಥಿತಿ ವರದಿಯಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಲಾಗಿತ್ತು ಎಂಬ ಬಗ್ಗೆ ಯಾವ ಪುರಾವೆಗಳೂ ಇಲ್ಲ ಎಂದು ಹೇಳಿದ್ದರು.

ಕನ್ಹಯ್ಯ ನಿರೀಕ್ಷೆಯಲ್ಲಿ ಜೆಎನ್‌ಯು: ತಿಹಾರ್ ಜೈಲಿನಲ್ಲಿರುವ ಕನ್ಹಯ್ಯ ಕುಮಾರ್ ಜಾಮೀನು ಪಡೆದು ಮತ್ತೆ ವಿವಿಗೆ ಹಿಂದಿರುಗಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಸಹಪಾಠಿಗಳಿದ್ದು, 'ರೋಹಿತ್ ಕಾ ಜೆಎನ್‌ಯು' ಎಂಬ ಪೋಸ್ಟರ್‌ಗಳು ವಿವಿಯ ಆವರಣದಲ್ಲಿ ರಾರಾಜಿಸುತ್ತಿವೆ. ಕನ್ಹಯ್ಯ ದೇಶದ್ರೋಹ ಎಸಗಿಲ್ಲ. ಹೈದರಾಬಾದ್ ಕೇಂದ್ರೀಯ ವಿವಿಯ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣವೂ ಸೇರಿದಂತೆ ವ್ಯವಸ್ಥೆಯಲ್ಲಾಗುತ್ತಿರುವ ಅನ್ಯಾಯಗಳ ವಿರುದ್ಧ ಅಂದಿನ ಕಾರ‌್ಯಕ್ರಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರೇ ಹೊರತು ಸಂವಿಧಾನವನ್ನಾಗಲೀ, ದೇಶವನ್ನಾಗಿ ಅಗೌರವಿಸಿಲ್ಲ. ಅವರು ಜಾಮೀನು ಪಡೆದು ಬಂದೇ ಬರುತ್ತಾರೆ. ಪುನಃ ರೋಹಿತ್ ಪರವಾಗಿ ನಡೆಯುವ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ವಿಶ್ವಾಸವನ್ನು ಜೆಎನ್‌ಯು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಶಹೀಲಾ ರಶೀದ್ ಶೋರಾ ವ್ಯಕ್ತಪಡಿಸಿದ್ದಾರೆ. ---

ಜೆಎನ್‌ಯು ವಿವಿಗೆ ತನ್ನದೇ ಆದ ಘನತೆ ಇದೆ. ದೇಶಾದ್ಯಂತ ಗೌರವವಿದೆ. ಇಲ್ಲಿ ನಡೆಯುವ ಚರ್ಚೆಗಳು ಬೇರೆ ವಿವಿಗಳಲ್ಲೂ ಮುನ್ನೆಲೆಗೆ ಬರುತ್ತವೆ. ಇಂತಹ ವಿಶ್ವವಿದ್ಯಾಲಯ, ಉಗ್ರ ಅಫ್ಜಲ್ ಗುರು ಪರ ಸಹಾನೂಭೂತಿ ತೋರಿದ ಕಾರ್ಯಕ್ರಮ ಸೃಷ್ಟಿಸಿದ ವಿವಾದಿಂದ ನರಳಬಾರದು. ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಎಂದಿಗೂ ಫಲಿಸದು.

-ರೋಮಿಲಾ ಥಾಪರ್, ಇತಿಹಾಸ ತಜ್ಞೆ ---

ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಪ್ರತಿಭಟನೆ ನಡೆಸಲು ಅವಕಾಶವಿದೆ. ಆದರೆ ಪ್ರತಿಭಟನೆಯ ನೆಪದಲ್ಲಿ ದೇಶವಿರೋಧಿ ಘೋಷಣೆಗಳನ್ನು ಕೂಗಿ, ಒಗ್ಗಟ್ಟನ್ನು ಹಾಳುಗೆಡುವ ಶಕ್ತಿಗಳನ್ನು ಮಟ್ಟ ಹಾಕಲಾಗುವುದು. ನಮ್ಮದು ದುರ್ಬಲ ಸರಕಾರ ಅಲ್ಲವೇ ಅಲ್ಲ.

-ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>