Quantcast
Channel: VijayKarnataka
Viewing all articles
Browse latest Browse all 6795

ರೈತರ ಆದಾಯ ದುಪ್ಪಟ್ಟಿಗೆ ಮೋದಿ ಐಡಿಯಾ

$
0
0

*2022ರ ಹೊತ್ತಿಗೆ ಕನಸು ನನಸು ಮಾಡುವ ಯೋಜನೆ

ಬರೇಲಿ: ಮುಂದಿನ ಆರು ವರ್ಷಗಳ ಅವಧಿಯಲ್ಲಿ ಭಾರತದ ರೈತರ ಆದಾಯ ದುಪ್ಪಟ್ಟಾಗಬೇಕು. ಆ ರೀತಿಯಲ್ಲಿ ಕೃಷಿ ವಲಯಕ್ಕೆ ಅನುಕೂಲವಾದ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಎಲ್ಲ ರಾಜ್ಯಗಳು ಆದ್ಯತೆ ನೀಡಬೇಕು. ರೈತರು ತಮ್ಮ ಮುಂದಿರುವ ಸವಾಲುಗಳನ್ನೇ ಅವಕಾಶಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳಬೇಕು.

ಹೀಗೆ ದೇಶದ ರೈತರಿಗೆ ಕಿವಿಮಾತು ಹೇಳಿದವರು ಪ್ರಧಾನಿ ನರೇಂದ್ರ ಮೋದಿ. ಭಾನುವಾರ ಇಲ್ಲಿ ರೈತರ ರ‌್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸರಕಾರ ರೈತರಿಗಾಗಿ ಕೈಗೊಂಡಿರುವ ಅನೇಕ ಯೋಜನೆಗಳನ್ನು ವಿವರಿಸಿದರು.

ರೈತ ಸಮುದಾಯದ ಕಲ್ಯಾಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಂದಿನ ಏಪ್ರಿಲ್‌ನಿಂದ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಆನ್-ಲೈನ್ ವೇದಿಕೆ ನಿರ್ಮಿಸಿಕೊಡುವ ಇರಾದೆ ಸರಕಾರಕ್ಕಿದೆ ಎಂದು ಹೇಳಿದರು.

'ಇಂದು ರೈತರ ಮುಂದೆ ಅನೇಕ ಸವಾಲುಗಳಿವೆ. ಹಾಗಂತ ಸವಾಲುಗಳಿಗೆ ಪರಿಹಾರವೇ ಇಲ್ಲವೇ? ರಾಜ್ಯಗಳು ಅನೇಕ ಯೋಜನೆಗಳನ್ನು ಕರಾರುವಕ್ಕಾಗಿ ಅನುಷ್ಠಾನಕ್ಕೆ ತಂದರೆ ಮತ್ತು ಈ ನಿಟ್ಟಿನಲ್ಲಿ ರೈತರಾದ ನೀವು ನನಗೆ ಸಹಾಯ ಮಾಡಿದರೆ ಈ ಸವಾಲುಗಳನ್ನೇ ಅವಕಾಶಗಳನ್ನಾಗಿ ಪರಿವರ್ತಿಸಲು ಸಾಧ್ಯವಿದೆ' ಎಂದು ಮೋದಿ ಹೇಳಿದರು.

'ಕೃಷಿ ವಲಯ ರಾಜ್ಯ ಸರಕಾರಗಳ ವ್ಯಾಪ್ತಿಗೆ ಬರುತ್ತದೆ. ಅಲ್ಲಿ ರೈತರ ಪ್ರಗತಿ ಕಾಣಬೇಕು. ಆದರೆ ರಾಜ್ಯಗಳು ಚಲ್ತಾ ಹೇ(ಮಾಡಿದರಾಯಿತು) ಮತ್ತು ಚುನಾವಣೆ ಬಂದಾಗ ನೋಡಿಕೊಳ್ಳೋಣ ಎಂಬ ಧೋರಣೆ ತಳೆದರೆ ರೈತರ ಪರಿಸ್ಥಿತಿ ದೇವರಿಗೇ ಪ್ರೀತಿಯಾಗುತ್ತದೆ. ದೇವರ ನಂತರ ಸಹಾಯ ಮಾಡುವವರು ಯಾರೂ ಇಲ್ಲ' ಎಂದು ಪ್ರಧಾನಿ ರೈತರ ಸ್ಥಿತಿಯನ್ನು ವಿಶ್ಲೇಷಿಸಿದರು.

2022ಕ್ಕೆ ರಾಷ್ಟ್ರ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿರುತ್ತದೆ. ಆ ಸಂದರ್ಭದಲ್ಲಿ ಇಡೀ ದೇಶದ ರೈತರ ಆದಾಯ ದುಪ್ಪಟ್ಟಾಗಬೇಕು. ಎಲ್ಲ ರಾಜ್ಯಗಳು ಕೃಷಿಗೆ ಪ್ರಾಮುಖ್ಯತೆ ನೀಡಬೇಕು. ಆಗ ನೋಡಿ ಬದಲಾವಣೆಯನ್ನು. ಅದಕ್ಕೆ ಬೇಕಾದ ಎಲ್ಲ ಮಾರ್ಗಸೂಚಿ ಸಿದ್ಧವಿದೆ. ಅದನ್ನು ಸಮರ್ಪಕವಾಗಿ ಜಾರಿಗೆ ತರಬೇಕು ಅಷ್ಟೇ ಈಗ ಇರುವ ದಾರಿ' ಎಂದು ಅವರು ವಿವರಿಸಿದರು.

ಕೃಷಿಯನ್ನು ಔದ್ಯೋಗಿಕ ಆದ್ಯತೆಯ ಕ್ಷೇತ್ರವನ್ನಾಗಿ ಮಾಡಬೇಕು. ಹಾಗಿದ್ದಾಗ ಮುಂದಿನ ತಲೆಮಾರಿನ ಜನ ಹೆಚ್ಚು ಕೃಷಿಯತ್ತ ಆಕರ್ಷಿತರಾಗುತ್ತಾರೆ. ಆಗ ದೇಶದ ಬೆನ್ನೆಲುಬಾಗಿರುವ ಕೃಷಿ. ತಯಾರಿಕೆ ಮತ್ತು ಸೇವಾ ಕ್ಷೇತ್ರಗಳು ಬಲಗೊಳ್ಳುತ್ತಾ ಸಾಗುತ್ತವೆ ಎಂದು ಮೋದಿ ಹೇಳಿದರು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>