Quantcast
Channel: VijayKarnataka
Viewing all articles
Browse latest Browse all 6795

ವಿದೇಶ ಕನಸು ನನಸಾಗಿಸುವ ‘ವೀಸಾ ದೇಗುಲ’

$
0
0

ಹೈದರಾಬಾದ್: ದಿನಗಟ್ಟಲೆ ಉರಿಬಿಸಿಲಲ್ಲಿ ನಿಂತರೂ ವೀಸಾ ಸಿಗೋದು ಮಾತ್ರ ಸಂದೇಹ. ದಾಖಲೆ ಸರಿಯಿಲ್ಲ, ಹೆಸರು ಹೊಂದಾಣಿಕೆಯಾಗುತ್ತಿಲ್ಲ, ತಂದೆ ಹೆಸರಿನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್, ಬರ್ತ್ ಸರ್ಟಿಫಿಕೇಟ್ ತನ್ನಿ... ಹೀಗೆ ನೂರೆಂಟು ಲೋಪ ಹುಡುಕಿ ವಾಪಸ್ ಕಳಿಸೋದು ಮಾಮೂಲಿ.

ಇದಕ್ಕೊಂದು ಸುಲಭ ಮಾರ್ಗೋಪಾಯ ಇಲ್ಲಿದೆ. ಚಿಲಕೂರು ಬಾಲಾಜಿ ದೇವಸ್ಥಾನವು ಈಚಿನ ದಿನಗಳಲ್ಲಿ 'ವೀಸಾ ದೇಗುಲ' ಎಂಬ ಖ್ಯಾತಿ ಗಳಿಸುತ್ತಿದೆ. ವೀಸಾಗಾಗಿ ಎಷ್ಟೇ ಅರ್ಜಿ ಸಲ್ಲಿಸಿದರೂ ಒಂದಲ್ಲ ಒಂದು ಕಂಟಕ ಎದುರಾಗುತ್ತಿದೆ ಎಂದು ಪರದಾಡುವವರು ಶ್ರೀನಿವಾಸನ ದರ್ಶನ ಪಡೆದರೆ ಇಷ್ಟಾರ್ಥ ನೆರವೇರುತ್ತದೆ ಎಂಬುದು ಭಕ್ತರ ನಂಬಿಕೆ.

500 ವರ್ಷಗಳ ಇತಿಹಾಸ ಹೊಂದಿರುವ ಈ ದೇಗುಲಕ್ಕೆ ವರ್ಷಕ್ಕೆ ಏನಿಲ್ಲವೆಂದರೂ ಒಂದು ಲಕ್ಷ ಭಕ್ತರು ಭೇಟಿ ನೀಡುತ್ತಾರೆ. ಬಾಲಾಜಿ ಇಷ್ಟಾರ್ಥ ನೆರವೇರಿಸುತ್ತಾನೆ ಎಂಬುದು ಜನರ ನಂಬುಗೆ. ಅದರಲ್ಲೂ ಪಾಸ್‌ಪೋರ್ಟ್ ಕಚೇರಿಯಲ್ಲಿ ವೀಸಾ ಅರ್ಜಿ ಸಲ್ಲಿಸುವ ಮುನ್ನ ಈ ದೇಗುಲಕ್ಕೆ ಬಂದು ಬೇಡಿಕೊಂಡರೆ ಯಾವುದೇ ಅಡೆತಡೆ ಇಲ್ಲದೆ ವೀಸಾ ಸಿಗುತ್ತದೆ ಎಂಬುದು ಭಕ್ತರ ವಿಶ್ವಾಸ.

ಇಷ್ಟಾರ್ಥ ನೆರವೇರಿದ ನಂತರ ದೇವಸ್ಥಾನಕ್ಕೆ ಹಣ, ದವಸ ಧಾನ್ಯ ಕೊಡಬೇಕಿಲ್ಲ. ವಾಪಸ್ ಬಂದು 108 ಪ್ರದಕ್ಷಿಣೆ ಹಾಕಿದರೆ ಸಾಕು.

ಹುಂಡಿಯೇ ಇಲ್ಲ...

ವೀಸಾ ಬೇಕಾದವರು ಬರುತ್ತಾರೆ ಎಂಬ ಕಾರಣಕ್ಕೆ ಈ ದೇಗುಲವೇನು ಹಣವಂತರಿಂದ ದುಡ್ಡು ಬಯಸುವುದಿಲ್ಲ. ಅಸಲಿಗೆ ವೀಸಾ ದೇಗುಲದಲ್ಲಿ ಹುಂಡಿಯೇ ಇಲ್ಲ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>