Quantcast
Channel: VijayKarnataka
Viewing all articles
Browse latest Browse all 6795

ನಿವೃತ್ತಿಗೆ ಸಿದ್ಧತೆ ಮಾಡದ ಉದ್ಯೋಗಿಗಳು

$
0
0

ಹೊಸದಿಲ್ಲಿ : ಉದ್ಯೋಗಿಗಳು ಎಂದ ಮೇಲೆ ನಿವೃತ್ತಿ ಸಹಜ. ಆದರೆ, ನಿವೃತ್ತಿ ನಂತರದ ಬದುಕಿಗೆ ಭಾರತೀಯ ಉದ್ಯೋಗಿಗಳು ಸಿದ್ಧಗೊಂಡಿಲ್ಲ. ಹೀಗಾಗಿ ಈ ಬದುಕು ಭಾರತೀಯರಿಗೆ ತ್ರಾಸದಾಯಕವಾಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ವಿಲ್ಲಿಸ್ ಟವರ್ಸ್ ವ್ಯಾಟ್ಸನ್ ಗ್ಲೋಬಲ್ ಬೆನಿಫಿಟ್ಸ್ ಆಟಿಟ್ಯೂಡ್ಸ್ ಸಮಿಕ್ಷೆಯಲ್ಲಿ ನಿವೃತ್ತಿ ನಂತರದ ಭಾರತೀಯ ಉದ್ಯೋಗಿಗಳ ಪರಿಸ್ಥಿತಿ ವ್ಯಕ್ತವಾಗಿದೆ. ''ವಯಸ್ಸು ಸವೆದಾಗ ಎದುರಾಗುವ ಅನಾರೋಗ್ಯ, ವೈದ್ಯಕೀಯ ವೆಚ್ಚಗಳು, ಮಕ್ಕಳ ಶಿಕ್ಷಣ ವೆಚ್ಚಗಳು ನಿವೃತ್ತ ಉದ್ಯೋಗಿಗಳಿಗೆ ಸವಾಲುಗಳಾಗಿ ನಿಂತಿವೆ. ಅಲ್ಲದೇ ಅವಿಭಕ್ತ ಕುಟುಂಬ ವ್ಯವಸ್ಥೆಯೂ ನಿವೃತ್ತರನ್ನು ದುರ್ಬಲರನ್ನಾಗಿಸುತ್ತಿದೆ,'' ಎಂದು ಸಮೀಕ್ಷೆ ಹೇಳಿದೆ.

''ಹಣದುಬ್ಬರದ ಒತ್ತಡ, ಹೆಚ್ಚುವ ಖರ್ಚುಗಳು ನಿವೃತ್ತರನ್ನು ಮೆತ್ತಗಾಗಿಸುತ್ತಿವೆ. ಇದಕ್ಕೆಲ್ಲ ಮಾನಸಿಕವಾಗಿ ಉದ್ಯೋಗಿಗಳು ಸಿದ್ಧತೆ ನಡೆಸದಿರುವುದೇ ಸಮಸ್ಯೆಗೆ ಕಾರಣ,'' ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

''ಉದ್ಯೋಗಿಗಳನ್ನು ನಿವೃತ್ತ ಜೀವನಕ್ಕೆ ಸಜ್ಜುಗೊಳಿಸುವ ಕೆಲಸವನ್ನು ಮಾಡಬೇಕಾಗಿದೆ. ಈ ಬಗ್ಗೆ ಚಿಂತನೆ ನಡೆಸದೇ ಹೋದರೆ ಸದ್ಯಕ್ಕಲ್ಲದಿದ್ದರೂ, ಮುಂದಿನ ಎರಡು ಮೂರು ದಶಕಗಳಲ್ಲಿ ನಿವೃತ್ತರ ಸ್ಥಿತಿ ಬಿಗಡಾಯಿಸಲಿದೆ. ಸೂಕ್ತ ಆದಾಯವಿಲ್ಲದೆ ನಿವೃತ್ತ ಉದ್ಯೋಗಿಗಳು ದೊಡ್ಡ ಸವಾಲುಗಳನ್ನು ಎದುರಿಸಬೇಕಾಗಬಹುದು,'' ಎಂದು ವಿಲ್ಲಿಸ್ ಟವರ್ಸ್‌ನ ವ್ಯಾಟ್ಸನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ನಾಥ್ ಅಭಿಪ್ರಾಯಪಟ್ಟಿದ್ದಾರೆ.

ಸವಾಲುಗಳೇನು?

ನಿವೃತ್ತರಾದಾಗ ಆದಾಯ ಕಡಿಮೆ, ಜವಾಬ್ದಾರಿಗಳು ಅಧಿಕ ಎನ್ನುವಂಥ ಸ್ಥಿತಿ ಭಾರತದಲ್ಲಿದೆ. ನಿವೃತ್ತ ಜೀವನದಲ್ಲಿ ಮಕ್ಕಳ ವಿವಾಹ, ಮನೆ ಖರೀದಿಗೆ ಹಣ ಖರ್ಚು ಮಾಡುವುದಲ್ಲದೇ, ವೈದ್ಯಕೀಯ ವೆಚ್ಚಗಳನ್ನೂ ಭರಿಸಬೇಕಾಗಿದೆ. ನಿವೃತ್ತ ಜೀವನದ ಬಗ್ಗೆ ಮೊದಲೇ ಯೋಚಿಸದ ಬಹುತೇಕ ಭಾರತೀಯ ಉದ್ಯೋಗಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ ಎನ್ನುತ್ತಿದೆ ಸಮೀಕ್ಷೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


BIG NEWS : ಶಾಲೆಗಳ ಪ್ರಥಮ ಮಾನ್ಯತೆ, ಮಾನ್ಯತೆ ನವೀಕರಣದ ಕುರಿತು ‘ಶಿಕ್ಷಣ ಇಲಾಖೆ’ಯಿಂದ...


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>