Quantcast
Channel: VijayKarnataka
Viewing all articles
Browse latest Browse all 6795

ದಿಲ್ಲಿ ಜನತೆ ಎಎಪಿಗೆ ಮನಸೋತಿದ್ದು ಇದೇ ದಿನ

$
0
0

ಹೊಸದಿಲ್ಲಿ: ದಿಲ್ಲಿಯಲ್ಲಿ ಅಧಿಕಾರಕ್ಕೆ ಬಂದು ವರ್ಷ ಆದ ಸಂದರ್ಭದಲ್ಲಿ ಆಮ್‌ ಆದ್ಮಿ ಪಕ್ಷ ಭಾನುವಾರ ಸಂಭ್ರಮಾಚರಣೆಗೆ ಸಜ್ಜಾಗಿದೆ.

'ಕಳೆದ ವರ್ಷ, ಈ ದಿನ, ದಿಲ್ಲಿ ಜನತೆ ಎಎಪಿಗೆ ಮನಸೋತರು. ಇದು ಗಾಢವಾದ ಅನುಬಂಧ, ಅಳಿಸಲಾಗದ್ದು,'ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ.

ಅವರ ಸರಕಾರದ ಸಾಧನೆಗಳ ವರದಿ ಮಂಡಸಲಿರುವ ಕೇಜ್ರಿವಾಲ್‌ ಹಾಗೂ ಅವರ ಸಂಪುಟದ ಸಚಿವರು ಎನ್‌ಡಿಎಂಸಿ ಕನ್ವೆಷನ್‌ ಸೆಂಟರ್‌ನಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ಫೋನ್‌ ಮೂಲಕ ಜನರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

'ದಿಲ್ಲಿ ಸರಕಾರದ ಬಗ್ಗೆ ಪ್ರಶ್ನೆಗಳಿದ್ದರೆ, ನೇರವಾಗಿ ನಾವು ಉತ್ತರಿಸಲಿದ್ದೇವೆ. ಬೆ.11ರಿಂದ ಮ.1 ರವರೆಗೆ 011-41501367, 41501383, 23346658 ಕರೆಮಾಡಿ,'ಎಂದು ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ.

ರಾಷ್ಟ್ರರಾಜಧಾನಿಯಲ್ಲಿ ಎಎಪಿ ರ‍್ಯಾಲಿ ಸಹ ಆಯೋಜಿಸಿದ್ದು, ಅಲ್ಲಿ ಹಲವು ಯೋಜನೆಗಳು ಘೋಷಣೆ ಆಗುವ ನಿರೀಕ್ಷೆ ಇದೆ.

ಈ ಮಧ್ಯೆ, ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ಭಾನುವಾರ ರಸ್ತೆಗಿಳಿದು ಎಎಪಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲು ಸಜ್ಜಾಗಿವೆ. ಬಿಜೆಪಿ ಈ ದಿನವನ್ನು 'ಪ್ರತಿಭಟನಾ ದಿನ' ಎಂದಿದ್ದರೆ, ಕಾಂಗ್ರೆಸ್‌ 'ಚಾಲ್ವಾ ದಿವಸ್‌' (ವಂಚನೆ ದಿವಸ) ಎಂದು ಕರೆದಿದೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>