Quantcast
Channel: VijayKarnataka
Viewing all articles
Browse latest Browse all 6795

ಪರೂಲ್ ಸಿನಿಮಾಗೆ ಇಬ್ಬರು ನಾಯಕರು

$
0
0

ಸಾಮಾನ್ಯವಾಗಿ ಇಬ್ಬರು ನಾಯಕಿಯರು ಇವರು ಸಿನಿಮಾದಲ್ಲಿ ಪರೂಲ್ ಯಾದವ್ ನಟಿಸಿದ್ದಿದೆ. ಇದೇ ಮೊದಲ ಬಾರಿಗೆ ಇಬ್ಬರು ನಾಯಕರ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಪರೂಲ್. ಹೀಗಾಗಿ ಸಹಜವಾಗಿಯೇ ಅವರಿಗೆ ಖುಷಿ ಆಗಿದೆ.

'ನಾನು ನಟಿಸಿದ ಬಹುತೇಕ ಸಿನಿಮಾಗಳಲ್ಲಿ ಒಬ್ಬರೇ ನಾಯಕರು. ಇಬ್ಬರು ಹೀರೋಯಿನ್ಸ್ ಇರುತ್ತಿದ್ದರು. ಆದರೆ, ಜೆಸ್ಸಿ ಸಿನಿಮಾದಲ್ಲಿ ಇಬ್ಬರು ನಾಯಕರು, ನಾನೊಬ್ಬಳೇ ಹಿರೋಯಿನ್. ಅದು ನಿಜಕ್ಕೂ ಹೊಸ ರೀತಿಯ ಅನುಭವ. ನನಗೇ ಜವಾಬ್ದಾರಿ ಜಾಸ್ತಿ ಅನ್ನುವಂತಹ ಪುಳಕ. ಜೆಸ್ಸಿಗಾಗಿ ನಾನು ಎದುರು ನೋಡುತ್ತೇನೆ' ಅಂದಿದ್ದಾರೆ.

ಅಂದ್ಹಾಗೆ ಜೆಸ್ಸಿ ಸಿನಿಮಾದಲ್ಲಿ ಧನಂಜಯ್ ಮತ್ತು ರಘು ಮುಖರ್ಜಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಶುದ್ಧ ಪ್ರೇಮಕತೆಯಲ್ಲಿ ಚಿತ್ರ ಮೂಡಿ ಬರುತ್ತಿದ್ದು, ಯಾರ ಜೀವನದಲ್ಲಿ ಬೇಕಾದರೂ ನಡೆದಿರಬಹುದಾದ ಪ್ರೇಮ ಪ್ರಕರಣ ಸಿನಿಮಾದಲ್ಲಿದೆ. ಅಲ್ಲದೇ ಮೂರು ಪ್ರಮುಖ ಪಾತ್ರಗಳ ಸುತ್ತ ನಡೆಯುವ ಕತೆ ಇದಾಗಿದೆ ಅನ್ನುವುದು ನಿರ್ದೇಶಕ ಮಾತು.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>