Quantcast
Channel: VijayKarnataka
Viewing all articles
Browse latest Browse all 6795

ಸ್ವಚ್ಛ ಭಾರತಕ್ಕಾಗಿ ತೈಲ ಮೇಲಿನ ಸೆಸ್ ಹೆಚ್ಚಳ?

$
0
0

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸಾದ ಸ್ವಚ್ಛ ಭಾರತ ಆಂದೋಲನಕ್ಕೆ ಹೆಚ್ಚಿನ ಅನುದಾನದ ಅಗತ್ಯವಿದ್ದು, ಇದಕ್ಕೆ ಈಗಾಗಲೇ ದೂರ ಸಂಪರ್ಕ ಸೇವೆಗಳ ಮೇಲೆ ಶೇ.0.5ರಷ್ಟು ಸೆಸ್ ವಿಧಿಸಲಾಗಿದೆ. ಇದು ಈಗಾಗಲೇ ಗ್ರಾಹಕರ ಹೊರೆ ಹೆಚ್ಚಿಸಿದ್ದು, ಇನ್ನು ಮುಂದೆ ಪೆಟ್ರೋಲ್, ಡೀಸೆಲ್ ಮೇಲೂ ಇದೇ ಕಾರಣಕ್ಕಾಗಿ ಸೆಸ್ ಸಂಗ್ರಹಿಸಲು ಸರಕಾರ ಚಿಂತಿಸುತ್ತಿದೆ.

ಶ್ರೀಸಾಮಾನ್ಯನ ಮೇಲಿನ ಹೊರೆ ಹೆಚ್ಚಿಸುವಂಥ ಕೇಂದ್ರ ಸರಕಾರದ ಇಂಥ ಯೋಜನೆಗಳ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.

ಈ ಕುರಿತು ಫೆಬ್ರವರಿಯಲ್ಲಿ ಮಂಡನೆಯಾಗುವ ಬಜೆಟ್‌ನಲ್ಲಿ ಪ್ರಕಟಣೆ ಹೊರಬೀಳುವ ನಿರೀಕ್ಷೆ ಇದೆ. ಇದು ಜಾರಿಯಾದರೆ, ಇಂಧನ ದರ ತುಸು ಹೆಚ್ಚಳವಾಗುತ್ತವೆ.

ಪೆಟ್ರೋಲ್, ಡೀಸೆಲ್, ದೂರ ಸಂಪರ್ಕ ಸೇವೆಗಳ ಮೇಲೆ ಶೇ.0.5ರಷ್ಟು ಸೆಸ್ ವಿಧಿಸಲು, ಸೇವಾ ತೆರಿಗೆಯನ್ನು ಶೇ.0.5ರಷ್ಟು ಹೆಚ್ಚಿಸಲು ಕೇಂದ್ರ ಚಿಂತನೆ ನಡೆಸಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

'ನೀತಿ ಆಯೋಗ ಈ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ. ಸಾಧ್ಯವಿರುವ ಎಲ್ಲ ಆಯ್ಕೆಗಳನ್ನು ಬಳಸಿಕೊಂಡು ಸ್ವಚ್ಛ ಭಾರತಕ್ಕೆ ಹೆಚ್ಚಿನ ಹಣವನ್ನು ಕ್ರೋಢೀಕರಿಸಲು ಸರಕಾರ ಆಲೋಚಿಸುತ್ತಿದೆ,' ಎಂದು ಅಧಿಕಾರಿಗಳು ಹೇಳಿದ್ದಾರೆ.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>