Quantcast
Channel: VijayKarnataka
Viewing all articles
Browse latest Browse all 6795

ಸಪ್ತಮ ಭಾವದ ದಾಂಪತ್ಯ

$
0
0

- ಎಂ.ವಿ.ಸತ್ಯನಾರಾಯಣ

ವಿವಾಹದ ನಂತರ ಪತಿ, ಪತ್ನಿಯರು ಚರ್ತುವಿಧ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷ ಸಾಧನೆಗೆ ಪ್ರಯತ್ನಿಸುವುದು ಸಹಜವಾಗಿದೆ. ಇದನ್ನೇ ವಿವಾಹದ ಸಮಯದ ಸಪ್ತಪದಿಯಲ್ಲಿ ವಿಶ್ಲೇಷಿಸುವುದಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗಂಡ, ಹೆಂಡಿರ ಸಂಬಂಧವನ್ನು ಲಗ್ನದಿಂದ ಸಪ್ತಮ ಭಾವದಿಂದ ತಿಳಿಯಬಹುದು. ಇದನ್ನು ಕಳತ್ರ ಭಾವ ಎಂದು ಕರೆಯಲಾಗಿದೆ. ಇಲ್ಲಿ ಸಪ್ತಮಾಧಿಪತಿಯ ಪ್ರಭಾವ ಅತಿ ಮುಖ್ಯವಾಗಿ ಗಣನೆಗೆ ಬರುವುದರಿಂದ ಸಪ್ತಮಾಧಿಪತಿಯು ದ್ವಾದಶ ಭಾವಗಳಲ್ಲಿ ಸ್ಥಿತನಾದಾಗ ಆಗುವ ಪರಿಣಾಮಗಳ ಮೇಲೆ ಪತಿ, ಪತ್ನಿಯರ ಸಂಬಂಧ ಅವಲಂಬಿಸಿರುತ್ತದೆ.

*ಸಪ್ತಮಾಧಿಪತಿಯು 1 ನೇ ಭಾವ (ಲಗ್ನ ಭಾವ)ದಲ್ಲಿದ್ದಾಗ ಪ್ರೀತಿ, ವಿಶ್ವಾಸದಿಂದ ನಡೆಯುವ ಪತ್ನಿ ದೊರಕಿ ಗಂಡ ಹೆಂಡಿರು ಅನ್ಯೋನ್ಯವಾಗಿರುತ್ತಾರೆ. ಶರೀರ ಸೌಖ್ಯವನ್ನು ಹೊಂದಿ ಸುಖ, ಸಂತೋಷದಿಂದ ಬಾಳುತ್ತಾರೆ.

*ಸಪ್ತಮಾಧಿಪತಿಯು 2 ನೇ ಭಾವದಲ್ಲಿದ್ದಾಗ ಪತ್ನಿಯು ಧನ ಸಂಪತ್ತನ್ನು ತರುವವಳಾಗಿರುತ್ತಾಳೆ. ವ್ಯಾಪಾರದಿಂದಲೂ ಲಾಭ, ಮದುವೆ ನಂತರ ಎಲ್ಲ ರೀತಿಯಲ್ಲೂ ಶುಭ.

*ಸಪ್ತಮಾಧಿಪತಿಯು 3 ನೇ ಭಾವದಲ್ಲಿದ್ದಾಗ ಬಂಧು ಬಾಂಧವರೊಡನೆ ಸ್ನೇಹ, ವಿಶ್ವಾಸ, ಪತ್ನಿಯು ರೂಪವಂತಳೂ, ಸಹಕಾರಿಯೂ ಆಗಿರುವಳು. ಬಂಧುಗಳ ಸಂಬಂಧದಲ್ಲೇ ವಿವಾಹವಾಗುವ ಸಂಭವ.

*ಸಪ್ತಮಾಧಿಪತಿಯು ಚತುರ್ಥ ಭಾವದಲ್ಲಿದ್ದಾಗ ಬುದ್ಧಿವಂತಳಾದ ಪತ್ನಿ, ವಿದ್ಯಾವಂತಳಾದ ಪತ್ನಿ, ಉದ್ಯೋಗಸ್ಥಳಾದ ಪತ್ನಿ ದೊರಕಿ, ಸುಖ ಸಂತೋಷದಿಂದ ಬಾಳ್ವೆ, ಭೂ ಆಸ್ತಿ, ವಾಹನವುಳ್ಳವರಾಗಬಹುದು.

*ಸಪ್ತಮಾಧಿಪತಿ ಪಂಚಮ ಭಾವದಲ್ಲಿದ್ದಾಗ, ಇಷ್ಟಪಟ್ಟು ಸಂಗಾತಿಯೊಡನೆ ವಿವಾಹವಾಗುವ ಸಂಭವ. ಪ್ರೇಮ ವಿವಾಹವೂ ಆಗಬಹುದು. ಒಳ್ಳೆಯ ಸಂತಾನವುಳ್ಳವರಾಗಬಹುದು. ಪೂರ್ವ ಪುಣ್ಯದ ಸುಕೃತವುಳ್ಳವರಾಗಬಹುದು.

*ಸಪ್ತಮಾಧಿಪತಿಯು ಷಷ್ಠ ಭಾವದಲ್ಲಿದ್ದಾಗ ಪತ್ನಿಯ ಆರೋಗ್ಯವು ಸಾಮಾನ್ಯವಾಗಿರುವುದಾಗಿದೆ. ವೈರತ್ವ ಉಂಟಾಗಬಹುದು. ವಾದ-ವಿವಾದಗಳು ಹುಟ್ಟಿಕೊಳ್ಳಬಹುದು.

*ಸಪ್ತಮಾಧಿಪತಿಯು ಸಪ್ತಮದಲ್ಲೇ ಅಂದರೆ 7 ನೇ ಭಾವದಲ್ಲಿದ್ದರೆ ಗಂಡ ಹೆಂಡಿರು ಕಳತ್ರ ಸೌಖ್ಯ ಹೊಂದಿ ಸಾಮರಸ್ಯದಿಂದ ಬಾಳುವರು. ಆರೋಗ್ಯವಂತರಾಗಿ, ಅದೃಷ್ಟವಂತರಾಗಿ ದಾಂಪತ್ಯ ಸೌಖ್ಯ ಹೊಂದುವರು.

*ಸಪ್ತಮಾಧಿಪತಿಯು ಅಷ್ಟಮದಲ್ಲಿದ್ದಾಗ ದಾಂಪತ್ಯ ಜೀವನದಲ್ಲಿ ಸುಖ, ಸಂತೋಷ ಕಡಿಮೆ. ಮಾತಿಗೆ ಮಾತು, ಪತಿ, ಪತ್ನಿಯರಲ್ಲಿ ಕಲಹ, ಕಷ್ಟ ನಷ್ಟ, ಮಾಂಗಲ್ಯಭಾಗ್ಯ, ಅನಿರೀಕ್ಷಿತ ಲಾಭ.

*ಸಪ್ತಮಾಧಿಪತಿಯು ನವಮದಲ್ಲಿದ್ದಾಗ ಪತಿ, ಪತ್ನಿಯರು ಅನ್ಯೋನ್ಯತೆಯಿಂದ ಬಾಳುವರು. ವಿವಾಹದ ನಂತರ ಭೋಗ ಭಾಗ್ಯ, ಸಂಪತ್ತು, ತೀರ್ಥ ಕ್ಷೇತ್ರಗಳ ಸಂದರ್ಶನ.

ಸಪ್ತಮಾಧಿಪತಿಯು ದಶಮದಲ್ಲಿದ್ದಾಗ ಯಶಸ್ಸು, ಧರ್ಮಪಾಲನೆ ಕರ್ಮ ಪಾಲನೆ. ಒಳ್ಳೆಯ ಕಾರ್ಯ, ಉದ್ಯೋಗದಿಂದ ಹಣ ಪ್ರಾಪ್ತಿ. ಕೀರ್ತಿ, ಪ್ರತಿಷ್ಠೆ.

*ಸಪ್ತಮಾಧಿಪತಿ ಏಕಾದಶದಲ್ಲಿದ್ದಾಗ, ಅನುರೂಪಳಾದ ಪತಿ, ಪತ್ನಿಯಿಂದ ಸಂಪತ್ತು ಲಾಭ. ವ್ಯಾಪಾರದಿಂದ ಲಾಭ. ಆರೋಗ್ಯ ಸುಖ ಬಾಳ್ವೆ.

*ಸಪ್ತಮಾಧಿಪತಿಯು ದ್ವಾದಶ ಭಾವದಲ್ಲಿದ್ದಾಗ, ಕಷ್ಟ ನಷ್ಟ ಸಾಮರಸ್ಯ ಕಡಿಮೆ. ಅನಾರೋಗ್ಯ, ಆಸ್ಪತ್ರೆ ವಾಸ, ತೊಂದರೆಗಳು ಅನಗತ್ಯ ಖರ್ಚು, ವಿವಾಹ ಜೀವನದಲ್ಲಿ ಕ್ಲೇಶ.

ಒಟ್ಟಿನಲ್ಲಿ ಇದಲ್ಲದೇ ಸಪ್ತಮಾಧಿಪತಿಯು ಬಲಾಢ್ಯನಾಗಿದ್ದರೆ, ಸ್ವಕ್ಷೇತ್ರ, ಉಚ್ಚ ಕ್ಷೇತ್ರ, ಮಿತ್ರಕ್ಷೇತ್ರ, ಕೋನ, ಕೇಂದ್ರಗಳಲ್ಲಿದ್ದರೆ, ಉತ್ತಮ ಸಂಬಂಧದ ಪತ್ನಿ ಹೊಂದಿ ವಿವಾಹ ಜೀವನ ಸುಖಮಯವಾಗಿ, ಗಂಡ ಹೆಂಡಿರು ಸುಖ ಸಂತೋಷದಿಂದ ಬಾಳುವರು.


Viewing all articles
Browse latest Browse all 6795

Trending Articles


Final chapter from Krishnamacharya's Yogasanagalu Part II Pranayam. Plus the...


ಶಾಕಿಂಗ್: ಸೆಕ್ಸ್ ವೇಳೆಯೇ ಉಸಿರುಗಟ್ಟಿ ಸಾವನ್ನಪ್ಪಿದ್ಲು ಯುವತಿ


ರಾಜ್ಯದ ‘ಗ್ರಾಮೀಣ’ಭಾಗದ ಜನತೆಗೆ ಗುಡ್ ನ್ಯೂಸ್ : ಇನ್ಮುಂದೆ ‘ಬಾಪೂಜಿ ಸೇವಾ’ಕೇಂದ್ರದಲ್ಲೇ...


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಹಾಸ್ಯ : ಪಿತೃ ಪಕ್ಷದಲ್ಲಿ ಭರ್ಜರಿ ಭೋಜನಕ್ಕೆ ಮುನ್ನ ಕಾಗೆಗಳ ಮೀಟಿಂಗು!


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಲವ್, ಸೆಕ್ಸ್, ದೋಖಾ: ಖಾಸಗಿ ವಿಡಿಯೋ ಮಾಡಿ ಮಹಿಳೆ ಮೇಲೆ ಹಲ್ಲೆ


ಮದುವೆ ನಂತರ ಬ್ಲೂ ಫಿಲಂ ನೋಡಿದರೆ ಏನಾಗುತ್ತೆ?


The Ashtanga Key - Surya Namaskar


How Pattabhi Jois learned Yoga from Krishnamacharya ( from Interviews )


ಚಿರತೆ –ಹೆಬ್ಬಾವಿನ ಫೈಟ್‌ ನಲ್ಲಿ ಗೆದ್ದಿದ್ಯಾರು….?


ಕಾರ್ಪೋರೇಟರ್ ಅವ್ವ ಮಾದೇಶ  ಜೀವಾವಧಿ ಶಿಕ್ಷೆಗೆ ಕಾರಣವಾದ ` ಜೋಡಿ ಕೊಲೆ’ಯ  ಇನ್ ಸೈಡ್ ಸ್ಟೋರಿ…


ಜು.25 ರಂದು ಮತ್ತೆ ದೆಹಲಿಗೆ ಸಿಎಂ ಮತ್ತು ಡಿಸಿಎಂ


ಚಿಕ್ಕ ಮಕ್ಕಳಿಗೆ ಸೆಕ್ಸ್ ಎಜುಕೇಷನ್ ಪಾಠ ಮಾಡಿದ ಯೋಗೀಶ್ ಮಾಸ್ಟರ್ –ವಿಡಿಯೋ ವೈರಲ್


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


BIG NEWS : ‘ಹಾಸ್ಟೆಲ್ ಹುಡುಗರು’ ಸಿನಿಮಾ ವಿವಾದ : ಕೋರ್ಟ್ ಗೆ ಹಾಜರಾಗಿ ದಾಖಲೆ ಸಲ್ಲಿಸಿದ...


Aadu Aata Aadu Kannada Songs Download


ವಚನಗಳಿಂದ ಸಂಗೀತ ಲೋಕ ಶ್ರೀಮಂತ



<script src="https://jsc.adskeeper.com/r/s/rssing.com.1596347.js" async> </script>