ಜನವರಿಯಲ್ಲಿ (29-1-16) ರಾಹು ಗ್ರಹವು ಸಿಂಹ ರಾಶಿಯನ್ನು ಪ್ರವೇಶಿಸಿ, ಗುರು ಗ್ರಹವನ್ನು ಕೂಡಿಕೊಳ್ಳುತ್ತದೆ. ಈ ಗುರು +ರಾಹು ಸಂಯೋಗ ಅತಿ ಕೆಟ್ಟ ಗ್ರಹ ಕೂಟ. ಅಂದರೆ ಇದನ್ನು ಜ್ಯೋತಿಷಿಗಳು ಉಚ್ಚರಿಸಲು ಹಿಂತೆಗೆಯುವಂತಹ 'ಗುರು ಚಾಂಡಾಲ ಯೋಗ.' ಪರಿಣಾಮ ಅತ್ಯಂತ ಶುಭ ಗ್ರಹವೆನಿಸಿರುವ 'ಗುರು' ಗ್ರಹವು ಸಹ ತನ್ನ ಶುಭತ್ವವನ್ನು ಕಳೆದುಕೊಂಡು ಉತ್ತಮ ಫಲಗಳನ್ನು ನೀಡಲು ಅಗತ್ಯವಾಗುವುದು. ಇಂತಹ ಗುರು-ರಾಹು ಗ್ರಹಗಳ ಮೇಲೆ ಶನಿ ಗ್ರಹವು ತನ್ನ ವಿಶೇಷವಾದ 10ನೇ ದೃಷ್ಟಿಯಿಂದ ವೀಕ್ಷಿಸುವುದರಿಂದ 11-8-16 ರಂದು ಗುರು ಗ್ರಹವು ಕನ್ಯಾ ರಾಶಿಯನ್ನು ಪ್ರವೇಶಿಸುವವರೆಗೂ ಅಶುಭ ಸೂಚನೆಗಳೇ ಮುಂದುವರಿಯುವುದು. ಗುರು ಬಲ, ಶುಭತ್ವ ಮುಂತಾದ ಶಬ್ದಗಳಿಗೆ ಅರ್ಥವಿಲ್ಲದಂತಾಗುತ್ತದೆ. 'ಗುರುವಿನ ಕಾರಕತ್ವವೆಲ್ಲವೂ ಕಮರಿ ಹೋಗುವುದು. ಹಣಕಾಸು, ಚಿನ್ನ, ವಿದೇಶಾಂಗ ವ್ಯವಹಾರ ಸ್ಟಾಕ್ ಮಾರುಕಟ್ಟೆ ವ್ಯವಹಾರ, ಬ್ಯಾಂಕ್ ವ್ಯವಹಾರಗಳು ಮುಂತಾದವುಗಳಲ್ಲಿ ಅನಿರೀಕ್ಷಿತ ಏರುಪೇರುಗಳು ಉಂಟಾಗಬಹುದು.
ಇಂಥ ದುರ್ದಿನಗಳಲ್ಲಿ ನಾವು ಮತ್ತೊಂದು ಅಪಾಯಕಾರಿ ಗ್ರಹ ಯೋಗವನ್ನು ಗಮನಿಸಬೇಕು. 20-2-16 ರಂದು 'ಕುಜ ಗ್ರಹವು' ವೃಶ್ಚಿಕ ರಾಶಿಯನ್ನು ಪ್ರವೇಶಿಸಿ ಶನಿ ಗ್ರಹವನ್ನು ಕೂಡಿಕೊಳ್ಳುವುದು ಅತ್ಯಂತ ಅಪಾಯಕಾರಿ ಸೂಚನೆ. ಕುಜನು ಅಗ್ನಿತತ್ತ್ವ, ಶನಿಯು ಭೂತತ್ತ್ವ ಹಾಗೂ ವಾಯು ತತ್ತ್ವ ಗ್ರಹ. ಈ ಗ್ರಹಗಳು ಗೋಚಾರದಲ್ಲಿ ಒಟ್ಟೊಟ್ಟಿಗೆ ಕೂಡಿದಾಗಲೆಲ್ಲ ಪೃಥ್ವಿಯ ಮೇಲೆ ಯುದ್ಧಬೀತಿ, ಅಗ್ನಿ ಸಂಬಂಧ ಪೀಡೆಗಳು, ಭೂಕಂಪನ, ಅಗ್ನಿ ಪರ್ವತ ಸ್ಪೋಟ (ವೃಶ್ಚಿಕ ರಾಶಿಯು ಜಲತತ್ತ್ವ ರಾಶಿಯಾಗಿದ್ದು ಸುನಾವಿಯೂ) ಸಂಭವಿಸಬಹುದು. ಅಲ್ಲದೆ ಹಿರಿಯ ರಾಜಕೀಯ ಮುಖಂಡರ ಮೃತ್ಯುವಿಗೂ ಈ ಗ್ರಹಕೂಟವು ಕಾರಣವಾಗಬಹುದು.
ಕುಜ ಗ್ರಹವು ಗೋಚಾರ ರೀತ್ಯಾ ಸಾಮಾನ್ಯವಾಗಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸಲು ತೆಗೆದುಕೊಳ್ಳುವ ಕಾಲ ಒಂದೂವರೆ ತಿಂಗಳು ಮಾತ್ರ. ಆದರೆ ಹೆಸರೇ ಸೂಚಿಸುವಂತೆ ಮುಂಬರಲಿರುವುದು 'ದುರ್ಮುಖಿ ನಾಮ ಸಂವತ್ಸರ.' ಅದರ ಪರಿಣಾವೋ ಏನೋ, 17-6-16 ರಂದು ಕುಜ ಗ್ರಹವು ವಕ್ರ ಗತಿಯಲ್ಲಿ ಚಲಿಸಿ 12-7-16 ರಂದು ಮತ್ತೆ ವೃಶ್ಚಿಕ ರಾಶಿಯನ್ನು ಪ್ರವೇಶಿಸಿ, 18-9-16 ರವರೆಗೆ ಶನಿ ಮಹಾತ್ಮರ ಜತೆಯಲ್ಲಿ ಸಮರಾವಸ್ಥೆಯನ್ನು ಉಂಟು ಮಾಡುತ್ತಾನೆ. ಈ ಸುದೀರ್ಘ ಚಲನೆಯನ್ನೇ ಜ್ಯೋತಿಷ್ಯದಲ್ಲಿ 'ಕುಜ ಸ್ಥಂಭನ' ಎನ್ನುತ್ತಾರೆ. ವ್ಯಕ್ತಿಯ ಜಾತಕದಲ್ಲಿ ಲಗ್ನಾತ್ ಅತ್ಯುತ್ತಮವಾದ ದೆಸೆ-ಭುಕ್ತಿಗಳನ್ನು ಹೊಂದಿಲ್ಲದೇ ಹೋದಲ್ಲಿ ವ್ಯತಿರಿಕ್ತ ಪರಿಣಾಮ ತಪ್ಪದು. ಮತ್ತೊಂದು ವಿಶೇಷವೆಂದರೆ ಅತಿಕಾಯಗಳಾದ ಗುರು-ಶನಿ ಗ್ರಹಗಳನ್ನೊಳಗೊಂಡು ಸರ್ವ ಗ್ರಹಗಳು ಭಚಕ್ರದ ದಕ್ಷಿಣ ಪಥದಲ್ಲಿ ಸಂಚರಿಸುವುದು, ಇದು ಭೂಮಿಯ ಮೇಲೆ ಅಸಮತೋಲನವನ್ನು ಉಂಟು ಮಾಡುವುದಿಲ್ಲವೇ?
ಹಿರಿಯ ಮಠಾಧೀಶರ ಸಂಕಲ್ಪಗಳಿಂದ 'ಅತಿ ರುದ್ರ ಮಹಾಯಾಗ, ಶತಚಂಡಿಕಾ ಯಾಗ, ಮಹಾ ಮೃತ್ಯುಂಜಯ ಹೋಮಗಳು ಸಾರ್ವಜನಿಕವಾಗಿ ನೆರವೇರಬೇಕು.
ವೈಯಕ್ತಿಕವಾಗಿ ಮೃತ್ಯುಂಜಯ ಹೋಮ, ಶನಿ ಸ್ತೋತ್ರ, ರಾಹು ಸ್ತೋತ್ರ, ದುರ್ಗಾ ಜಪ-ಹೋಮ ಮೊದಲಾದವುಗಳನ್ನು ಅಗತ್ಯವಾಗಿ ಆಚರಿಸತಕ್ಕದ್ದು.
- ಡಿ..ವಿ.ಸುಬ್ಬಣ್ಣ