Quantcast
Channel: VijayKarnataka
Viewing all articles
Browse latest Browse all 6795

ಕೊಳೆಗೇರಿ ನಿವಾಸಿಗಳಿಗೆ ಬಂಪರ್‌ ಕೊಡುಗೆ; 71 ಸಾವಿರ ಮನೆಗಳಿಗೆ ಉಚಿತ ನೀರು

$
0
0

ಬೆಂಗಳೂರು: ನಗರದ ಕೊಳೆಗೇರಿ ನಿವಾಸಿಗಳಿಗೆ ಬಜೆಟ್‌ನಲ್ಲಿ ಬಂಪರ್‌ ಕೊಡುಗೆ ನೀಡಲಾಗಿದೆ. ಕೊಳೆಗೇರಿಗಳಲ್ಲಿ ವಾಸಿಸುವ 71,000 ಮನೆಗಳಿಗೆ ಉಚಿತ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಜತೆಗೆ ಕೊಳೆಗೇರಿ ನಿವಾಸಿಗಳ 24.5 ಕೋಟಿ ರೂ. ಬಾಕಿ ಬಿಲ್‌ ಮನ್ನಾ ಮಾಡುವುದಾಗಿ ಸರಕಾರ ಘೋಷಿಸಿದೆ.

ನಗರದಲ್ಲಿ 2,000 ಕೊಳೆಗೇರಿಗಳಿದ್ದು, ಇದರಲ್ಲಿ 30/20 ಅಳತೆ ನಿವೇಶನದಲ್ಲಿ ವಾಸಿಸುತ್ತಿರುವವರಿಗೆ ಪ್ರತಿ ತಿಂಗಳು 10,000 ಲೀಟರ್‌ ನೀರನ್ನು ಉಚಿತವಾಗಿ ನೀಡಲಾಗುತ್ತದೆ. 10 ಸಾವಿರ ಲೀಟರ್‌ಗೆ 130 ರೂ. ದರವಿದೆ. 71,000 ನಿವಾಸಿಗಳಿಗೆ ಉಚಿತ ನೀರು ನೀಡಲು ಪ್ರತಿ ತಿಂಗಳು 92.30 ಲಕ್ಷ ರೂ. ಖರ್ಚಾಗಲಿದೆ.

ಉಚಿತ ನೀರು ಕೊಡಲು ಪ್ರತಿ ತಿಂಗಳ ಲೆಕ್ಕಾಚಾರದಲ್ಲಿ 1 ಕೋಟಿ ರೂ. ನೀಡಬೇಕು ಎಂದು ಜಲಮಂಡಳಿ ರಾಜ್ಯ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಹಾಗೆಯೇ ಬಾಕಿ ಬಿಲ್‌ ಮನ್ನಾ ಸೇರಿ ಒಟ್ಟು 35.71 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ತಿಳಿಸಲಾಗಿದೆ. ಸರಕಾರದಿಂದ ಈ ಪೂರ್ಣ ಮೊತ್ತ ಜಲಮಂಡಳಿಗೆ ದೊರೆಯಲಿದ್ದು, ಉಳಿದ ಮೊತ್ತವನ್ನು ಜಲಮಂಡಳಿ ತನ್ನ ಆದಾಯದಿಂದ ಭರಿಸಬೇಕಿದೆ.

''ಈ ವರ್ಷದಿಂದಲೇ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. ಕೊಳೆಗೇರಿ ನಿವಾಸಿಗಳು 10 ಸಾವಿರ ಲೀಟರ್‌ಗಿಂತ ಹೆಚ್ಚು ನೀರು ಬಳಸಿದರೆ ಮಾತ್ರ, ಆ ಹೆಚ್ಚುವರಿ ನೀರಿನ ಬಿಲ್‌ ಪಡೆಯಲಾಗುತ್ತದೆ,'' ಎಂದು ಜಲಮಂಡಳಿ ಪ್ರದಾನ ಮುಖ್ಯ ಎಂಜಿನಿಯರ್‌ ಕೆಂಪರಾಮಯ್ಯ ತಿಳಿಸಿದ್ದಾರೆ.

ಇತರೆ ಘೋಷಣೆಗಳು

* ನಗರದಲ್ಲಿ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಶೇ.43.7 ರಷ್ಟಿದ್ದು, 2018 ರ ಅಂತ್ಯಕ್ಕೆ ಶೇ.40 ಕ್ಕೆ ಇಳಿಸುವ ಗುರಿ. ಸದ್ಯಕ್ಕೆ ನಾಲ್ಕು ವಿಭಾಗಗಳಲ್ಲಿ ಯುಎಫ್‌ಡಬ್ಲ್ಯು ಯೋಜನೆ ನಡೆಯುತ್ತಿದ್ದು, ಹೊಸದಾಗಿ ಮೂರು ವಿಭಾಗಗಳಿಗೆ ವಿಸ್ತರಿಸಲಾಗುತ್ತದೆ.

* 110 ಹಳ್ಳಿಗಳಿಗೆ 1,886 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಪೂರೈಸುವ ಯೋಜನೆಗೆ ಏಪ್ರಿಲ್‌ನಲ್ಲಿ ಚಾಲನೆ ದೊರೆಯಲಿದ್ದು, ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.

* ಕಾವೇರಿ 5 ನೇ ಹಂತದ ಯೋಜನೆ ಮತ್ತು 110 ಹಳ್ಳಿಗಳಿಗೆ ಒಳಚರಂಡಿ ನಿರ್ಮಿಸುವ ಕಾಮಗಾರಿಗೆ ಈ ವರ್ಷ ಚಾಲನೆ ಸಿಗಲಿದೆ. ಜೈಕಾ ಸಾಲದ ಜತೆಗೆ ಒಟ್ಟು 5,052 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಕಾವೇರಿ ನದಿಯಿಂದ 775 ಎಂಎಲ್‌ಡಿ ನೀರು ಬೆಂಗಳೂರಿಗೆ ಲಭ್ಯವಾಗಲಿದೆ.

-ಮೆಗಾ ಸಿಟಿ ಯೋಜನೆಯಡಿ 1,209 ಕೋಟಿ ರೂ. ವೆಚ್ಚದಲ್ಲಿ 440 ಎಂಎಲ್‌ಡಿ ಸಾಮರ್ಥ್ಯ‌ದ 4 ಎಸ್‌ಟಿಪಿ ಮತ್ತು ಅಮೃತ್‌ ಯೋಜನೆಯಡಿ 129 ಕೊಟಿ ರೂ. ವೆಚ್ಚದಲ್ಲಿ 75 ಎಂಎಲ್‌ಡಿ ಸಾಮರ್ಥ್ಯ‌ದ 5 ಎಸ್‌ಟಿಪಿ ನಿರ್ಮಾಣಗೊಳ್ಳಲಿದೆ. ಸದ್ಯಕ್ಕೆ ನಗರದಲ್ಲಿ ಒಟ್ಟು 721 ಎಂಎಲ್‌ಡಿ ಸಾಮರ್ಥ್ಯ‌ದ ಎಸ್‌ಟಿಪಿಗಳಿದ್ದು, ಹೊಸ ಎಸ್‌ಟಿಪಿಗಳಿಂದ ಎಂಎಲ್‌ಡಿ ಸಾಮರ್ಥ್ಯ‌ 1,576 ಕ್ಕೆ ಹೆಚ್ಚಲಿದೆ. 2020 ರ ವೇಳೆಗೆ ಎಸ್‌ಟಿಪಿ ನಿರ್ಮಾಣ ಕಾಮಗಾರಿ ಮುಗಿಯಲಿದೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>