ಬೆಂಗಳೂರು: 'ನಮ್ಮ ಮೆಟ್ರೊ' ಒಂದನೇ ಹಂತದ ಪೂರ್ಣ ಮಾರ್ಗವನ್ನು ಏಪ್ರಿಲ್‌ನಲ್ಲಿ ಪೂರ್ಣಗೊಳಿಸಲಾಗುವುದು ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ ವಾಣಿಜ್ಯ ಸಂಚಾರವನ್ನು ಏಪ್ರಿಲ್‌ನಲ್ಲಿ ಆರಂಭಿಸುವ ಕುರಿತು ಯಾವುದೇ ಘೋಷಣೆಯಾಗಿಲ್ಲ. ಮೊದಲ ಹಂತದಲ್ಲಿ ಪೀಣ್ಯ ನಾಗಸಂದ್ರದಿಂದ ಕೋಣನಕುಂಟೆ ಸಮೀಪದ ಯಲಚೇನಹಳ್ಳಿ ಮಾರ್ಗದ ಪೂರ್ಣ ಸಂಚಾರ ಏಪ್ರಿಲ್‌ನಲ್ಲಿ ಆರಂಭಗೊಳ್ಳಲಿದೆ ಎಂದು ಈಗಾಗಲೇ ಘೋಷಿಸಲಾಗಿದೆ. ಆದರೆ ರೈಲು ಸಂಚಾರ ಸಾರ್ವಜನಿಕರಿಗೆ ಮುಕ್ತವಾಗುವುದೇ ಎಂಬ ಸ್ಪಷ್ಟತೆ ಇಲ್ಲ. *ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರಂವರೆಗೆ 17 ಕಿ.ಮೀ. ಉದ್ದದ ಮಾರ್ಗವನ್ನು 4,200 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. * ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರದ ಕೇಂದ್ರ ಭಾಗಕ್ಕೆ ಸಂಪರ್ಕ ಕಲ್ಪಿಸುವ 3ನೇ ಹಂತದ ಯೋಜನೆ ಸಾಧ್ಯತಾ ವರದಿ ಪೂರ್ಣಗೊಂಡಿದೆ. ಆದರೆ ಮಾರ್ಗವನ್ನು ಇನ್ನೂ ಅಂತಿಮಗೊಳಿಸಿಲ್ಲ. * 2 ನೇ ಹಂತದಲ್ಲಿ 72 ಕಿ.ಮೀ. ಉದ್ದದ ಮಾರ್ಗದ ಕಾಮಗಾರಿಯನ್ನು 26,405 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಯಲಚೇನಹಳ್ಳಿ-ಅಂಜನಾಪುರ, ಮೈಸೂರು ರಸ್ತೆ-ಕೆಂಗೇರಿ ವಿಸ್ತರಣಾ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ.
↧
ನಮ್ಮ ಮೆಟ್ರೊ ವಾಣಿಜ್ಯ ಸಂಚಾರ ಯಾವಾಗ ?
↧