ಸೈಕಲ್ ಬಾಡಿಗೆ ಹೇಗೆ ? ನಗರದ ನಾನಾ ಕಡೆ ಬಾಡಿಗೆ ಸೈಕಲ್ ಹಬ್‌ಗಳನ್ನು (ಕೇಂದ್ರ)ತೆರೆಯಲಾಗುತ್ತದೆ. ಪ್ರವಾಸಿಗರು ಮತ್ತು ಸಾರ್ವಜನಿಕರು ಆ್ಯಪ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಅಥವಾ ಕೇಂದ್ರಗಳಿಗೇ ಹೋಗಿ ನಿಗದಿತ ಹಣ ನೀಡಿ ದಾಖಲಿಸಿಕೊಳ್ಳಬಹುದು. ನೋಂದಾಯಿಸಿದವರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತದೆ. ಸೈಕಲ್ ಹಬ್‌ಗಳಿಗೆ ಹೋಗಿ ಸ್ಮಾರ್ಟ್ ಕಾರ್ಡ್ ರೀಡರ್‌ಗಳ ಮೂಲಕ ಬೇಕಾದ ಸೈಕಲ್ ತೆಗೆದುಕೊಂಡು ಹೋಗಬಹುದು. ಗಂಟೆ ಲೆಕ್ಕದಲ್ಲಿ ಬಾಡಿಗೆ ಕಟ್ಟಾಗುತ್ತದೆ. ಯಾವುದೇ ಹಬ್‌ನಿಂದ ಪಡೆದ ಸೈಕಲನ್ನು ಬೇರೆ ಹಬ್‌ನಲ್ಲಿ ನಿಲ್ಲಿಸಿ ಹೋಗಬಹುದು. ಸ್ಮಾರ್ಟ್‌ಕಾರ್ಡ್ ಮೂಲಕವೇ ಇಡೀ ವ್ಯವಹಾರ ನಡೆಯುತ್ತದೆ. ಹಬ್‌ಗಳಲ್ಲಿ ಸಿಬ್ಬಂದಿ ಇರುವುದಿಲ್ಲ. ಪರಿಸರ ಸ್ನೇಹಿ ಯೋಜನೆ ಇದಾಗಿರುವುದರಿಂದ ಇದಕ್ಕೆ ಉತ್ತೇಜನ ನೀಡಲು ಮೊದಲ ಒಂದು ಗಂಟೆಗೆ ಬಾಡಿಗೆ ಇರುವುದಿಲ್ಲ. ನಮ್ಮ ಕ್ಯಾಂಟೀನ್‌ನಲ್ಲಿ ಏನೇನು ಸಿಗುತ್ತೆ ? 5 ರೂಪಾಯಿಗೆ ಬೆಳಗಿನ ತಿಂಡಿ, 10ರೂ ಗೆ ಮಧ್ಯಾಹ್ನ ಮತ್ತು ರಾತ್ರಿ ಊಟ ಸಿಗುವ 'ನಮ್ಮ ಕ್ಯಾಂಟೀನ್' ಬಿಬಿಎಂಪಿ ಮೂಲಕ ನಿರ್ವಹಿಸಲ್ಪಡುತ್ತವೆ. ಇಡ್ಲಿ-ಸಾಂಬಾರ್, ಚಿತ್ರಾನ್ನ, ಅನ್ನ ಸಾಂಬಾರ್, ಚಪಾತಿ ಮತ್ತು ಪಲಾವ್, ಮೊಸರನ್ನ ಸಾಮಾನ್ಯವಾಗಿ ಇರುತ್ತದೆ. ಒಂದು ಇಡ್ಲಿಗೆ ಅಂದಾಜು 1-2 ರೂ , ಪ್ಲೇಟ್ ಇಡ್ಲಿಗೆ 5 ರೂ, ಸಾಮಾನ್ಯವಾಗಿ ಹೊಟ್ಟೆ ತುಂಬುವ ಊಟಕ್ಕೆ 10ರೂ ಇರುತ್ತದೆ. ರೈತರು ಬೆಳೆದ ತರಕಾರಿ, ಸೊಪ್ಪು ಎಲ್ಲವೂ ನೇರವಾಗಿ 'ನಮ್ಮ ಕ್ಯಾಂಟೀನ್'ಗಳಿಗೆ ಅಥವಾ ಎಪಿಎಂಸಿ, ಹಾಪ್‌ಕಾಮ್ಸ್ ಮೂಲಕ ಸರಬರಾಜಾಗುತ್ತದೆ. ಗ್ರಾಮೀಣ ಭಾಗಗಳಿಂದ ಬರುವ ರೈತರು ಇಲ್ಲೇ ಹೊಟ್ಟೆ ತುಂಬ ಊಟ ಮಾಡಿಕೊಂಡು ಹೋಗಬಹುದು. ಲಾಭ ರಹಿತವಾಗಿ ನಡೆಸುವ ಹೋಟೆಲ್ ವ್ಯವಸ್ಥೆ ಇದು. ಚೆನ್ನೈನಲ್ಲಿ ಭಾನುವಾರ ಹೊರತುಪಡಿಸಿ ಉಳಿದೆಲ್ಲಾ ದಿನವೂ ಕಾರ್ಯಾನಿರ್ವಹಿಸುತ್ತವೆ. ಬೆಂಗಳೂರಿನಲ್ಲಿ ಭಾನುವಾರವೂ ತೆರೆದಿರುತ್ತದೆಯೇ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಎಫ್‌ಜಿ-1 ಸೆಕ್ಯುರಿಟಿ ಪೋಲ್ ಎಂದರೇನು ? ಬೆಂಗಳೂರು ಕೇಂದ್ರ ಕಾರಾಗೃಹ ಸೇರಿದಂತೆ 8 ಕೇಂದ್ರ ಕಾರಾಗೃಹಗಳಿಗೆ ಎಫ್‌ಜಿ-1 ಸೆಕ್ಯುರಿಟಿ ಪೋಲ್ ಖರೀದಿಸುವುದಾಗಿ ಬಜೆಟ್‌ನಲ್ಲಿ ಘೋಷಣೆಯಾಗಿದೆ. ಸುಮಾರು 8 ಅಡಿ ಎತ್ತರದ ಈ ಕಂಬದ ಪಕ್ಕದ ಹಾದು ಹೋದರೆ ದೇಹದ ಯಾವುದೇ ಭಾಗದಲ್ಲಿ ಮೊಬೈಲ್ ಅಥವಾ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಚ್ಚಿಟ್ಟುಕೊಂಡಿದ್ದರೂ ಅದು ಅಲಾರಂ ಮಾಡುತ್ತದೆ. ಸಾಮಾನ್ಯ ಮೆಟಲ್ ಡಿಟೆಕ್ಟರ್‌ಗಳಲ್ಲಿ ಪತ್ತೆಯಾಗದ ವಸ್ತು ಮತ್ತು ಸಲಕರಣೆಗಳನ್ನು ಪತ್ತೆಹಚ್ಚುವುದರ ಜತೆಗೆ ಹಲವು ಬಗೆಯ ಸುರಕ್ಷತೆ ಮತ್ತು ಭದ್ರತೆಗೆ ಈ ಪೋಲ್ ನೆರವಾಗುತ್ತದೆ. ಇದಲ್ಲದೆ ಕೇಂದ್ರ ಮಹಿಳಾ ಕಾರಾಗೃಹದ ಬೇಡಿಕೆಗೆ ತಕ್ಕಂತೆ ಹೊಸ ಬ್ಯಾರಕ್‌ಗಳ ನಿರ್ಮಾಣವನ್ನೂ ಮೂರನೇ ಹಂತದಲ್ಲಿ ಕೈಗೊಳ್ಳಲಾಗುತ್ತದೆ. ಈಗಾಗಲೇ ಎರಡು ಹಂತದ ಕಾಮಗಾರಿ ಮುಗಿದಿದೆ.
↧
ಬಾಡಿಗೆಗೆ ದೊರೆಯುತ್ತವೆ ಸೈಕಲ್‌ಗಳು
↧