Quantcast
Channel: VijayKarnataka
Viewing all articles
Browse latest Browse all 6795

2ನೇ ಹಂತಕ್ಕೆ ಲಗ್ಗೆಯಿಟ್ಟ ಸಾನಿಯಾ ಜೋಡಿ

$
0
0

ಇಂಡಿಯನ್ ವೇಲ್ಸ್: ಇಲ್ಲಿ ನಡೆಯುತ್ತಿರುವ ಬಿಎನ್‌ಪಿ ಪ್ಯಾರಿಬಸ್ ಓಪನ್ ಟೆನಿಸ್ ಟೂರ್ನಮೆಂಟ್‌ನ ಮಹಿಳಾ ಡಬಲ್ಸ್ ವಿಭಾಗದಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ಜೆಕ್ ಗಣರಾಜ್ಯದ ಬಾರ್ಬೊರ ಸ್ಟ್ರೇಕೊವಾ ಜೋಡಿ ಎರಡನೇ ಹಂತಕ್ಕೆ ಲಗ್ಗೆಯಿಟ್ಟಿದ್ದಾರೆ.

ಮೊದಲ ಹಂತದ ಹಣಾಹಣಿಯಲ್ಲಿ ಜರ್ಮನಿ-ಲ್ಯಾಟ್ವಿಯಾದ ಜೋಡಿ ಜೂಲಿಯಾ ಜಾರ್ಜ್ ಹಾಗೂ ಜೆಲೆನಾ ಒಸ್ಟಾಪೆಂಕೊ ಜೋಡಿಯನ್ನು 6-3, 6-4ರ ನೇರ ಅಂತರದಲ್ಲಿ ಮಣಿಸಿದ ಸಾನಿಯಾ ಜೋಡಿ ನಗು ಮುಖವನ್ನು ಬೀರಿತ್ತು.

ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕಿತರಾದ ಸಾನಿಯಾ ಜೋಡಿ ಒಂದು ತಾಸು 15 ನಿಮಿಷಗಳ ಅವಧಿಯಲ್ಲಿ ಎದುರಾಳಿಯನ್ನು ಮಣಿಸಿತ್ತು. ಇದೀಗ ನಡೆಯಲಿರುವ ದ್ವಿತೀಯ ಹಂತದ ಪಂದ್ಯದಲ್ಲಿ ಇಟಲಿಯ ಸಾರಾ ಇರಾನಿ ಹಾಗೂ ಪೊಲೆಂಡ್‌ನ ಅಲಿಕ್ಜಾ ರೊಸೋಲ್ಕಾ ಜೋಡಿಯ ಸವಾಲನ್ನು ಎದುರಿಸಲಿದ್ದಾರೆ.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>