ಕೊಡೇಕಲ್: ಇತ್ತೀಚಿಗೆ ನಡೆದ ನೀರಾವರಿ ಸಲಹಾ ಸಮಿತಿ (ಐಸಿಸಿ) ನಿರ್ಣಯದಂತೆ ಮಾರ್ಚ್ 28 ವರೆಗೆ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲಾಗುವುದು. ಅದರಲ್ಲಿ ಯಾವೂದೇ ಗೊಂದಲ ಬೇಡ. ಎರಡೂ ರಾಜ್ಯಗಳ ಒಪ್ಪಂದಂತೆ ಮಹಾರಾಷ್ಟ್ರ ಬ್ಯಾರೇಜ್‌ಗಳಿಗೆ ನೀರು ಹರಿಸುವುದು ಅನಿವಾರ್ಯ ಎಂದು ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು. ಸಮೀಪದ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಭಾನುವಾರ ಭೇಟಿ ನೀಡಿ,ಲಭ್ಯವಿರುವ ನೀರಿನ ಸಂಗ್ರಹ ಬಗ್ಗೆ ನಿಗಮದ ಅಧೀಕ್ಷ ಕ ಅಭಿಯಂತರ ವೀರಣ್ಣ ನಗರೂರು ಮತ್ತಿತರ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಉಭಯ ರಾಜ್ಯಗಳ ಒಪ್ಪಂದದಂತೆ ನೀರು ಕೊಡಬೇಕು. ಸರಕಾರ ಮಟ್ಟದಲ್ಲಿ ನಿರ್ಣವಾಗಿದೆ, ಅದಕ್ಕೆ ಸಮ್ಮತಿ ಇದೆ ಎಂದರು. ಮಹಾರಾಷ್ಟ್ರ ಬ್ಯಾರೇಜ್‌ಗಳಿಗೆ ನಾವು ನೀರು ಕೊಡುತ್ತೇವೆ ಹಾಗೂ ಮಹಾರಾಷ್ಟ್ರದ ಕೃಷ್ಣಾ ನದಿ ಬ್ಯಾರೇಜ್‌ಗಳಿಂದ ರಾಜ್ಯದ ಗಡಿ ಜಿಲ್ಲೆಗಳಿಗೆ 2 ಟಿಎಂಸಿ ನೀರು ಹರಿಸಬೇಕು ಎಂಬ ಸಹಮತವಿದೆ. ಈ ಕುರಿತು ನೀರಾವರಿ ಸಚಿವರು ಹೇಳಿದ್ದಾರೆ. ಕುಡಿಯುವ ನೀರಿಗಾಗಿ ಸರಕಾರಗಳ ಮಧ್ಯ ಇಂತಹ ಒಪ್ಪಂದಗಳು ನಡೆಯುತ್ತವೆ ಎಂದು ತಿಳಿಸಿದರು. ಸುರಪುರ ತಾಲೂಕಿನ ಅಚ್ಚುಕಟ್ಟು ಭಾಗದ ರೈತರ ಕೊನೆ ಜಮೀನುಗಳಿಗೆ ಕಾಲುವೆ ನೀರು ಸಮರ್ಪಕವಾಗಿ ತಲುಪುತ್ತಿಲ್ಲ ಎಂಬ ದೂರು ಮೊದಲಿನಿಂದಲೂ ಇದೆ. Ü ರೈತ ಹಿತ ಕಾಪಾಡಲು ಬದ್ಧರಾಗಿದ್ದೇವೆ. ಈಗಾಗಲೇ ಸಲಹಾ ಸಮಿತಿಯ ನಿರ್ಣಯದಂತೆ ಮಾ.2 ರಿಂದ ವಾರಾಬಂದಿ ಪದ್ಧತಿಯಲ್ಲಿ ನೀರು ಹರಿಸಲು ಪ್ರಾರಂಭಿಸಲಾಸಲಾಗಿದೆ. ಮಾ.13 ರವರೆಗೆ ಹರಿಸಲಾಗುತ್ತದೆ. ಮಾ.14 ರಿಂದ 25 ವರೆಗೆ ನೀರು ಸ್ಥಗಿತಗೊಳಿಸಿ ನಂತರದಲ್ಲಿ ಮಾ.28 ರವರೆಗೆ ನೀರು ಹರಿಸುವಂತೆ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮುಖ್ಯ ಕಾಲುವೆಯಲ್ಲಿ 10 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿರುವ ಬಗ್ಗೆ ನೀರಿನ ಪ್ರಮಾಣವನ್ನು ವೀಕ್ಷ ಣೆ ಮಾಡಿದರು.ಎಡದಂಡೆ ಮುಖ್ಯ ಕಾಲುವೆಗೆ ಅಳವಡಿಸಲಾದ ಗೇಜ್‌ನ ತೊಟ್ಟಿಲು ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಕಾಲುವೆಯಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣವನ್ನು ಪರಿಶೀಲಿಸಿದರು. ಮುಖಂಡರಾದ ಸೂಲಪ್ಪ ಕಮತಗಿ, ವೆಂಕೋಬ ಸಾಹುಕಾರ, ನಿಗಮದ ಅಧಿಕಾರಿಗಳಾದ ವೀರಣ್ಣ ನಗರೂರು, ಸಿ.ಎಸ್.ವಿಶ್ವನಾಥ, ರಾಮನಗೌಡ ಹಳ್ಳೂರು, ಶಾಂತಪ್ಪ ಮೇಸ್ತಕ, ಗ್ರಾಪಂ ಅಧ್ಯಕ್ಷ ಧೀರೂನಾಯಕ ರಾಠೋಡ, ಅನೀಫ್ ಮಾಸ್ಟರ್, ನಾಗರಾಜ ಜೋಗೂರು, ಅಮರೇಶ ಕೋಳೂರು, ಹಣಮೇಶ ಕುಲಕರ್ಣಿ, ಉಮರ ಚೌದ್ರಿ, ಕೆ.ಪಿ.ಮನೋಹರ, ಚಿದಂಬರ ಜೋಶಿ, ಜಗದೀಶ, ನಿಸಾರ್,ರಾಜು,ವಿಜಯಕುಮಾರ ಅರಳಿ, ರಾಘವೇಂದ್ರ ಮೊದಲಾದವರಿದ್ದರು.
↧
ಉಭಯ ರಾಜ್ಯ ಒಪ್ಪಂದಂತೆ ಮಹಾ ಬ್ಯಾರೇಜ್‌ಗೆ ನೀರು
↧