Quantcast
Channel: VijayKarnataka
Viewing all articles
Browse latest Browse all 6795

ಬಾದ್‌ಷಾ ಶಿವರಾಜ್‌ಕುಮಾರ್

$
0
0

ಬಾದ್‌ಷಾ ಸಿನಿಮಾ ಸೆಟ್ಟೇರಲ್ಲ ಅನ್ನುವ ಮಾತು ಕೇಳಿ ಬಂದಿತ್ತು. ಅಲ್ಲದೇ ಈ ಚಿತ್ರಕ್ಕೆ ಆರ್.ಚಂದ್ರು ಆ್ಯಕ್ಷನ್ ಕಟ್ ಹೇಳಲ್ಲ ಅನ್ನುವ ಸುಳ್ಳು ಸುದ್ದಿಯೂ ಹಬ್ಬಿತ್ತು. ಅದನ್ನು ಸುಳ್ಳಾಗಿಸಿದ್ದಾರೆ ಶಿವರಾಜ್ ಕುಮಾರ್. ಬಾದ್‌ಷಾ ಸಿನಿಮಾದಲ್ಲಿ ತಾವು ನಟಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಈ ಸಿನಿಮಾದ ಹಾಡುಗಳ ಕಂಪೋಸ್ ಡಿ.14ರಿಂದ ಶುರುವಾಗಿದ್ದು, ಗುರುಕಿರಣ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಈಗಾಗಲೇ ಚಂದ್ರು, ಶಿವರಾಜ್‌ಕುಮಾರ್ ಮತ್ತು ಗುರುಕಿರಣ್ ಕಾಂಬಿನೇಷನ್‌ನಲ್ಲಿ ಮೈಲಾರಿ ಸಿನಿಮಾ ಬಂದಿದೆ. ಈ ಚಿತ್ರವು ಶತದಿನ ಪ್ರದರ್ಶನ ಕಂಡಿದೆ. ಹೀಗಾಗಿ ಬಾದ್‌ಷಾ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ.

'ಯಾಕೆ ಹೀಗೆ ಮಾಡುತ್ತಾರೋ ಗೊತ್ತಿಲ್ಲ. ಸುಳ್ಳು ಸುದ್ದಿಯನ್ನೂ ಹಬ್ಬಿಸುತ್ತಲೇ ಇರುತ್ತಾರೆ. ನಾನು ಯಾವದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಪಾಡಿಗೆ ನಾನು ಕೆಲಸ ಮಾಡುತ್ತೇನೆ. ಬಾದ್‌ಷಾ ವಿಭಿನ್ನ ಕಥಾ ಹಂದರ ಹೊಂದಿರುವ ಚಿತ್ರ. ಮೈಲಾರಿಯಂತೆ ಇಲ್ಲಿಯೂ ಶಿವರಾಜ್‌ಕುಮಾರ್ ವಿಭಿನ್ನ ಪಾತ್ರ ಮಾಡುತ್ತಿದ್ದಾರೆ. ಸೋಮವಾರದಿಂದ ಹಾಡುಗಳಿಗೆ ಸಂಗೀತ ಸಂಯೋಜನೆ ಕೆಲಸ ನಡೆಯುತ್ತಿದೆ. ಹಂತ ಹಂತವಾಗಿ ಸಿನಿಮಾದ ಕೆಲಸಗಳು ಇಂದಿನಿಂದ ಶುರು ಆಗಲಿವೆ' ಅನ್ನುವುದು ಚಂದ್ರು ಮಾತು.

ಈ ವಾರ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ ಶಿವರಾಜ್ ಕುಮಾರ್. ಈಗಾಗಲೇ ಅವರ ಎರಡು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಈ ಮಧ್ಯೆ ರವಿವಾರವಷ್ಟೇ ಇವರ ಮತ್ತೊಂದು ಹೊಸ ಸಿನಿಮಾದ ಮುಹೂರ್ತ ಆಗಿದೆ. ಈಗ ಬಾದ್‌ಷಾ ಸಿನಿಮಾದ ಹಾಡುಗಳಿಂದಾಗಿ ಸದ್ದು ಮಾಡುತ್ತಿದ್ದಾರೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>