Quantcast
Channel: VijayKarnataka
Viewing all articles
Browse latest Browse all 6795

ಹಾಕಿ ಟೆಸ್ಟ್‌: ಆಸೀಸ್‌ ವಿರುದ್ಧ ಭಾರತಕ್ಕೆ ಸೋಲು

$
0
0

ಮೆಲ್ಬೋರ್ನ್‌: ನೀರಸ ಪ್ರದರ್ಶನ ನೀಡಿದ ಭಾರತ ಮಹಿಳಾ ಹಾಕಿ ತಂಡ ಇಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಹಾಕಿ ಟೆಸ್ಟ್‌ನ ತನ್ನ ಎರಡನೇ ಪಂದ್ಯದಲ್ಲಿ ಆತಿಥೇಯ ಆಸ್ಪ್ರೇಲಿಯಾ ವಿರುದ್ಧ ಪರಾಭವಗೊಂಡಿದೆ.

ಇಲ್ಲಿನ ರಾಜ್ಯ ನೆಟ್‌ಬಾಲ್‌ ಮತ್ತು ಹಾಕಿ ಸೆಂಟರ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ 1-4 ಗೋಲ್‌ಗಳ ಅಂತರದಲ್ಲಿ ಸೋಲುಂಡಿತು. ಮೊದಲ ಪಂದ್ಯದಲ್ಲೇ ಆತಿಥೇಯರ ವಿರುದ್ಧ 1-0 ಅಂತರದಲ್ಲಿ ಶುಭಾರಂಭ ಮಾಡಿದ್ದ ಭಾರತೀಯರು,ಎರಡನೇ ಪಂದ್ಯದಲ್ಲಿ ಹಿಂದಿನ ಪ್ರದರ್ಶನವನ್ನು ಪುನರಾವರ್ತಿಸುವಲ್ಲಿ ವಿಫಲಗೊಂಡರು. ಭಾರತ ಪರ ರಾಣಿ ಪಂದ್ಯದ ಎರಡನೇ ಕ್ವಾರ್ಟರ್‌ನ 27ನೇ ನಿಮಿಷದಲ್ಲಿ ಏಕೈಕ ಗೋಲು ಬಾರಿಸಲಷ್ಟೇ ಶಕ್ತರಾದರೆ, ಆಸೀಸ್‌ ನಾಲ್ಕು ಕ್ವಾರ್ಟರ್‌ಗಳಲ್ಲಿ ತಲಾ ಒಂದರಂತೆ ನಾಲ್ಕು ಗೋಲು ಬಾರಿಸಿ ಹಿಂದಿನ ಸೋಲಿಗೆ ಸೇಡಿ ತೀರಿಸಿಕೊಂಡಿತು.

ವಿಶ್ವ ರಾರ‍ಯಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿರುವ ಭಾರತ ತನಗಿಂತಲೂ ಅಧಿಕ ರಾರ‍ಯಂಕ್‌ ಹೊಂದಿರುವ ಆಸೀಸ್‌ ಎದುರು ಎರಡನೇ ಜಯದ ವಿಶ್ವಾಸದಲ್ಲಿ ಕಣಕ್ಕಿಳಿಯಿತು. ಅದರಂತೆಯೇ ಮೊದಲ ಕ್ವಾರ್ಟರ್‌ನಲ್ಲಿ ಆಸೀಸ್‌ ದಿಟ್ಟ ಸವಾಲನ್ನು ಸಮರ್ಥವಾಗಿ ಎದುರಿಸುವ ಸಾಹಸ ಮಾಡಿತು. ಇದರ ನಡುವೆಯೂ 8ನೇ ನಿಮಿಷದಲ್ಲಿ ಆಸೀಸ್‌ನ ಸ್ಟೈಕರ್‌ ಕ್ಯಾತ್ರಿನ್‌ ಸ್ಲೆಟಾರಿ ಆಕರ್ಷಕ ಫೀಲ್ಡ್‌ ಗೋಲ್‌ ಬಾರಿಸಿ 1-0 ಅಂತರದ ಮುನ್ನಡೆ ತಂದರು. ಇದರ ಮಧ್ಯೆ ಭಾರತದ ಕಸ್ಟೋಡಿಯನ್‌ ಎತಿಮಾರ್ಪು ಹಲವು ಬಾರಿ ವಿಸ್ಮಯಕಾರಿ ಎದುರಾಳಿಯ ಗೋಲಿನ ಯತ್ನಗಳನ್ನು ಹಿಮ್ಮೆಟ್ಟಿಸುವಲ್ಲಿ ಸಫಲರಾದರಲ್ಲದೆ ಭಾರಿ ಹಿನ್ನಡೆಯನ್ನು ತಪ್ಪಿಸಿದರು.

ನಂತರ ಭಾರತೀಯರ ಮೇಲೆ ಒತ್ತಡ ಹೇರಿದ ಆಸ್ಪ್ರೇಲಿಯಾ ಉಳಿದ ಮೂರು ಕ್ವಾರ್ಟರ್‌ಗಳಲ್ಲೂ ತಲಾ ಒಂದು ಗೋಲ್‌ ಬಾರಿಸಿ ಜಯದ ಅಂತರವನ್ನು ಹಿಗ್ಗಿಸಿಕೊಂಡಿತು ಭಾರತ ತನ್ನ ಮೂರನೇ ಪಂದ್ಯವನ್ನು ಇದೇ 27ರಂದು ಆಡಲಿದೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>