Quantcast
Channel: VijayKarnataka
Viewing all articles
Browse latest Browse all 6795

ಬಿಡಬ್ಲ್ಯುಎಫ್‌ ರಾಂಕಿಂಗ್‌: ಸೈನಾ ಹಿಂದಿಕ್ಕಿದ ಸಿಂಧೂ

$
0
0

ಹೊಸದಿಲ್ಲಿ: ಕಳೆದ ವಾರವಷ್ಟೇ ಚೀನಾ ಓಪನ್‌ ಗೆಲ್ಲುವ ಮೂಲಕ ಚೊಚ್ಚಲ ಸೂಪರ್‌ ಸಿರೀಸ್‌ ಪ್ರೀಮಿಯರ್‌ ಕಿರೀಟ ಗೆದ್ದ ರಿಯೊ ಒಲಿಂಪಿಕ್‌ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧೂ ಬಿಡಬ್ಲ್ಯುಎಫ್‌ ಬಿಡುಗಡೆ ಮಾಡಿರುವ ನೂತನ ವಿಶ್ವ ರಾರ‍ಯಂಕಿಂಗ್‌ನ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಅಗ್ರ ಹತ್ತರೊಳಗೆ ಸ್ಥಾನ ಪಡೆದಿದ್ದಾರೆ.

ಆದರೆ ಇತ್ತೀಚೆಗೆ ಗಾಯದಿಂದ ಚೇತರಿಸಿಕೊಂಡು ಸ್ಪರ್ಧಾಕಣಕ್ಕೆ ಧುಮುಕಿರುವ ಭಾರತದ ಸ್ಟಾರ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಅಗ್ರ 10ರಿಂದ ಹೊರಬಿದ್ದಿದ್ದಾರೆ. ಹೋದ ವಾರ ಚೀನಾ ಓಪನ್‌ ಪ್ರಶಸ್ತಿ ಜಯಿಸಿದ ಸಿಂಧೂ ಎರಡು ಸ್ಥಾನ ಮೇಲೇರಿ 9ನೇ ಸ್ಥಾನ ಗಳಿಸಿದರೆ, ವಿಶ್ವದ ಮಾಜಿ ನಂ.1 ಆಟಗಾರ್ತಿ ಸೈನಾ ಐದು ಸ್ಥಾನ ಕುಸಿದು 11ನೇ ಸ್ಥಾನ ಗಳಿಸಿದ್ದಾರೆ. ಚೀನಾ ಓಪನ್‌ನಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದು, ಸೈನಾ ಹಿನ್ನಡೆಗೆ ಕಾರಣವಾಗಿದೆ.

ಸೈನಾ ನೆಹ್ವಾಲ್‌ (38,080)ಗಿಂತಲೂ ಪ್ರಸ್ತುತ 38, 490 ಅಂಕ ಹೊಂದಿರುವ ಸಿಂಧೂ, ಸದ್ಯ ನಡೆಯುತ್ತಿರುವ ಹಾಂಕಾಂಗ್‌ ಓಪನ್‌ನಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡಿದರೆ, ಮುಂದಿನ ತಿಂಗಳು ನಡೆಯಲಿರುವ ಬಿಡಬ್ಲ್ಯುಎಫ್‌ ಸೂಪರ್‌ ಸಿರೀಸ್‌ ಫೈನಲ್ಸ್‌ಗೆ ಅರ್ಹತೆ ಹೊಂದುವ ಉತ್ತಮ ಅವಕಾಶ ಹೊಂದಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಅಜಯ್‌ ಜಯರಾಮ್‌ 4 ಸ್ಥಾನ ಬಡ್ತಿ ಪಡೆದು 19ನೇ ಸ್ಥಾನಕ್ಕೆ ಏರಿದರೆ, ಎಚ್‌.ಎಸ್‌. ಪ್ರಣೋಯ್‌ 2 ಸ್ಥಾನ ಮುನ್ನಡೆದು 25 ಸ್ಥಾನದಲ್ಲಿದ್ದಾರೆ. ಚೀನಾ ಓಪನ್‌ನಿಂದ ಹೊರಗುಳಿದಿದ್ದ ಕಿಡಂಬಿ ಶ್ರೀಕಾಂತ್‌ 12ನೇ ಸ್ಥಾನಗಳಿಸಿದ್ದು, ಭಾರತೀಯರ ಪೈಕಿ ಅತ್ಯುನ್ನತ ಸ್ಥಾನದಲ್ಲಿದ್ದಾರೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>