Quantcast
Channel: VijayKarnataka
Viewing all articles
Browse latest Browse all 6795

ಗದಗ ಎಪಿಎಂಸಿಗೆ 2 ದಿನದಲ್ಲೇ 9 ಸಾವಿರ ಕ್ವಿಂಟಲ್ ಈರುಳ್ಳಿ

$
0
0

ಗದಗ: ಜಿಲ್ಲೆಯಲ್ಲಿ ತೆರೆದಿರುವ ಸರಕಾರದ ಬೆಂಬಲ ಬೆಲೆ ಖರೀದಿ ಕೇಂದ್ರಗಳಿಗೆ ಈರುಳ್ಳಿ ಆವಕ ಹೆಚ್ಚುತ್ತಲೇ ಇದೆ. ಕಳೆದೆರಡು ದಿನಗಳಲ್ಲಿಯೇ ಖರೀದಿ ಕೇಂದ್ರಕ್ಕೆ ಅಂದಾಜು 9 ಸಾವಿರ ಕ್ವಿಂಟಲ್ ಈರುಳ್ಳಿ ಹರಿದು ಬಂದಿದೆ.

ಆವಕ ಹೆಚ್ಚಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಒಂದು ವಾರ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಿತ್ತು. ನಿನ್ನೆಯಿಂದಷ್ಟೇ ಮತ್ತೆ ಖರೀದಿ ಆರಂಭಿಸಿತ್ತು. ಹೀಗಾಗಿ ಮಂಗಳವಾರ ಗದಗ ಎಪಿಎಂಸಿ ಆವರಣದಲ್ಲಿ ಈರುಳ್ಳಿ ಮೂಟೆ ಹೊತ್ತಿದ್ದ ನೂರಾರು ಟ್ರಾಕ್ಟರ್‌ಗಳು, ಲಾರಿಗಳು ಸಾಲುಗಟ್ಟಿ ನಿಂತಿದ್ದವು.

ಮೂರ್ನಾಲ್ಕು ದಿನಗಳಿಂದ ಮೂಟೆ ಕಟ್ಟಿ ಇಟ್ಟಿದ್ದ ಈರುಳ್ಳಿಯನ್ನು ಮಂಗಳವಾರ ಮಾರಾಟ ಮಾಡಲು ರೈತರು ಮುಗಿಬಿದ್ದಿದ್ದರು. ಸೋಮವಾರವೇ ರೈತರ ಟ್ರಾಕ್ಟರ್‌ಗಳಿಗೆ ಟೋಕನ್ ನೀಡಲಾಗಿತ್ತು. ಅವರೆಲ್ಲ ಈರುಳ್ಳಿ ಮಾರಾಟ ಮಾಡಲು ಊಟ, ತಿಂಡಿ ಲೆಕ್ಕಿಸದೇ ಕಾದು ಕೂತಿದ್ದರು.

ಕೂಲಿ ಹೆಚ್ಚಳಕ್ಕೆ ಪಟ್ಟು:

ಖರೀದಿ ಕೇಂದ್ರದ ಹಮಾಲಿಗಳು ಕೂಲಿ ಹೆಚ್ಚಿಸುವಂತೆ ಪಟ್ಟು ಹಿಡಿದಿದ್ದರಿಂದ ಖರೀದಿ ಪ್ರಕ್ರಿಯೆಗೆ ಕೆಲವು ಗಂಟೆ ಅಡಚಣೆ ಉಂಟಾಯಿತು. ಟ್ರಾಕ್ಟರ್‌ನಿಂದ ಪ್ರತಿ ಮೂಟೆ ಈರುಳ್ಳಿ ಇಳಿಸಿ, ತೂಕ ಮಾಡಿ ಜೋಡಿಸಲು ಕನಿಷ್ಠ 12 ರೂ. ಕೂಲಿ ನೀಡುವಂತೆ ಹಮಾಲಿಗಳು ಇಟ್ಟಿದ್ದ ಬೇಡಿಕೆ ಈಡೇರದ ಕಾರಣ ಮಂಗಳವಾರ ಕೆಲಸ ಸ್ಥಗಿತಗೊಳಿಸಿದ್ದರು.

ಬಳಿಕ ಕ್ವಿಂಟಲ್‌ಗೆ 3 ರಿಂದ 5 ರೂ.ಗೆ ಕೂಲಿ ಹೆಚ್ಚಿಸಿದರೂ ಕೆಲವರು ಕೆಲಸ ಮಾಡಲು ಮುಂದಾಗಲಿಲ್ಲ. ಹೀಗಾಗಿ ರೈತರೇ ಖಾಸಗಿ ತೂಕದ ಯಂತ್ರಗಳಿಗೆ ತೆರಳಿ ಈರುಳ್ಳಿ ತೂಕ ಮಾಡಿಸಿಕೊಂಡು ಬರುವ ಅನಿವಾರ್ಯತೆಗೆ ಸಿಲುಕಿದರು.

ಈರುಳ್ಳಿ ಚೀಲದ ಮೇಲೇ ಮಲಗಿದರು

ಖರೀದಿ ಪ್ರಕ್ರಿಯೆ ತಡವಾದ ಕಾರಣ ಬಹುತೇಕ ರೈತರು ಈರುಳ್ಳಿ ಮೂಟೆಗಳ ಮೇಲೆಯೇ ನಿದ್ರೆಗೆ ಜಾರಿದ್ದರು. ಕೆಲವು ರೈತರು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಟ್ರಾಕ್ಟರ್ ನೆರಳು ಆಶ್ರಯಿಸಿದ್ದರು. ಇನ್ನೂ ಕೆಲವರು ಟ್ರಾಕ್ಟರ್ ಮೇಲೆಯೇ ನೆರಳಿನ ವ್ಯವಸ್ಥೆ ಮಾಡಿಕೊಂಡಿದ್ದರು. ರೈತರು ಊರಿನಿಂದ ತಂದಿದ್ದ ಬುತ್ತಿ ಬಿಚ್ಚಿಕೊಂಡು ಆವರಣದಲ್ಲಿಯೇ ಹಸಿವು ತಣಿಸಿಕೊಂಡರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>