ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಪುತ್ರ ಅನೂಪ್ ಅಭಿನಯದ ಹೊಸ ಚಿತ್ರ ಸೆಟ್ಟೇರಿದೆ. ಈ ಚಿತ್ರಕ್ಕೆ ನಾಯಕಿಯಾಗಿ ಕಿರುತೆರೆಯಿಂದ ಬಂದಿದ್ದಾರೆ ನಟಿ ರಜನಿ. ಅನೂಪ್ ಇದಕ್ಕೂ ಮೊದಲು ನಾಯಕ ನಟರಾಗಿ ಡವ್ ಮತ್ತು ಮಿ. ಪರ್ಫೆಕ್ಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಎರಡನೇ ಚಿತ್ರಕ್ಕೆ ಸಿದ್ಧರಾಗಿದ್ದಾರೆ. ಇವರಿಗೆ ನಾಯಕಿಯಾಗಿ ಕಿರುತೆರೆ ನಟಿ ರಜನಿ ಅಭಿನಯಿಸಲಿದ್ದಾರೆ. ರಜನಿ ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಹೊಸ ನಿರ್ದೇಶಕರನ್ನು ಕರೆತರಲಾಗಿದೆ. ಚರಣ್ ರಾಜ್ ಚೊಚ್ಚಲ ನಿರ್ದೇಶನ ಚಿತ್ರ ಇದು. ಮಸ್ತ್ ಮೊಹಬ್ಬತ್ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಮಾಡಿದ ಅನುಭವ ಇವರಿಗಿದೆ. ಶೇಖರ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಲವ್ ಸ್ಟೋರಿ, ಕಾಮಿಡಿ ಚಿತ್ರದಲ್ಲಿದೆ. ಫೋನ್ ಮೆಸೇಜ್ ತಪ್ಪಾಗಿ ತಿಳಿದುಕೊಂಡಾಗ ಯಾವ ತಿರುವು ಪಡೆದುಕೊಳ್ಳತ್ತದೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಿದ್ದಾರೆ. ಇದು ರಿಯಲ್ ಲೈಫ್ ಸ್ಟೋರಿಯನ್ನಾಧರಿಸಿದ್ದು ಎಂದಿದ್ದಾರೆ ನಿರ್ದೇಶಕ ಚರಣ್. ರಜನಿ ಕಿರುತೆರೆಯ ಜನಪ್ರಿಯ ನಟಿ. ಚಿತ್ರದ ಟೈಟಲ್ ಕೇಳಿದಾಗ 80 ದಶಕದಲ್ಲಿ ತೆರೆಕಂಡ ಚಿತ್ರದ ಹಾಡು ನೆನಪಿಗೆ ಬರುತ್ತದೆ. 'ಸುಬ್ಬಿ ಸುಬ್ಬಿ ಸುಬ್ಬಕ್ಕ ಸುವ್ವಲಾಲಿ..' ಹಾಡು ಜನಪ್ರಿಯವಾಗಿತ್ತು. ಚಿತ್ರದಲ್ಲಿ ಸುಬ್ಬಿಯಾಗಿ ರಜನಿ ನಟಿಸಲಿದ್ದಾರೆ. ಇದು ಇವರಿಗೆ ಎರಡನೇ ಚಿತ್ರ. ಸುಬ್ಬನಾಗಿ ಅನೂಪ್ ಅಭಿನಯಿಸಲಿದ್ದಾರೆ.
↧
ಅನೂಪ್ ರಜನಿ ಡುಯೆಟ್‌ಗೆ ರೆಡಿ
↧