Quantcast
Channel: VijayKarnataka
Viewing all articles
Browse latest Browse all 6795

ಬಾಲಕಿಯ ಕೊಂದ ಚಿರತೆಯನ್ನು ಜೀವಂತ ಸುಟ್ಟರು

$
0
0

ಸೂರತ್‌: ಬಾಲಕಿಯನ್ನು ಕೊಂದ ಚಿರತೆಯನ್ನು ಸೂರತ್‌ನ ಉಮ್ರಪಾದ ತಾಲೂಕಿನ ವಾಡಿಯ ಗ್ರಾಮಸ್ಥರು ಜೀವಂತವಾಗಿ ಸುಟ್ಟಿದ್ದಾರೆ.

ಗ್ರಾಮದ 8 ವರ್ಷದ ಬಾಲಕಿ ನಿಕಿತಾ ನವೆಂಬರ್‌ 1ರ ರಾತ್ರಿ ಬಯಲಿನಲ್ಲಿ ಬಹಿರ್ದಸೆಗೆ ತೆರಳಿದ್ದಾಗ ಚಿರತೆ ದಾಳಿಯಿಂದ ಮೃತಪಟ್ಟಿದ್ದಳು. ಘಟನೆ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸೆರೆ ಹಿಡಿದು ಬೋನಿನಲ್ಲಿ ಇರಿಸಿದ್ದರು. ಬೋನನ್ನು ತಮ್ಮ ವಶಕ್ಕೆ ಪಡೆದ ಉದ್ರಿಕ್ತ ಗ್ರಾಮಸ್ಥರು, ನವೆಂಬರ್‌ 2ರ ಮಧ್ಯರಾತ್ರಿ ಅದರ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದರು.

Disclaimer: ಚಿರತೆಯ ಸುಟ್ಟು ಕರಕಲಾದ ಚಿತ್ರದಿಂದ ಮನೋದ್ವೇಗ ಉಂಟಾಗಬಹುದು. ನೋಡಬಹುದಾಗಿದ್ದರೆ ಮಾತ್ರ ಕೆಳಗೆ ಸ್ಕ್ರಾಲ್ ಮಾಡಿ.

ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿರುವ ಅರಣ್ಯ ಇಲಾಖೆ, ಈ ಸಂಬಂಧ ತನಿಖೆ ಆರಂಭಿಸಿದೆ. ಬೋನನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ, ಸುಟ್ಟು ಕರಕಲಾಗಿರುವ ಚಿರತೆ ದೇಹವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಗುಜರಾತಿನ ಅರಣ್ಯ ಹಾಗೂ ಪರಿಸರ ಸಚಿವ ಗಣಪತ್‌ ವಾಸ್ವಾ ಅವರ ಹುಟ್ಟೂರಾದ ವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮಕ್ಕೆ ಭೇಟಿ ನೀಡಿದ್ದ ವಾಸ್ವಾ, ಮೃತ ಬಾಲಕಿಯ ಕುಟುಂಬಕ್ಕೆ ಸಾಂತ್ವನ ಹೇಳಿ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.


Leopard burnt alive: A leopard was allegedly burnt alive by some villagers of Vadi of Umarpada Taluka of Surat. the leopard killed Nikita, 8 years old girl of village on November 1.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>