ಶುಭಾ ನಾಗೇಂದ್ರಪ್ರಸಾದ್ ಅವರನ್ನು ಮದುವೆ ಆಗಿದ್ದಾರೆ ಎಂದುಕೊಂಡು ಸಾಕಷ್ಟು ಜನ ಆ ಫೋಟೊವನ್ನು ಪೋಸ್ಟ್ ಮಾಡಿ ‘ಹ್ಯಾಪಿ ಮ್ಯಾರೀಡ್ ಲೈಫ್’ ಎಂದು ಬರೆದಿದ್ದಾರೆ.
ಅಸಲಿ ವಿಷಯ ಏನೇಂದರೆ ಇದು ನಾಗೇಂದ್ರಪ್ರಸಾದ್ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದ ಶೂಟಿಂಗ್ ಸಮಯದಲ್ಲಿ ತೆಗೆದ ಫೋಟೋವಂತೆ. ಈ ಬಗ್ಗೆ ಪ್ರತಿಕಿಯಿಸಿರುವ ನಾಗೇಂದ್ರಪ್ರಸಾದ್ ‘ನಾನು
ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ನಾನು ಒಂದು ಪಾತ್ರ ನಿರ್ವಹಿಸುತ್ತಿದ್ದೇನೆ. ಆ ಸಮಯದಲ್ಲಿ
ಯಾರೋ ಫೋಟೋ ತೆಗೆದು ಇನ್ಯಾರಿಗೋ ಕಳುಹಿಸಿದ್ದಾರೆ.
ವಿಚಿತ್ರ ಎಂದರೆ ಅದು ನನಗೆ ವಾಪಾಸ್ ಬಂದು ನನ್ನ ಸ್ನೇಹಿತರೊಬ್ಬರು ನನಗೆ ವಿಷ್ ಮಾಡಿದ್ದಾರೆ. ಶುಭಾಪೂಂಜಾ ನನ್ನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅಷ್ಟೇ ಬೇರೆ ಯಾವುದೇ ವಿಷಯವಿಲ್ಲ.ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ,’ ಅವರು ಹೇಳಿದ್ದಾರೆ. ನಟಿ ಶುಭಾ ಪೂಂಜಾ ಕೂಡಾ ಮಾಧ್ಯಮಗಳಿಗೆ ಇದನ್ನೇ
ಹೇಳಿದ್ದಾರೆ.
ನಟಿ ಶುಭಾ ಪೂಂಜಾ ಮತ್ತು ಚಿತ್ರ ಸಾಹಿತಿ ನಿರ್ದೇಶಕ ನಾಗೇಂದ್ರ ಪ್ರಸಾದ್‌ನಾಗೇಂದ್ರ ಪ್ರಸಾದ್ ಮದುವೆ ಧಿರಿಸಿನಲ್ಲಿದ್ದ ಫೋಟೊ ಸಾಕಷ್ಟು ಜನರ ವಾಟ್ಸ್‌ಅಪ್ ಮತ್ತು ಫೇಸ್‌ಬುಕ್‌ನಲ್ಲಿ ಓಡಾಡುತ್ತಿದೆ.