Quantcast
Channel: VijayKarnataka
Viewing all articles
Browse latest Browse all 6795

ಎಲ್ಲರೊಳಗಿನ ರಾಮ ರಾವಣ ಇಲ್ಲಿದ್ದಾರೆ

$
0
0

ಹೊಸ ರೀತಿಯ ಸಿನಿಮಾಗಳ ಮೂಲಕ ಕನ್ನಡದ ಪ್ರೇಕ್ಷಕರಿಗೆ ಮುಖಾಮುಖಿ ಆಗುತ್ತಲೇ ಇರುತ್ತಾರೆ ನಿರ್ದೇಶಕ, ನಟ ಪ್ರಕಾಶ್‌ ರೈ. ಈಗ 'ಇದೊಳ್ಳೆ ರಾಮಾಯಣ'ದ ಮೂಲಕ ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆ ಕುರಿತು ಅವರು ಇಲ್ಲಿ ನೇರಮಾತಿಗೆ ಸಿಕ್ಕಿದ್ದಾರೆ.

- ಶರಣು ಹುಲ್ಲೂರು

ನಾನೂ ನನ್ನ ಕನಸು, ಒಗ್ಗರಣೆ ಚಿತ್ರದ ನಂತರ ಮತ್ತೊಂದು ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ ನಿರ್ದೇಶಕ, ನಟ ಪ್ರಕಾಶ್‌ ರೈ. ಹೊಸ ರೀತಿಯ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಲೇ ಇರುವ ಪ್ರಕಾಶ್‌ ರೈ, ಈಗ 'ಇದೊಳ್ಳೆ ರಾಮಾಯಣ' ಮೂಲಕ ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಅ.7ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿರುವ ಚಿತ್ರದ ಕುರಿತು ಇಲ್ಲೊಂದಿಷ್ಟು ಮಾತನಾಡಿದ್ದಾರೆ.

* ಪ್ರತಿ ಬಾರಿ ಮನುಷ್ಯ ಸಂವೇದನಗೆ ಹತ್ತಿರದ ಕತೆ ಆಯ್ಕೆ ಮಾಡಿಕೊಳ್ಳುತ್ತೀರಿ. ಇದರ ಹಿಂದಿನ ಉದ್ದೇಶವೇನು?

- ನಾವೆಲ್ಲರೂ ಮನುಷ್ಯರು. ಮಾನವ ಸಂಬಂಧಕ್ಕೆ ತುಂಬಾ ಬೆಲೆ ಕೊಡುವಂಥವರು. ಹೀಗಾಗಿ ನಾನು ಇದೇ ವರ್ತುಲದಲ್ಲೇ ಕತೆ ಹುಡುಕುತ್ತೇನೆ. ಹಾಗಂತ ನನಗೆ ಇಡೀ ಕತೆ ಇಷ್ಟವಾಗಬೇಕು ಅಂತೇನೂ ಇಲ್ಲ. ಅಲ್ಲಿನ ಒಂದು ಎಳೆ ನನ್ನನ್ನು ಕಾಡಿದರೂ, ಅದನ್ನು ಸಿನಿಮಾವಾಗಿಸುತ್ತೇನೆ. 'ಇದೊಳ್ಳೆ ರಾಮಾಯಣ' ಮೂಲ ಚಿತ್ರದಲ್ಲಿಯ ಒಂದು ಎಳೆ ಮಾತ್ರ ನನ್ನನ್ನು ಹಾಗೆ ಕಾಡಿತು. ಹಾಗಾಗಿ ಇದು ಚಿತ್ರವಾಗಲು ಕಾರಣವಾಯಿತು.

* ಈ ಸಿನಿಮಾದ ತಯಾರಿಕೆಗಾಗಿ ಕಾಡಿದ ಆ ಎಳೆ ಯಾವುದು?

- ನಾವ್ಯಾರೂ ದೇವ ಮಾನವರಲ್ಲ. ಎಲ್ಲರೊಳಗೂ ಒಬ್ಬ ರಾಮ ಇರುತ್ತಾನೆ. ರಾವಣನೂ ಇದ್ದಾನೆ. ಜತೆಗೆ ಕುಂಭಕರ್ಣನೂ ಇರಬಹುದು. ಇವರೆಲ್ಲರೂ ಆಯಾ ಸನ್ನಿವೇಶಕ್ಕೆ ತಕ್ಕಂತೆ ಪ್ರಕಟಗೊಳ್ಳುತ್ತಾರೆ. ಅವರು ಪ್ರಕಟಗೊಳ್ಳಲೇಬೇಕು. ಈ ಎಳೆಯೇ ನನ್ನನ್ನು ತುಂಬಾ ಕಾಡಿದ್ದು. ಅದನ್ನು ನನ್ನದೇ ಆದ ರೀತಿಯಲ್ಲಿ ನಿರೂಪಿಸಿದ್ದೇನೆ.

* ಈ ಸಿನಿಮಾದ ಮೂಲಕ ಏನನ್ನು ಹೇಳುವುದಕ್ಕೆ ಹೊರಟಿದ್ದೀರಿ?

- ವ್ಯಕ್ತಿಯೊಬ್ಬ ತನಗೆ ಅರಿವಿಲ್ಲದೇ ಕೆಲವೊಮ್ಮೆ ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತಾನೆ. ಅದರಿಂದ ಪಾರಾಗಲು ಹರಸಾಹಸ ಪಡುತ್ತಾನೆ. ಆ ಸಾಹಸ ಯಾರಿಗೂ ಗೊತ್ತಾದಂತೆ ಮುನ್ನಚ್ಚರಿಕೆ ವಹಿಸುತ್ತಾನೆ. ಅದರಿಂದ ಗೆದ್ದಾದ ನಂತರ ಅವನು ಹೇಗೆಲ್ಲ ಬದಲಾಗುತ್ತಾನೆ ಮತ್ತು ಆತನನ್ನು ಸಮಾಜ ಹೇಗೆ ನೋಡುತ್ತದೆ ಅನ್ನುವುದನ್ನು ಹೇಳುವುದಕ್ಕೆ ಹೊರಟಿದ್ದೇನೆ. ನಮ್ಮನ್ನೇ ನಾವು ನೋಡಿಕೊಂಡು ನಗುವಂಥ ಹ್ಯೂಮರ್‌ ಸಿನಿಮಾದಲ್ಲಿದೆ. ಹೀಗಾಗಿ ನೋಡುಗ ತಾನೇ ತನ್ನನ್ನು ಸಿನಿಮಾದ ಪಾತ್ರದಲ್ಲಿ ಕಂಡು ವಿಭಿನ್ನವಾಗಿ ಯೋಚಿಸೋಕೆ ಶುರು ಮಾಡುತ್ತಾನೆ.

* ನಿಮ್ಮ ನಿರೂಪಣೆ ವಿಭಿನ್ನವಾಗಿರುತ್ತದೆ. ಈ ಸ್ಟೋರಿಯಲ್ಲಿ ಹೇಗೆ ಹೇಳಿದ್ದು?

- ಹಳ್ಳಿಯ ಹಿನ್ನೆಲೆಯಲ್ಲಿ ಈ ಚಿತ್ರಕತೆ ತೆರೆದುಕೊಳ್ಳುತ್ತದೆ. ರಾಮನವಮಿಯ ಎರಡು ದಿನಗಳಲ್ಲಿ ಹಳ್ಳಿಯೊಂದರಲ್ಲಿ ನಡೆಯುವ ಘಟನೆಗಳು ಚಿತ್ರದ ಕತೆಯಲ್ಲಿ ಬರುತ್ತವೆ. ರಾಮನವಮಿಯ ಸಡಗರ, ಹಳ್ಳಿಯ ಸೊಗಡು ಮತ್ತು ಆ ಜನಜೀವನದ ಮೂಲಕ ಕತೆ ಹೇಳುತ್ತಿದ್ದೇನೆ. ಹಳ್ಳಿಯೊಂದರ ನೈಜ ಚಿತ್ರಣ ಸಿನಿಮಾದಲ್ಲಿ ಕಂಡುಬರಲಿದೆ. ಇದು ನನ್ನಿಷ್ಟದ ಮಾದರಿ ಕೂಡ.

* ಈ ಸಿನಿಮಾದಲ್ಲಿ ಪ್ರತಿಭಾವಂತರ ದಂಡೇ ಇದೆ. ಆ ಕುರಿತು ಒಂದಿಷ್ಟು...?

- ನನಗೆ ಗೊತ್ತಿಲ್ಲದಂತೆ ಒಂದೆಡೆ ನಾವೆಲ್ಲರೂ ಸೇರಿದ್ದೇವೆ. ಸಂಗೀತ ನಿರ್ದೇಶಕ ಇಳಯರಾಜ, ಸಂಕಲನಕಾರ ಶ್ರೀಕರ್‌ ಪ್ರಸಾದ್‌, ಕಲಾ ನಿರ್ದೇಶಕ ಶಶಿಧರ ಅಡಪ, ನಾಯಕಿ ಪ್ರಿಯಾಮಣಿ, ನಟ ಅಚ್ಯುತ್‌ಕುಮಾರ್‌, ಅರವಿಂದ್‌... ಹೀಗೆ ಪ್ರತಿಭಾವಂತರ ದಂಡೇ ಇದೆ. ಹೀಗಾಗಿ ಒಂದೊಳ್ಳೆ ಸಿನಿಮಾ ಆಗೋಕೆ ಸಾಧ್ಯವಾಗಿದೆ.

* ನಾಯಕಿ ಪ್ರಿಯಾಮಣಿ ನಿರ್ವಹಿಸಿದ ಪಾತ್ರದ ವಿಶೇಷತೆ ಏನು?

- ಪ್ರಿಯಾಮಣಿ ಸಿನಿಮಾದ ಕಥಾನಾಯಕಿ. ಪಾತ್ರದ ವಿಶೇಷತೆ ಅಂದರೆ, ಇಲ್ಲಿ ಅವರ ಪಾತ್ರಕ್ಕೆ ಹೆಸರೇ ಇಲ್ಲ. ಹಾಗಾಗಿ ಆ ಪಾತ್ರವನ್ನು ನಾನು ನದಿಗೆ ಹೋಲಿಸಿದ್ದೇನೆ. ಆ ನದಿಯ ಸುತ್ತಲೂ ಮೂರು ಪಾತ್ರಗಳು ಸುತ್ತುತ್ತವೆ. ಅವರ ಬದುಕಿನಲ್ಲಿ ಒಂದಷ್ಟು ಬದಲಾವಣೆ ಆಗುತ್ತಿರುತ್ತವೆ ಅದೇ ನಾಯಕಿಯ ಪಾತ್ರದ ವೈಶಿಷ್ಟ್ಯ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>