ಇಷ್ಟಕಾಮ್ಯ ಚಿತ್ರದಲ್ಲಿ ವಿಜಯ್ ಸೂರ್ಯ ಜತೆ ನಟಿಸಿದ್ದ ಕಾವ್ಯಾ ಶೆಟ್ಟಿ ಹೊಸ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಶ್ರೀನಗರ ಕಿಟ್ಟಿ ಅಭಿನಯದ ಚಿತ್ರದಲ್ಲಿ ಇವರೀಗ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರೀತಮ್ ಗುಬ್ಬಿ ನಿರ್ದೇಶನದ ನಮ್ ದುನಿಯಾ ನಮ್ ಸ್ಟೈಲ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟವರು ಕಾವ್ಯಾ. ಅದಾದ ನಂತರ ತಮಿಳು ಚಿತ್ರರಂಗಕ್ಕೆ ಹೋದ ಅವರು ಮತ್ತೆ ಕನ್ನಡದ ಇಷ್ಟಕಾಮ್ಯ, ಜೂಮ್ ಚಿತ್ರಗಳಲ್ಲಿ ನಟಿಸಿದರು. ಈಗ ಶ್ರೀನಗರ ಕಿಟ್ಟಿ ಜತೆ ಸಿಲಿಕಾನ್ ಸಿಟಿ ಅನ್ನೋ ಚಿತ್ರದಲ್ಲಿ ಹೀರೋಯಿನ್. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಅವರಲ್ಲಿ ಕಾವ್ಯಾ ಕೂಡ ಒಬ್ಬರು. ಕ್ರೈಮ್ ಸ್ಟೋರಿಯ ಚಿತ್ರ ಇದು. ಮುರಳಿ ಗುರಪ್ಪ ನಿರ್ದೇಶನ ಮಾಡಲಿದ್ದಾರೆ. ಇಬ್ಬರು ಸಹೋದರ ನಡುವಿನ ಕತೆ ಚಿತ್ರದಲ್ಲಿದ್ದು ಸದ್ಯದಲ್ಲೇ ಸೆಟ್ಟೇರಲಿದೆ. ಸ್ಮೈಲ್ ಪ್ಲೀಸ್ ಅನ್ನೋ ಇನ್ನೊಂದು ಕನ್ನಡ ಚಿತ್ರದಲ್ಲಿ ಕಾವ್ಯಾ ನಾಯಕಿಯಾಗಿ ನಟಿಸಿದ್ದು, ರಿಲೀಸ್‌ಗೆ ಕಾದಿದ್ದಾರೆ. ಅದರ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಸಾಗಿದೆ.
↧
ಸಿಲಿಕಾನ್ ಸಿಟಿಗೆ ಬಂದ ಕಾವ್ಯಾ
↧