ಹೊಸದಿಲ್ಲಿ: ರಾರಯಗಿಂಗ್ ಪಿಡುಗು ವಿವಾದ ಸುತ್ತಿಕೊಂಡಿರುವ ರಾಯಚೂರು ಮತ್ತು ಕೋಲಾರದ ಎರಡು ಕಾಲೇಜುಗಳು ಸೇರಿದಂತೆ ದೇಶದ 20 ದಂತ ವೈದ್ಯಕೀಯ ಶಿಕ್ಷ ಣ ಕಾಲೇಜುಗಳ ನೋಂದಣಿಯನ್ನು ರದ್ದುಗೊಳಿಸುವಂತೆ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಶಿಫಾರಸು ಮಾಡಿದೆ. ಸಚಿವಾಲಯವು ಮಂಡಳಿಯ ಶಿಫಾರಸಿನಂತೆ ಕ್ರಮ ಕೈಗೊಳ್ಳಲು ಮುಂದಾದರೆ 20 ಕಾಲೇಜುಗಳ ನೋಂದಣಿ ರದ್ದಾಗಲಿದೆ. ರಾಯಚೂರಿನ ಎಎಂಇ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ, ಕೋಲಾರದ ಕೆಜಿಎಫ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಮತ್ತು ಆಸ್ಪತ್ರೆ, ಆಂಧ್ರ ಪ್ರದೇಶದ ಶ್ರೀ ಬಾಲಾಜಿ ಡೆಂಟಲ್ ಕಾಲೇಜು, ಬಿಹಾರದ ಮೂರು, ಅಸ್ಸಾಂ, ಪಂಜಾಬ್, ದಿಲ್ಲಿ, ಶ್ರೀನಗರ, ಜಮ್ಮು, ರಾಜಸ್ಥಾನಗಳ ತಲಾ ಒಂದು, ಮಧ್ಯಪ್ರದೇಶ, ಉತ್ತರ ಪ್ರದೇಶಗಳ ಎರಡು, ಮಹಾರಾಷ್ಟ್ರದ ಮೂರು, ಗ್ರೇಟರ್ ನೋಯ್ಡಾದ ಒಂದು ಕಾಲೇಜುಗಳ ನೋಂದಣಿ ರದ್ದುಪಡಿಸಲು ಮಂಡಳಿ ಸಲಹೆ ನೀಡಿದೆ. ಕಾಲೇಜುಗಳಲ್ಲಿ ರಾರಯಗಿಂಗ್ ಪಿಡುಗು ಕೊನೆಗೊಳಿಸಲು ಆಡಳಿತ ಮಂಡಳಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮಾಡಲು ಇದೊಂದು ಉತ್ತಮ ದಾರಿಯಾಗುವ ನಿರೀಕ್ಷೆಯಿದೆ.
↧
ರಾರಯಗಿಂಗ್: 20 ಡೆಂಟಲ್ ಕಾಲೇಜುಗಳ ನೋಂದಣಿ ರದ್ದು?
↧