ಮುಂಬಯಿ: ಇಂಡಿಯನ್ ಗೋಲ್ಡನ್ ಚತುಷ್ಕೋನ ಓಟವನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮಿಶೆಲ್ಲೆ ಕಾಕಡೆ ಗಿನ್ನಿಸ್ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಗೊಂಡಿದ್ದಾರೆ. ಎರಡು ಮಕ್ಕಳ ತಾಯಿಯಾಗಿರುವ 47 ವರ್ಷದ ಕಾಕಡೆ ಗಿನ್ನಿಸ್ ದಾಖಲೆ ಮಾಡಿರುವುದು ಗುರುವಾರ ಖಚಿತಗೊಂಡಿದೆ. 193 ದಿನಗಳು ಹಾಗೂ 1 ಗಂಟೆ ಅವಧಿಯಲ್ಲಿ ಬರಿಗಾಲಿನಲ್ಲಿ ಓಡಿರುವುದು ವಿಶೇಷವಾಗಿದೆ. 2015ರ ಅಕ್ಟೋಬರ್ 21 ರಿಂದ 2016ರ ಮೇ ತಿಂಗಳ ಅವಧಿಯಲ್ಲಿ ಕಾಕಡೆ ಈ ಓಟವನ್ನು ಪೂರ್ಣಗೊಳಿಸಿದ್ದಾರೆ. ಗೋಲ್ಡನ್ ಚತುಷ್ಕೋನ ಓಟದಲ್ಲಿ ಕಾಕಡೆ 5,968.4 ಕಿ.ಮೀ. ಪೂರ್ಣಗೊಳಿಸಿರುತ್ತಾರೆ. ಇದರಲ್ಲಿ ಮುಂಬಯಿಂದ ದಿಲ್ಲಿ ನಡುವಿನ 1,514.2 ಕಿಮೀ., ದಿಲ್ಲಿ ಯಿಂದ ಕೋಲ್ಕೊತಾ ನಡುವಿನ 1,542.18 ಕಿಮೀ, ಕೋಲ್ಕೊತಾದಿಂದ ಚೆನ್ನೈ ನಡುವಿನ 1,554.49 ಕಿಮೀ ಹಾಗೂ ಚೆನ್ನೈಯಿಂದ ಮುಂಬಯಿ ನಡುವಿನ 1,357.53 ಕಿಮೀ ಸೇರಿದೆ.
↧
ಗಿನ್ನಿಸ್ ದಾಖಲೆ ಬರೆದ ಮಿಶೆಲ್ಲೆ ಕಾಕಡೆ
↧