Quantcast
Channel: VijayKarnataka
Viewing all articles
Browse latest Browse all 6795

ರೋಮ್‌ಗೆ ಆತಿಥ್ಯ ಸಿಕ್ಕರೆ ಒಲಿಂಪಿಕ್ಸ್‌ಗೆ ಕ್ರಿಕೆಟ್‌

$
0
0

2024ರ ಒಲಿಂಪಿಕ್ಸ್‌ ರೋಮ್‌ನಲ್ಲಿ ನಡೆಯುವ ಸಾಧ್ಯತೆ

ಎಡಿನ್‌ಬರ್ಗ್‌: 2024 ಒಲಿಂಪಿಕ್ಸ್‌ ಆತಿಥ್ಯ ರೋಮ್‌ಗೆ ದೊರಕಿದರೆ ಕ್ರಿಕೆಟ್‌ಗೆ ಅವಕಾಶ ನೀಡಲಾಗುವುದು ಎಂದು ಇಟಲಿ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷ ಸಿಮೊನೆ ಗ್ಯಾಂಬಿನೊ ಹೇಳಿದ್ದಾರೆ.

ಎಡಿನ್‌ಬರ್ಗ್‌ನಲ್ಲಿ ಐಸಿಸಿ ವಾರ್ಷಿಕ ಸಮ್ಮೇಳನ ನಡೆಯುತ್ತಿರುವಾಗಲೇ ಗ್ಯಾಂಬಿನೊ ಹೇಳಿಕೆ ನೀಡಿರುವುದು ಅರ್ಥಪೂರ್ಣವಾಗಿದೆ. ''ರೋಮ್‌ಗೆ ಒಲಿಂಪಿಕ್ಸ್‌ನ ಆತಿಥ್ಯ ಸಿಕ್ಕರೆ ಕ್ರಿಕೆಟ್‌ ಆಟವನ್ನು ಕ್ರೀಡೆಗಳ ಪಟ್ಟಿಯಲ್ಲಿ ಸೇರಿಸಲಾಗುವುದು,'' ಎಂದು ಇಟಲಿ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಗ್ಯಾಂಬಿನೊ ಹೇಳಿರುವುದಾಗಿ ಕ್ರಿಕ್‌ಇನ್ಫೋ ವೆಬ್‌ಸೈಟ್‌ ವರದಿ ಮಾಡಿದೆ.

ಪ್ಯಾರಿಸ್‌, ಲಾಸ್‌ಏಂಜಲೀಸ್‌ ಹಾಗೂ ಬುಡಾಫೆಸ್ಟ್‌ ಜೊತೆಯಲ್ಲಿ ರೋಮ್‌ 2024ರ ಒಲಿಂಪಿಕ್ಸ್‌ ಆತಿಥ್ಯಕ್ಕೆ ಬಿಡ್‌ ಸಲ್ಲಿಸಲಿದೆ. ಆತಿಥ್ಯ ವಹಿಸುವ ನಗರಕ್ಕೆ ಐದು ಹೊಸ ಕ್ರೀಡೆಗಳನ್ನು ಒಲಿಂಪಿಕ್ಸ್‌ಗೆ ಸೇರಿಸಿಕೊಳ್ಳುವ ಅವಕಾಶವಿದೆ. ಒಂದು ವೇಳೆ ರೋಮ್‌ಗೆ ಆತಿಥ್ಯ ಸಿಕ್ಕರೆ ಬೊಲೊಗ್ನಾದಲ್ಲಿ ಪಂದ್ಯಗಳು ನಡೆಯಲಿವೆ. ಏಕೆಂದರೆ 2010ರ ವಿಶ್ವ ಕ್ರಿಕೆಟ್‌ ಲೀಗ್‌ ನಾಲ್ಕನೇ ಡಿವಿಜನ್‌ ಪಂದ್ಯಗಳು ಈ ನಗರದಲ್ಲಿ ನಡೆದಿತ್ತು.

ಐಸಿಸಿ ಸಮ್ಮೇಳನದಲ್ಲಿ ಸೌದಿ ಅರೇಬಿಯಾ 39ನೇ ರಾಷ್ಟ್ರವಾಗಿ ಸಹಾಯಕ ಸದಸ್ಯತ್ವ ಪಡೆಯಿತು. ಅದೇ ರೀತಿ ಅಮೆರಿಕ ಕ್ರಿಕೆಟ್‌ ಸಂಸ್ಥೆ ಹಾಗೂ ನೇಪಾಳ ಕ್ರಿಕೆಟ್‌ ಸಂಸ್ಥೆಗಳ ಮೇಲೆ ಹೇರಲಾಗಿದ್ದ ಅಮಾನತನ್ನು ಊರ್ಜಿತಗೊಳಿಸಲಾಯಿತ. ಅಮಾನತುಗೊಂಡಿರುವ ರಾಷ್ಟ್ರಗಳಿಗೆ ಐಸಿಸಿ ನಿಯೋಗವೊಂದು ಭೇಟಿ ನೀಡಲು ತೀರ್ಮಾನಿಸಲಾಯಿತು.

''ನೇಪಾಳ ಹಾಗೂ ಅಮೆರಿಕ ಐಸಿಸಿಯ ಪ್ರಮುಖ ಸದಸ್ಯರು, ಈ ರಾಷ್ಟ್ರಗಳ ಸಾಕಷ್ಟು ಪ್ರಮಾಣದಲ್ಲಿ ಕ್ರಿಕೆಟ್‌ ಪ್ರತಿಭೆಗಳಿವೆ,'' ಎಂದು ಐಸಿಸಿ ಅಧ್ಯಕ್ಷ ಶಶಾಂಕ್‌ ಮನೋಹರ್‌ ಹೇಳಿದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>