Quantcast
Channel: VijayKarnataka
Viewing all articles
Browse latest Browse all 6795

ಟಾಪರ್‌ ಹಗರಣ; ಪಿಯು ಮಂಡಳಿ ಮಾಜಿ ಕಾರ್ಯದರ್ಶಿ ಬಂಧನ

$
0
0

ಪಟಣಾ: ಪಿಯುಸಿ ಟಾಪರ್‌ಗಳ ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರ ಶಾಲಾ ಪರೀಕ್ಷಾ ಮಂಡಳಿಯ ಮಾಜಿ ಕಾರ್ಯದರ್ಶಿ ಹರಿಹರನಾಥ್‌ ಝಾ ಅವರನ್ನು ಸೋಮವಾರ ವಿಶೇಷ ತನಿಖಾ ತಂಡ (ಎಸ್‌ಐಟಿ)ವು ಬಂಧಿಸಿದೆ.

ಹಗರಣಕ್ಕೆ ಸಂಬಂಧಿಸಿದ ವಿಚಾರಣೆ ಸಲುವಾಗಿ ಶನಿವಾರದಿಂದಲೇ ಎಸ್‌ಐಟಿಯ ವಶದಲ್ಲಿದ್ದ ಝಾ ಅವರನ್ನು, ಅವರೇ ಸ್ವತಃ ಬಾಯಿಬಿಟ್ಟ ಮಾಹಿತಿಗಳು ಹಾಗೂ ಇತರೆ ಬಂಧಿತರು ನೀಡಿದ ಮಾಹಿತಿಗಳ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಝಾ ಅವರನ್ನು ಎಸ್‌ಐಟಿಯು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ.

ಹಗರಣ ವಿಚಾರವಾಗಿ ಈಗಾಗಲೇ ಪಿಯು ಮಂಡಳಿ ಮಾಜಿ ಅಧ್ಯಕ್ಷ ಲಾಲ್‌ಕೇಶ್ವರ್‌ ಪ್ರಸಾದ್‌ ಮತ್ತು ಅವರ ಪತ್ನಿ, ಜೆಡಿಯು ಮಾಜಿ ಶಾಸಕಿ, ವಾರಣಸಿಯ ಉಶಾ ಸಿನ್ಹಾ, ವಿ.ಆರ್‌.ಕಾಲೇಜಿನ ಪ್ರಿನ್ಸಿಪಾಲ್‌ ಮತ್ತು ನಿರ್ದೇಶಕ ಬಚ್ಚಾ ರೈ, ಹಾಗೂ 12ನೇ ತರಗತಿಯ ಟಾಪರ್‌ ರೂಬಿ ರೈ ಸೇರಿ 20ಕ್ಕೂ ಹೆಚ್ಚು ಜನರು ಬಂಧಿತರಾಗಿದ್ದಾರೆ.

ಹಗರಣದ ಮಾಸ್ಟರ್‌ಮೈಂಡ್‌ ರೈ ಆಗಿದ್ದು, ಬಿಹಾರದ ಇಬ್ಬರು ಟಾಪರ್‌ಗಳೂ ಈತನ ಕಾಲೇಜಿನವರೇ ಆಗಿದ್ದರು. ಆಜ್‌ತಕ್‌ ಸುದ್ದಿ ವಾಹಿನಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಟಾಪರ್‌ಗಳು ಅವರು ಓದಿದ ವಿಷಯಕ್ಕೆ ಸಂಬಂಧಿಸಿದಂತೆ ಅತಿ ಸರಳ ಪ್ರಶ್ನೆಗಳಿಗೂ ಉತ್ತರಿಸಲು ವಿಫಲರಾದ ಬೆನ್ನಲ್ಲಿ ಹಗರಣದ ವಾಸನೆ ಬಡಿದಿದೆ. ಕಲಾ ವಿಭಾಗದ ಟಾಪರ್‌ ಎನಿಸಿದ ರೂಬಿ ರೈಗೆ ಸಮಾಜಶಾಸ್ತ್ರ ಯಾವುದರ ಕುರಿತಾಗಿ ಎಂದು ಪ್ರಶ್ನಿಸಿದಾಗ ಅಡುಗೆಯ ಬಗ್ಗೆ ಎಂದು ಹೇಳಿ ಆಘಾತಗೊಳಿಸಿದ್ದಳು. ಈ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆ ಆರಂಭಿಸಿತ್ತು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>