Quantcast
Channel: VijayKarnataka
Viewing all articles
Browse latest Browse all 6795

ಏ.28ರಂದು ಮಾರ್ಗದರ್ಶಿ ಉಪಗ್ರಹ ಉಡಾವಣೆ

$
0
0

ಹೊಸ ಮೈಲುಗಲ್ಲು ಸ್ಥಾಪನೆಯತ್ತ ಇಸ್ರೊ ಅಂತಿಮ ಹೆಜ್ಜೆ

ಚೆನ್ನೈ: ಸ್ವದೇಶಿ ಪಥನಿರ್ದೇಶಕ ವ್ಯವಸ್ಥೆಯನ್ನು ಹೊಂದುವತ್ತ ಏ.28ರಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೊ ಅಂತಿಮ ಹೆಜ್ಜೆ ಇರಿಸಲಿದೆ.

ಏಳು ಉಪಗ್ರಹಗಳ ಮಾಲೆಯ ಅಂತಿಮ ಉಪಗ್ರಹವನ್ನು ಏ.28ರಂದು ಅಪರಾಹ್ನ ಕಕ್ಷೆಗೆ ಏರಿಸಲಾಗುತ್ತದೆ. ಪಿಎಸ್‌ಎಲ್‌ವಿ ರಾಕೆಟ್‌ ಮೂಲಕ ಉಪಗ್ರಹ ಉಡಾವಣೆಗೆ ಶ್ರೀಹರಿಕೋಟಾದಲ್ಲಿ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿಕ್ರಮ್‌ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾದ ಕೆ.ಶಿವನ್‌ ತಿಳಿಸಿದ್ದಾರೆ.

ಅಮೆರಿಕದ ಜಿಪಿಎಸ್‌ ಮಾದರಿಯಲ್ಲೇ ಭಾರತ ಸ್ವದೇಶಿ ಪಥ ನಿರ್ದೇಶಕ ವ್ಯವಸ್ಥೆ ಹೊಂದಲು ಕ್ರಮ ಕೈಗೊಂಡಿದೆ. ಇದರ ಮೊದಲ ಹಂತವಾಗಿ ಏಳು ಉಪಗ್ರಹಗಳ ಮಾಲೆಯನ್ನು ಕಕ್ಷೆಯಲ್ಲಿ ಜೋಡಿಸಲಾಗುತ್ತಿದೆ. ಐಆರ್‌ಎನ್‌ಎಸ್‌ಎಸ್‌ ಸರಣಿಯ ಆರು ಉಪಗ್ರಹಗಳು ಈಗಾಗಲೇ ಕಕ್ಷೆ ಸೇರಿವೆ. ಅಂತಿಮ ಉಪಗ್ರಹವಾದ ಐಆರ್‌ಎನ್‌ಎಸ್‌ಎಸ್‌-1ಜಿ ಅನ್ನು ಈ ಮಾಲೆಗೆ ಜೋಡಿಸುವ ಸಿದ್ಧತೆ ನಡೆದಿದೆ.

ಸನ್ನದ್ಧ ಸ್ಥಿತಿಯಲ್ಲಿ ಎರಡು ಉಪಗ್ರಹಗಳು

ಕಕ್ಷೆಯಲ್ಲಿ ಕಾರಾರ‍ಯಚರಿಸುತ್ತಿರುವ ಏಳು ಉಪಗ್ರಹಗಳ ಪೈಕಿ ಯಾವುದಾದರೂ ಒಂದು ಅಥವಾ ಎರಡು ಉಪಗ್ರಹ ಕೈಕೊಟ್ಟ ಪಕ್ಷದಲ್ಲಿ ಆ ಸ್ಥಾನವನ್ನು ತುಂಬಲು ಅನುಕೂಲವಾಗುವಂತೆ ಎರಡು ಉಪಗ್ರಹಗಳನ್ನು ಇಸ್ರೊ ಸಿದ್ಧಪಡಿಸಿ ಇರಿಸಿಕೊಂಡಿದೆ. ತಾಂತ್ರಿಕ ದೋಷಕ್ಕೊಳಗಾದ ಉಪಗ್ರಹದ ಸ್ಥಾನದಲ್ಲಿ ಹೊಸ ಉಪಗ್ರಹವನ್ನು ನೆಲೆಗೊಳಿಸಲಾಗುತ್ತದೆ.

ಅನ್ಯರ ಹಂಗಿಲ್ಲ

ಈಗ ಭಾರತ ಜಿಪಿಎಸ್‌ ವ್ಯವಸ್ಥೆಗೆ ಅಮೆರಿಕವನ್ನು ನೆಚ್ಚಿಕೊಂಡಿದೆ. ಕಕ್ಷೆಯಲ್ಲಿ 24 ಉಪಗ್ರಹಗಳ ಸರಮಾಲೆ ಜೋಡಿಸಿರುವ ಅಮೆರಿಕ ವಿಶ್ವಾದ್ಯಂತ ತನ್ನದೇ ಆದ ಜಿಪಿಎಸ್‌ ವ್ಯವಸ್ಥೆ ಹೊಂದಿದೆ. ರಷ್ಯಾ 'ಗ್ಲೊನಾಸ್‌' ಐರೋಪ್ಯ ಒಕ್ಕೂಟ' ಗೆಲಿಲಿಯೊ', ಚೀನಾ 'ಬೈಡೂ' ಎಂಬ ಸ್ವಂತ ಜಿಪಿಎಸ್‌ ಹೊಂದಿವೆ.



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>