Quantcast
Channel: VijayKarnataka
Viewing all articles
Browse latest Browse all 6795

ಬಿಗ್ ಬಿಗೆ 2 ಕೋಟಿ ಟ್ವಿಟರ್ ಫಾಲೋವರ್ಸ್‌

$
0
0

ಮುಂಬಯಿ : ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೆ ಕೋಟ್ಯಂತರ ಅಭಿಮಾನಿಗಳಿರುವುದು ನಿಜ. ಆದರೆ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲೂ ಅವರು 2 ಕೋಟಿಗೂ ಹೆಚ್ಚು ಫಾಲೋವರ್‌ಗಳನ್ನು ಹೊಂದುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

2010ರಲ್ಲಿ ಟ್ವಿಟರ್ ಖಾತೆ ತೆರೆದಿರುವ ಅಮಿತಾಭ್, ಸದಾ ಕಾಲ ಸಾಮಾಜಿಕ ವಿಷಯಗಳಿಗೆ ಸ್ಪಂದಿಸುತ್ತಾ ತಮ್ಮ ಖಾತೆಯನ್ನು ಸಕ್ರಿಯವಾಗಿಡುವ ಮೂಲಕ ಫಾಲೋವರ್‌ಗಳ ಪ್ರೀತಿ ಹೆಚ್ಚಿಸಿಕೊಂಡಿದ್ದಾರೆ. 73 ವರ್ಷದ ಬಿಗ್ ಬಿ ಅವರ ಟ್ವಿಟರ್ ಖಾತೆಯ ಫಾಲೋವರ್‌ಗಳ ಸಂಖ್ಯೆ ಈಗ ಎರಡು ಕೋಟಿ ತಲುಪಿದೆ. ಈ ಶ್ರೇಯಕ್ಕೆ ಪಾತ್ರರಾದ ಬಾಲಿವುಡ್‌ನ ಮೊಟ್ಟ ಮೊದಲ ಸೆಲೆಬ್ರಿಟಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಕುರಿತು ಸಂತಸ ವ್ಯಕ್ತಪಡಿಸಿರುವ ಅವರು, 'ಬಡೂಉಉಉಂಬಾ...!' 2 ಕೋಟಿ, ಎಲ್ಲರಿಗೂ ಧನ್ಯವಾದಗಳು,' ಎಂದು ಟ್ವೀಟ್ ಮಾಡಿದ್ದಾರೆ.

ಒಂದು ಕಾಲದಲ್ಲಿ ಬಾಲಿವುಡ್ ಆಳಿದ ಶ್ರೀದೇವಿ, ಮಾಧುರಿ ದೀಕ್ಷಿತ್ ಸೇರಿದಂತೆ ನಟಿಯರು, ನಟರೆಲ್ಲರೂ ಅಮಿತಾಭ್ ಅವರ ಫಾಲೋವರ್‌ಗಳಾಗಿದ್ದಾರೆ. ಇದುವರೆಗೂ ಅವರು 48 ಸಾವಿರ ಟ್ವಿಟ್ಸ್ ಮಾಡಿದ್ದಾರೆ.

ಶಾರೂಖ್ ಪೈಪೋಟಿ: ಅಮಿತಾಭ್ ಬಚ್ಚನ್ ನಂತರದ ಸ್ಥಾನದಲ್ಲಿ ಶಾರೂಖ್ ಖಾನ್ 1.86 ಕೋಟಿ ಫಾಲೋವರ್‌ಗಳನ್ನು ಹೊಂದುವ ಮೂಲಕ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಆಮಿರ್ ಖಾನ್ (1.69 ಕೋಟಿ), ಸಲ್ಮಾನ್ ಖಾನ್ (1.68 ಕೋಟಿ), ಪ್ರಿಯಾಂಕಾ ಛೋಪ್ರಾ (1.32 ಕೋಟಿ) ಅವರು ಟ್ವಿಟರ್ ಫಾಲೋವರ್‌ಗಳನ್ನು ಹೊಂದಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>