ರಾಮ್ಲೀಲಾ ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ನಲ್ಲಿ ಅಮೂಲ್ಯ ಭಾಗವಹಿಸಿದ್ದಾಗ 103 ಡಿಗ್ರಿ ಜ್ವರ ಇತ್ತು. ಆದರೂ ಶೂಟಿಂಗ್ನಲ್ಲಿ ಭಾಗವಹಿಸಿ ಚಿತ್ರತಂಡದಿಂದ ಮೆಚ್ಚುಗೆ ಗಳಿಸಿದ್ದಾರೆ.
- ಎಚ್. ಮಹೇಶ್
ಕಲಾವಿದರು, ಜ್ವರ ಬಂದರೆ ಶೂಟಿಂಗ್ನಿಂದ ಬ್ರೇಕ್ ತೆಗೆದುಕೊಳ್ಳುತ್ತಾರೆ. ಆದರೆ ಅಮೂಲ್ಯ ಕೊಂಚ ಭಿನ್ನ. ಜ್ವರದಿಂದ ಬಳಲುತ್ತಿದ್ದಾಗಲೂ ರಾಮ್ಲೀಲಾ ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ನಲ್ಲಿ ಭಾಗವಹಿಸಿ ಚಿತ್ರತಂಡದಿಂದ ಮೆಚ್ಚುಗೆ ಗಳಿಸಿದ್ದಾರೆ.
ಕ್ಲೈಮಾಕ್ಸ್ ಶೂಟ್ ಮಾಡುವಾಗ ಅಮೂಲ್ಯಗೆ 103 ಡಿಗ್ರಿ ಜ್ವರ ಇತ್ತು. ಅಂದು ರವಿಕಾಳೆ ಹಾಗೂ ಅಮೂಲ್ಯ ಕಾಂಬಿನೇಶನ್ನಲ್ಲಿ ಶೂಟಿಂಗ್ ಮಾಡಬೇಕಿತ್ತು. ಅಂದು ಬಿಟ್ಟರೆ ಉಳಿದ ದಿನ ರವಿಕಾಳೆ ಶೂಟಿಂಗ್ಗೆ ಸಿಗುವುದು ಕಷ್ಟವಾಗಿತ್ತು. ಅಮೂಲ್ಯ ಅಂದು ಶೂಟಿಂಗ್ನಲ್ಲಿ ಭಾಗವಹಿಸಲೇಬೇಕಿತ್ತು. ಆಗ ಜ್ವರವನ್ನು ಲೆಕ್ಕಿಸದೇ ಈ ನಟಿ ಶೂಟಿಂಗ್ನಲ್ಲಿ ಭಾಗವಹಿಸಿದರು ಎಂದು ಅಮೂಲ್ಯ ವೃತ್ತಿಪರತೆ ಕೊಂಡಾಡಿದರು ಚಿತ್ರದ ನಿರ್ದೇಶಕ ವಿಜಯ್.
ರಾಮ್ಲೀಲಾ ಚಿತ್ರದಲ್ಲಿ ಅಮೂಲ್ಯ ಕಾಲೇಜ್ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಡಬಲ್ ಶೇಡ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಪ್ರಾರಂಭದಲ್ಲಿ ಬಜಾರಿ ಹುಡುಗಿಯಾಗಿ, ನಂತರ ಸಾಫ್ಟ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಪೋಸ್ಟರ್ಗಳಲ್ಲಿ ಅಮೂಲ್ಯ ಡಿಫರೆಂಟ್ ಆಗಿ ಕಾಣಿಸುತ್ತಿದ್ದಾರೆ. ಅವರ ಹೇರ್ ಸ್ಟೈಲ್, ಮೇಕಪ್ ಎಲ್ಲವೂ ಡಿಫರೆಂಟ್. ಇದು ಹೇಗೆ ಸಾಧ್ಯವಾಯಿತು ಎಂದು ನಿರ್ದೇಶಕರನ್ನು ಕೇಳಿದಾಗ, ಅವರು ಮುಂಬಯಿ, ಹೈದರಾಬಾದ್ ಮೇಕಪ್ಮನ್ಗಳತ್ತ ಬೆರಳು ತೋರಿಸಿದರು. ಬಾಲಿವುಡ್ ನಟಿ ಇಲಿಯಾನಾಗೆ ಮೇಕಪ್ ಮಾಡುವ ಮೇಕಪ್ ತಂಡ ಅಮೂಲ್ಯಗೆ ಮೇಕಪ್ ಮಾಡಿದೆ. ಬೆಂಗಳೂರಿನ ಮೇಕಪ್ಮನ್ಗಳು ದಿನಕ್ಕೆ 2000ರಿಂದ 2500 ರೂ. ವೇತನ ಪಡೆದರೆ, ಅದೇ ಇವರು ದಿನಕ್ಕೆ 15000 ರೂ. ವೇತನ ಪಡೆದಿದ್ದಾರೆ. ಚಿತ್ರದ ನಾಯಕ, ನಾಯಕಿಗೆ ಪ್ರತ್ಯೇಕ ಮೇಕಪ್ಮನ್ಗಳನ್ನು ಕರೆಸಲಾಗಿತ್ತು. ಹೊಸ ಲುಕ್ ಬಗ್ಗೆ ಅಮೂಲ್ಯ ಕೂಡ ಫುಲ್ ಖುಷಿಯಾಗಿದ್ದಾರೆ.
'ಶೂಟಿಂಗ್ ಸಮಯದಲ್ಲಿ ನನ್ನ ಲುಕ್ ಹೇಗೆ ಕಾಣುತ್ತದೆ ಎಂದು ಗೊತ್ತಿರಲಿಲ್ಲ. ಆದರೆ ಡಬ್ಬಿಂಗ್ ಮಾಡುವ ಸಂದರ್ಭದಲ್ಲಿ ನನ್ನ ಲುಕ್ ನೋಡಿ ಇದು ನಾನೇನಾ ಇದು ಎಂದು ಅನಿಸಿತು. ತೆರೆಯ ಮೇಲೆ ನನ್ನ ನೋಡಿ ನಾನೇ ಇಷ್ಟಪಟ್ಟೆ. ಇದಕ್ಕಿಂತ ಮೊದಲು ಯಾವ ಚಿತ್ರಗಳಲ್ಲೂ ನಾನು ಈ ರೀತಿ ಕಾಣಿಸಿಕೊಂಡಿರಲಿಲ್ಲ. ನಿರ್ಮಾಪಕ ಸೌಂದರ್ಯ ಜಗದೀಶ್ ದುಬಾರಿ ಹಣ ಕೊಟ್ಟು ಮುಂಬಯಿಯಿಂದ ಮೇಕಪ್ಮನ್ಗಳನ್ನುಕರೆಸಿದ್ದರು. ನಾನು ಇಷ್ಟೊಂದು ಚೆನ್ನಾಗಿ ಕಾಣುವುದಕ್ಕೆ ಕಾರಣಕರ್ತರಾದವರಿಗೆ ಥ್ಯಾಂಕ್ಸ್ ಹೇಳಲು ಇಷ್ಟಪಡುತ್ತೇನೆ' ಎಂದರು ಅಮೂಲ್ಯ.
↧
ಡಬಲ್ ಶೇಡ್ ಲೀಲೆ
↧