Quantcast
Channel: VijayKarnataka
Viewing all articles
Browse latest Browse all 6795

ಸಿನಿತಾರೆಯರ ದೀಪಾವಳಿ

$
0
0

ದೀಪಾವಳಿ ಹಬ್ಬದಾಚರಣೆಗೆ ಸ್ಯಾಂಡಲ್‌ವುಡ್ ತಾರೆಯರು ಉತ್ಸುಕರಾಗಿದ್ದಾರೆ. ಪಟಾಕಿ ಹೊಡೆಯದೇ ಇದನ್ನು ಆಚರಿಸಲು ಇವರೆಲ್ಲ ನಿರ್ಧರಿಸಿದ್ದು ವಿಶೇಷ.

- ಎಚ್. ಮಹೇಶ್

ದೀಪಾವಳಿ ಹಬ್ಬದ ಸಂಭ್ರಮ ಆಚರಿಸಲು ಸಿನಿ ತಾರೆಯರು ಸಜ್ಜಾಗಿದ್ದಾರೆ. ಶೂಟಿಂಗ್‌ನಿಂದ ರಜಾ ಪಡೆದು ಫ್ಯಾಮಿಲಿ ಜೊತೆ ಬಿಸಿ ಬಿಸಿ ಕಜ್ಜಾಯ ತಿನ್ನುವ ಕಾತರದಲ್ಲಿದ್ದಾರೆ. ಈ ಹಬ್ಬಕ್ಕೆ ಎಲ್ಲರೂ ಭಾವಿಸಿರುವಂತೆ ಕಲಾವಿದರು ಪಟಾಕಿ ಹೊಡೆದು ಸಂಭ್ರಮಿಸುತ್ತಿಲ್ಲ. ಬದಲಿಗೆ ಶಬ್ದರಹಿತ,ಪರಿಸರಕ್ಕೆ ಪೂರಕವಾಗಿ ದೀಪಾವಳಿ ಆಚರಿಸಲು ನಿರ್ಧರಿಸಿದ್ದಾರೆ.

ಮಾಸ್ಟರ್ ಪೀಸ್ ಚಿತ್ರ ರಿಲೀಸ್ ಮಾಡುವ ಸಿದ್ದತೆಯಲ್ಲಿದ್ದಾರೆ ಯಶ್. ಹಾಗೆಯೇ ಈ ವರ್ಷದ ದೀಪಾವಳಿಯನ್ನು ಪಟಾಕಿ ಹೊಡೆಯದೇ, ಬೇರೆಯವರಿಗೆ ತೊಂದರೆಯನ್ನುಂಟು ಮಾಡದೇ ಆಚರಿಸಲು ನಿರ್ಧರಿಸಿದ್ದಾರೆ. 'ಹಬ್ಬವನ್ನು ಎಲ್ಲರೂ ಖುಷಿಯಿಂದ ಆಚರಿಸಿ. ಆದರೆ ಮಕ್ಕಳ ಕೈಗೆ ಪಟಾಕಿ ಕೊಟ್ಟು ಅವರ ಕಣ್ಣುಗಳನ್ನು ಹಾಳು ಮಾಡಬೇಡಿ. ಪರಿಸರ ಹಾಳು ಮಾಡಬೇಡಿ. ಎಲ್ಲರೂ ಶಬ್ಬ ರಹಿತ ದೀಪಾವಳಿ ಆಚರಿಸಲು ಪಣ ತೊಡೋಣ' ಎನ್ನುತ್ತಾರೆ ಯಶ್.

ಸುದೀಪ್ ಈ ವರ್ಷ ಸಿಕ್ಕಾಪಟ್ಟೆ ಬಿಝಿ. ಅವರು ಹಬ್ಬದ ದಿನ ಮನೆಯಲ್ಲಿರುವುದು ಅನುಮಾನ ಎಂದು ಹೇಳುತ್ತಿದ್ದಾರೆ. ಒಂದು ಕಡೆ ಚೆನ್ನೈನಲ್ಲಿ ಶೂಟಿಂಗ್, ಮತ್ತೊಂದು ಕಡೆ ಬಿಗ್ ಬಾಸ್ ರಿಯಾಲಿಟಿ ಷೋ ನಡೆಸಿಕೊಡುವ ಜವಾಬ್ದಾರಿ ಇದೆ. 'ದೀಪಾವಳಿ ಹಬ್ಬಕ್ಕೆ ನಾಡಿನ ಜನತೆಗೆ ಶುಭಾಷಯ. ಪ್ರತಿದಿನ ಟೆನ್ಷನ್ ಇರುತ್ತದೆ. ಹಬ್ಬದ ದಿನ ಅದೆಲ್ಲವನ್ನೂ ಬಿಟ್ಟು ಫ್ಯಾಮಿಲಿ ಜತೆ ಹಬ್ಬ ಆಚರಿಸಿ. ಮಕ್ಕಳ ಜತೆ ಪಟಾಕಿ ಹೊಡೆಯುವಾಗ ಎಚ್ಚರಿಕೆಯಿಂದಿರಿ. ನಮ್ಮ ಖುಷಿ ಮತ್ತೊಬ್ಬರಿಗೆ ಕಿರಿಕಿರಿ ಕೊಡದಂತೆ ಇರಲಿ' ಎಂದರು ಸುದೀಪ್.

ಗಣೇಶ್ ಫ್ಯಾಮಿಲಿ ಜತೆ ದೀಪಾವಳಿ ಆಚರಿಸುತ್ತಿದ್ದಾರೆ. ಅವರದ್ದು ರಾಜರಾಜೇಶ್ವರಿ ನಗರದ ಹೊಸ ಮನೆಯಲ್ಲಿ ಮೊದಲ ದೀಪಾವಳಿ. 'ನನಗೆ ಕಜ್ಜಾಯ ತುಂಬಾ ಇಷ್ಟ. ಆದರೆ ನನ್ನ ಮಗಳು ಚಾರಿತ್ರ್ಯ ಪಟಾಕಿ ಬೇಕು ಎಂದು ಕೇಳುತ್ತಿದ್ದಾಳೆ. ಅದರಿಂದ ಶಬ್ದ ಮಾಲಿನ್ಯ ,ಪರಿಸರ ಮಾಲಿನ್ಯ ಆಗುತ್ತದೆ ಎಂದು ಹೇಳಿದ್ದೇನೆ. ಅವಳಿನ್ನೂ ಕನ್‌ವಿನ್ಸ್ ಆಗಿಲ್ಲ. ಎಲ್ಲ ಪೋಷಕರು ಮಕ್ಕಳಿಗೆ ಪಟಾಕಿ ಯಾಕೆ ಸಿಡಿಸಬಾರದು ಎಂದು ಕನ್‌ವಿನ್ಸ್ ಮಾಡಿ' ಎಂದರು.

ರಾಗಿಣಿಗೆ ಪಟಾಕಿ ಹೊಡೆಯುವುದು ಇಷ್ಟ ಇಲ್ಲವಂತೆ. 'ಶಬ್ದ ಅಂದರೆ ನನಗೆ ಅಲರ್ಜಿ. ನಾನು ಚಿಕ್ಕವಳಿದ್ದಾಗಲೂ ಪಟಾಕಿ ಸಿಡಿಸುತ್ತಿರಲಿಲ್ಲ. ಯಾರಾದರೂ ಪಟಾಕಿ ಹೊಡೆಯತ್ತಾರೆ ಎಂದರೆ ನಾನು ಮನೆ ಬಿಟ್ಟು ಹೊರಗೆ ಬರುತ್ತಿರಲಿಲ್ಲ. ಯಾರೂ ಪಟಾಕಿ ಹೊಡೆದು ಬೇರೆಯವರ ನೆಮ್ಮದಿ ಹಾಳು ಮಾಡಬೇಡಿ' ಎನ್ನುತ್ತಾರೆ ಈ ನಟಿ.

ರಾಧಿಕಾ ಪಂಡಿತ್ ಅವರಿಗೆ ಹಬ್ಬದ ದಿನ ಸಿಹಿ ತಿನಿಸು ತಿನ್ನುವುದು ಎಂದರೆ ತುಂಬಾನೇ ಇಷ್ಟವಂತೆ. 'ಅಮ್ಮ ಅಂದು ವೆರೈಟಿ ತಿನಿಸುಗಳನ್ನು ಮಾಡುತ್ತಾರೆ. ಎಲ್ಲ ರೀತಿಯ ಸಿಹಿ ತಿನಿಸು ತಿನ್ನುತ್ತೇನೆ. ಆದರೆ ಪಟಾಕಿ ಸಿಡಿಸುವುದರಿಂದ ನಾನು ಯಾವತ್ತೂ ದೂರ' ಎಂದು ಹೇಳಲು ಮರೆಯುವುದಿಲ್ಲ.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>