Quantcast
Channel: VijayKarnataka
Viewing all articles
Browse latest Browse all 6795

ನಿತೀಶ್ ಮಹಾನ್ ನಾಯಕ: ಶತ್ರುಘ್ನ ಸಿನ್ಹಾ ಮೆಚ್ಚುಗೆ

$
0
0

ಬಿಜೆಪಿಗೆ ಮುಜುಗರ ತಂದಿಟ್ಟ ಸಂಸದ ಸಿನ್ಹಾ
ಪಟನಾ : ಬಿಹಾರ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡ ನಂತರವೂ ಸಂಸದ ಶತ್ರುಘ್ನ ಸಿನ್ಹಾ ಅವರು ಜೆಡಿಯು ನಾಯಕ ನಿತೀಶ್ ಕುಮಾರ್ ಅವರನ್ನು ಸೋಮವಾರ ಖುದ್ದು ಭೇಟಿ ಮಾಡಿ ಮೆಚ್ಚುಗೆ ಸೂಚಿಸುವ ಮೂಲಕ ಮಾತೃಪಕ್ಷಕ್ಕೆ ಇನ್ನಷ್ಟು ಮುಜುಗರ ತಂದಿಟ್ಟಿದ್ದಾರೆ. ಭಾನುವಾರವಷ್ಟೇ ನಿತೀಶ್ ಅವರನ್ನು ಬಹಿರಂಗವಾಗಿಯೇ ಹಾಡಿಹೊಗಳಿದ್ದ ಸಿನ್ಹಾ ಅವರು ಸೋಮವಾರ ಖುದ್ದು ಅವರ ಮನೆಗೆ ತೆರಳಿ ಮೆಚ್ಚುಗೆ ಸೂಚಿಸಿರುವುದು ಬಿಜೆಪಿ ವರಿಷ್ಠರ ಕಣ್ಣು ಕೆಂಪಗಾಗಿಸಿದೆ.

ನಿತೀಶ್ ಜತೆಗಿನ ಸಭೆ ಬಳಿಕ ಪ್ರತಿಕ್ರಿಯಿಸಿರುವ ಸಿನ್ಹಾ, ''ಇದು ಪ್ರಜಾಪ್ರಭುತ್ವಕ್ಕೆ ಸಂದ ಜಯವಾಗಿದೆ. ನಿತೀಶ್ ಮಹಾನ್ ನಾಯಕ. ಅವರನ್ನು ಜನ ಆಯ್ಕೆ ಮಾಡಿರುವುದರಿಂದ ಬಿಹಾರಕ್ಕೆ ಒಳಿತಾಗಲಿದೆ,'' ಎಂದು ಗುಣಗಾನ ಮಾಡಿದ್ದಾರೆ. ಅಲ್ಲದೇ ಮಾತೃಪಕ್ಷಕ್ಕೆ ಕಿರಿಕಿರಿ ತರಿಸಬೇಕೆಂದು ಈ ಭೇಟಿ ಕೈಗೊಂಡಿಲ್ಲ. ಇದೊಂದು ಸ್ನೇಹಯುತ ಭೇಟಿಯೇ ಹೊರತು ಮತ್ಯಾವ ಉದ್ದೇಶವಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.

''ಬಹುಕಾಲದಿಂದ ಬಿಜೆಪಿಯಲ್ಲಿದ್ದು ಪಕ್ಷದ ಒಳಿತಿಗೆ ದುಡಿದಿದ್ದೇನೆ. ಆದಾಗ್ಯೂ ಕಮಲ ಪಾಳಯದ ನಾಯಕರು ಈ ಭೇಟಿಯನ್ನೇ ಮುಂದಿಟ್ಟುಕೊಂಡು ನನ್ನ ವಿರುದ್ಧ ಟೀಕಾಸ್ತ್ರಗಳನ್ನು ಪ್ರಯೋಗಿಸಿದರೆ ನಾನದಕ್ಕೆ ತಲೆಕೆಡಿಸಿಕೊಳ್ಳಲಾರೆ. ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್‌ರನ್ನೂ ಭೇಟಿಯಾಗುತ್ತೇನೆ,'' ಎಂದು ಸಿನ್ಹಾ ಹೇಳಿದ್ದಾರೆ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>