Quantcast
Channel: VijayKarnataka
Viewing all articles
Browse latest Browse all 6795

ಉತ್ತರ ಪ್ರದೇಶದಲ್ಲಿ ಜನಿಸಿದೆ ಭೀಮಕಾಯದ ಮಗು

$
0
0

ಲಖನೌ: ಭಾರತದ ಅತಿ ತೂಕದ ಮಗು ಉತ್ತರ ಪ್ರದೇಶದಲ್ಲಿ ಜನಿಸುವ ಮೂಲಕ ಜಗತ್ತು ನೋಡುವ ಮುನ್ನವೇ ದಾಖಲೆ ಬರೆದಿದೆ.

ಈ ಗಂಡು ಮಗುವಿನ ತೂಕ 7 ಕೆಜಿ. ಆಸ್ಪತ್ರೆಗೆ ದಾಖಲಾದ 15 ನಿಮಿಷದಲ್ಲಿ ಸಹಜ ಹೆರಿಗೆಯ ಮೂಲಕ ಈ ಮಗು ಜನ್ಮ ತಾಳಿದೆ. ಹೆರಿಗೆ ನಂತರ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಒರಾಯ್‌ನಲ್ಲಿ ವಾಸವಿರುವ ಫಿರ್ದೋಸ್ ಖಟುನ್ ಅವರು ಜನ್ಮ ನೀಡಿರುವ ಒಂಬತ್ತನೇ ಮಗು ಇದು. ಇದುವರೆಗೆ ಅವರು ಯಾವುದೇ ಆಸ್ಪತ್ರೆಗೆ ದಾಖಲಾಗದೆ ಸೂಲಗಿತ್ತಿಯರ ನೆರವಿನೊಂದಿಗೆ ಮನೆಯಲ್ಲೇ ಎಂಟು ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ, ಈ ಸಾರಿ ಹೆರಿಗೆ ನೋವು ಜಾಸ್ತಿಯಾದ ಕಾರಣ ಮಗುವಿನ ತಂದೆ ಖಟುನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ರಾಜಸ್ಥಾನದಲ್ಲಿ ಕಳೆದ ತಿಂಗಳು ಜನಿಸಿದ್ದ ಮಗುವೊಂದು ಆರು ಕೆಜಿ ತೂಗುತ್ತಿತ್ತು. ಇದು ದೇಶದ ಅತಿ ತೂಕದ ಮಗು ಎಂಬ ಕೀರ್ತಿಗೆ ಪಾರಾಗಿತ್ತು. ಇದೇಗ ಆ ಮಗುವಿನ ದಾಖಲೆಯನ್ನು ಇದು ಮುರಿದಿದೆ.

ಭೀಮಕಾಯದ ಈ ಮಗು ಏಳು ಕೆಜಿ ತೂಗುತ್ತದೆ ಎಂಬ ಅಂದಾಜು ವೈದ್ಯರಿಗೂ ಕೂಡ ಇರಲಿಲ್ಲ. ''ಮಗು ಹೊರ ಬರುವಾಗ ಅದರ ಭುಜವು ಸಿಕ್ಕಿಹಾಕಿಕೊಂಡಿತ್ತು. ಅದು ಬಿಟ್ಟರೆ ಇನ್ಯಾವುದೇ ಸಮಸ್ಯೆ ಎದುರಾಗಲಿಲ್ಲ. ಹದಿನೈದು ನಿಮಿಷದಲ್ಲಿ ಆ ಮಗು ನನ್ನ ಕೈನಲ್ಲಿತ್ತು,'' ಎಂದು ಹೆರಿಗೆ ಮಾಡಿದ ವೈದ್ಯರು ಹೇಳಿದ್ದಾರೆ.

ಪಾಯಿಂಟ್ಸ್
* ಫಿರ್ದೊಸ್ ಖಟುನ್ ಅವರ ಒಂಬತ್ತನೇ ಮಗುವಾದ ಇದು 15 ನಿಮಿಷಗಳಲ್ಲಿ ಸಹಜ ಹೆರಿಗೆಯ ಮೂಲಕ ಜನಿಸಿದೆ.

* ಈ ಮಗುವು 7 ಕೆಜಿ ತೂಗುತ್ತಿದ್ದು, ದೇಶದ ಅತಿ ತೂಕದ ಮಗು ಎಂಬ ಕೀರ್ತಿಗೆ ಪಾತ್ರವಾಗಿದೆ.

* ಸ್ಥೂಲಕಾಯತೆಗೆ ಕಾರಣವಾಗುವ ಮಧುಮೇಹ ಈ ಮಗುವಿಗಿಲ್ಲ

* ರಾಜಸ್ತಾನದಲ್ಲಿ ಕಳೆದ ತಿಂಗಳು ಜನಿಸಿದ ಮಗುವೊಂದು 6 ಕೆಜಿ ತೂಗುತ್ತಿತ್ತು.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ