Quantcast
Channel: VijayKarnataka
Viewing all articles
Browse latest Browse all 6795

ಪ್ರಾಣಿ ಪ್ರಿಯೆ

$
0
0

ಪ್ರಾಣಿಗಳು ಕೂಡ ಈ ನಿಸರ್ಗದ ಅವಿಭಾಜ್ಯ ಅಂಗ. ಹೀಗಾಗಿ ಅವುಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಅಂತಾರೆ ಪ್ರಿಯಾಮಣಿ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಪ್ರಿಯಾಮಣಿಗೆ ಪ್ರಾಣಿಗಳ ಮೇಲೆ ಅಗಾಧ ಪ್ರೀತಿ. ಹೀಗಾಗಿಯೇ ಅವರು ಯಾವಾಗಲೂ ಪ್ರಾಣಿ ದಯಾ ಸಂಘದ ಜತೆ ಗುರುತಿಸಿಕೊಳ್ಳುತ್ತಾರೆ. ಸಂದರ್ಭ ಸಿಕ್ಕಾಗೆಲ್ಲ ತಮಗಿರುವ ಪ್ರಾಣಿಗಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

ಸದ್ಯ ಇವರು 'ಪೀಪಲ್ ಫಾರ್ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಎನಿಮಲ್' ಸಂಸ್ಥೆಯ ಜತೆ ಕೆಲಸ ಮಾಡುತ್ತಿದ್ದು, ನಾಯಿ ಮತ್ತು ಬೆಕ್ಕುಗಳ ರಕ್ಷಣೆಗೆ ಪಣ ತೊಟ್ಟಿದ್ದಾರೆ. 'ಸಾಕು ಪ್ರಾಣಿಗಳ ಬಗ್ಗೆ ನನಗೆ ಯಾವಾಗಲೂ ದಯೆ ಇದೆ. ಚಿಕ್ಕವಳಿದ್ದಾಗಲೇ ನಾನು ನಾಯಿ ಮತ್ತು ಬೆಕ್ಕುಗಳ ಜತೆ ಆಟ ಆಡುತ್ತಾ ಬೆಳೆದವಳು. ಅವುಗಳಿಗೆ ಹಿಂಸೆ ಕೊಡುವ ಸನ್ನಿವೇಶ ನೋಡಿದರೆ ಕೋಪ ಬರುತ್ತಿತ್ತು. ಪ್ರಾಣಿಗಳೆಂದರೆ ಅವು ನಮ್ಮ ಹಾಗೆಯೇ. ಹೀಗಾಗಿ ಅವುಗಳ ರಕ್ಷಣೆ ನಮ್ಮ ಜಬಾವ್ದಾರಿ ಕೂಡ. ಪ್ರಾಣಿಗಳ ಹಿಂಸೆ ಯಾವ ಕಾರಣಕ್ಕೂ ಸಲ್ಲದು' ಅಂತಾರೆ ಈ ನಟಿ.

ಇವರು ಯಾವುದೇ ದೇಶಕ್ಕೆ ಭೇಟಿ ನೀಡಲಿ, ಅಲ್ಲಿನ ಪ್ರಾಣಿ ದಯಾ ಸಂಘದ ಬಗ್ಗೆ ತಿಳಿದುಕೊಳ್ಳುತ್ತಾರೆ. ಅಲ್ಲಿಗೆ ಭೇಟಿ ಕೊಟ್ಟು ಅಲ್ಲಿನ ಸದಸ್ಯರಿಗೆ ಹುಮ್ಮಸ್ಸು ತುಂಬುತ್ತಾರೆ. ಅಲ್ಲದೇ ಅಪಾಯದಲ್ಲಿದ್ದ ಅದೆಷ್ಟೋ ಪ್ರಾಣಿಗಳಿಗೆ ರಕ್ಷಣೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ನಟಿಯರು ಅಂದಾಕ್ಷಣ, ಇವರು ಕೇವಲ ಬಣ್ಣ ಹಚ್ಚಿಕೊಂಡು ಕ್ಯಾಮೆರಾ ಎದುರು ನಟಿಸುತ್ತಾರೆ ಎಂದು ಅನೇಕರು ಅಂದುಕೊಳ್ಳುವುದುಂಟು. ಆದರೆ ಚಿತ್ರರಂಗದ ಸಾಕಷ್ಟು ನಟ, ನಟಿಯರು ಪ್ರಾಣಿಗಳ ಬಗ್ಗೆ ವಿಶೇಷ ಅಕ್ಕರೆ ತೋರುತ್ತಿದ್ದಾರೆ. ಆ ಸಾಲಿಗೆ ಈ ಪ್ರಿಯಾ ಕೂಡ ಸೇರ್ಪಡೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>