Quantcast
Channel: VijayKarnataka
Viewing all articles
Browse latest Browse all 6795

ಲವ್ ಸ್ಟೋರಿಗೆ ಬಂದ ಆ್ಯಕ್ಟರ್

$
0
0

ಧಾರಾವಾಹಿಯೊಂದರಲ್ಲಿ ನಟಿಸಿ ಗುರುತಿಸಿಕೊಂಡಿದ್ದ ಪ್ರವೀಣ್ ಈ ಲವ್ ಸ್ಟೋರಿಯ ನಾಯಕ. ಯುವಕನಾದರೂ ಮಗುವಿನಂತೆಯೇ ಇದ್ದ ಹುಡುಗನ ಬಾಳಲ್ಲಿ ಹುಡುಗಿಯೊಬ್ಬಳ ಪ್ರವೇಶ ಆದಾಗ ಏನಾಗುತ್ತದೆ ಎಂಬುದೇ ಇಲ್ಲಿನ ಕತೆ.

- ಶರಣು ಹುಲ್ಲೂರು

ನಿರ್ದೇಶಕ ಸುನಿ ಮಾತು ಕೊಟ್ಟರೆ ಅದನ್ನು ಖಂಡಿತ ಉಳಿಸಿಕೊಳ್ಳುತ್ತಾರೆ. ಅದನ್ನು ಅವರು ಪದೇ ಪದೇ ಸಾಬೀತು ಪಡಿಸಿದ್ದಾರೆ. ಎರಡೂವರೆ ವರ್ಷಗಳ ಹಿಂದೆ ಪ್ರವೀಣ್ ಎಂಬ ಹುಡುಗನಿಗೆ ಹೀರೋ ಮಾಡುವುದಾಗಿ ಹೇಳಿದ್ದರು. ಕೊಟ್ಟ ಮಾತಿನಂತೆ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿಗೆ' ನಾಯಕನನ್ನಾಗಿ ಸುನಿ ಆಯ್ಕೆ ಮಾಡಿದ್ದಾರೆ. ಪ್ರವೀಣ್ ಕೂಡ ಸುನಿಯ ಕನಸಿನಂತೆಯೇ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಸಿಂಪಲ್ಲಾಗೊಂದ್ ಲವ್ ಸ್ಟೋರಿ ಸಿನಿಮಾದ ಮೂಲಕ ಸುನಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದವರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲೂ ಸಾಕಷ್ಟು ಸದ್ದು ಮಾಡಿತ್ತು. ಹೀಗಾಗಿ ರಾತ್ರೋರಾತ್ರಿ ಸ್ಟಾರ್ ಡೈರೆಕ್ಟರ್ ಆದರು. ಜತೆಗೆ ತಮ್ಮ ತಂಡವನ್ನೂ ಅವರು ಹಾಗೆಯೇ ಬೆಳೆಸಿದರು. ಈಗ ಮತ್ತೆ ಅದೇ ಮಾದರಿಯನ್ನು ಅನುಸರಿಸುತ್ತಿದ್ದಾರೆ. ತಮಗೆ ಪರಿಚಯ ಇರುವ ಕಲಾವಿದರ ಮತ್ತು ತಂತ್ರಜ್ಞರಲ್ಲಿ ಪ್ರತಿಭೆ ಇದ್ದರೆ, ಅವರಿಗೆ ಸೂಕ್ತ ಅವಕಾಶವನ್ನು ಕಲ್ಪಿಸುತ್ತಿದ್ದಾರೆ.

'ಸಿಂಪಲ್ಲಾಗೊಂದ್ ಲವ್‌ಸ್ಟೋರಿ ಸಿನಿಮಾ ಆಗ ತಾನೆ ಮುಗಿದಿತ್ತು. ಆಗ ನಾನು ಮತ್ತು ಸುನಿ ಅವರು ಭೇಟಿ ಆಗಿದ್ದೆವು. ಆಗಲೇ ಅವರು ಮುಂದಿನ ಪ್ರಾಜೆಕ್ಟ್‌ನಲ್ಲಿ ನೀನು ಕೆಲಸ ಮಾಡುತ್ತೀಯಾ ಅಂದಿದ್ದರು. ಹೇಳಿದಂತೆ ನಡೆದುಕೊಂಡಿದ್ದಾರೆ. ಒಳ್ಳೆಯ ಪಾತ್ರವನ್ನೇ ನನಗಾಗಿ ಕೊಟ್ಟಿದ್ದಾರೆ' ಅಂತಾರೆ ಪ್ರವೀಣ್.

ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿಯಲ್ಲಿ ಪ್ರವೀಣ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಖುಷಿ ಅನ್ನುವ ಪಾತ್ರ ನಿರ್ವಹಿಸಿದ್ದಾರೆ. ಹಾಗಂತ ಇವರಿಗೆ ನಟನೆಯೇನೂ ಹೊಸದಲ್ಲ. ಸಾವಿರಾರು ಕಂತುಗಳಲ್ಲಿ ಪ್ರಸಾರ ಕಂಡ ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದರು. ಕಿರುತೆರೆಯಲ್ಲಿ ಪ್ರವೀಣ್ ಸ್ಟಾರ್ ನಟ. ಇದೇ ಮೊದಲ ಬಾರಿಗೆ ಇವರು ಹಿರಿತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ.

'ಇನ್ನೊಂದ್ ಲವ್ ಸ್ಟೋರಿಯಲ್ಲಿ ನನ್ನದು ಜವಾಬ್ದಾರಿ ಇಲ್ಲದ ಹುಡುಗನ ಪಾತ್ರ. ಟೀನೇಜ್ ದಾಟಿದ್ದರೂ, ಇನ್ನೂ ನಾನು ಮಕ್ಕಳಂತೆಯೇ ವರ್ತಿಸುತ್ತೇನೆ. 3ನೇ ಕ್ಲಾಸ್‌ನ ಹುಡುಗರೇ ನನ್ನ ಗೆಳೆಯರು. ಇಂತಹ ಹುಡುಗನ ಜೀವನದಲ್ಲಿ ಹುಡುಗಿಯೊಬ್ಬಳ ಪ್ರವೇಶ ಆಗುತ್ತದೆ. ಆನಂತರ ಅವನ ಜೀವನದಲ್ಲಿ ಏನೆಲ್ಲ ಘಟನೆಗಳು ನಡೆಯುತ್ತವೆ ಅನ್ನುವುದು ಸಿನಿಮಾ' ಅಂತಾರೆ ಈ ನಟ.

ಮೇಘನಾ ಗಾಂವ್ಕರ್ ಈ ಸಿನಿಮಾದ ನಾಯಕಿ. ರಾಧಾ ಕಲ್ಯಾಣ ಧಾರಾವಾಹಿಯನ್ನು ನಿರ್ಮಿಸಿದ್ದ ಅಶು ಬೆದ್ರ, ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸುನಿ ಮತ್ತೊಂದು ಲವ್ ಸ್ಟೋರಿಯ ಮೂಲಕ ಪ್ರೇಕ್ಷಕರಿಗೆ ಮುಖಾಮುಖಿ ಆಗುತ್ತಿದ್ದಾರೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>