Quantcast
Channel: VijayKarnataka
Viewing all articles
Browse latest Browse all 6795

ನನ್ನ ನಟನೆ ಓಕೆ ಆದಾಗ ಖುಷಿಯಿಂದ ಕುಣೀತಿದ್ದೆ

$
0
0

ಹರ್ಷಿಕಾ ಪೂಣಚ್ಚ ಮತ್ತೆ ಸುದ್ದಿಯಲ್ಲಿದ್ದಾರೆ. ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ '...ರೆ' ಚಿತ್ರದಲ್ಲಿ ನಟಿಸಿದ್ದು, ಇದಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಕಾತರದಲ್ಲಿದ್ದಾರೆ. ಈ ವೇಳೆ ಇವರ ಜತೆಗೆ ನಡೆಸಿದ ಮಾತುಕತೆ ಇಲ್ಲಿದೆ.

- ಪದ್ಮಾ ಶಿವಮೊಗ್ಗ

*ನೀವು ಬಾಲಿವುಡ್‌ಗೆ ಎಂಟ್ರಿ ಕೊಟ್ರಿ ಅಂತ ಸುದ್ದಿಯಾಗಿದೆ. ಯಾರ ಸಿನಿಮಾದಲ್ಲಿ ನಟಿಸಲಿದ್ದೀರಿ?

-ಅದಿನ್ನೂ ಫೈನಲ್ ಆಗಿಲ್ಲ. ಎಲ್ಲವೂ ಸಂಪೂರ್ಣವಾಗಿ ಡಿಸೈಡ್ ಆದ ತಕ್ಷಣ ನಾನೇ ಇನ್‌ಫಾರ್ಮ್ ಮಾಡ್ತೀನಿ.

*ದೀರ್ಘ ಕಾಲದ ನಂತರ '...ರೆ' ಚಿತ್ರದ ಮೂಲಕ ಮತ್ತೆ ಬಂದಿದ್ದೀರಿ. ಯಾಕೆ ಈ ಗ್ಯಾಪ್?

- ನಾನು ನಟಿಸೋದನ್ನು ನಿಲ್ಲಿಸಿಲ್ಲ. ನನ್ನ ಪಾಡಿಗೆ ನನ್ನ ಕೆಲಸ ಮುಗಿಸುತ್ತಾ ಬಂದಿದ್ದೀನಿ. ಆದರೆ, ಪ್ರೊಡ್ಯೂಸರ್‌ಗಳು ತಮ್ಮ ಸಿನಿಮಾಗಳ ರಿಲೀಸ್‌ಗೆ ಟೈಮ್ ತೆಗೆದುಕೊಂಡ್ರು. ಬಿ3 ಸಿನಿಮಾ 2013ನಲ್ಲೇ ಶೂಟ್ ಮಾಡಿದ್ದು. ಅದೇ ವರ್ಷ ರಿಲೀಸ್ ಆಗಿಹೋಯ್ತು. ಆದರೆ, ನಂತರ ನಾನು ನಟಿಸಿದ ಸಿನಿಮಾಗಳೆಲ್ಲಾ ರಿಲೀಸ್ ಆಗೋಕೆ ಎರಡು ವರ್ಷಗಳೇ ಬೇಕಾದವು. ಜುಗಾರಿ ಮತ್ತು ಸುಗ್ರೀವ ಅಂತ ಎರಡು ಸಿನಿಮಾಗಳಲ್ಲಿ ನಟಿಸಿದ್ದೆ. ಇವೆರಡೂ ಒಂದೇ ದಿನ ರಿಲೀಸ್ ಆದವು. ಈಗ '...ರೆ' ಮಾರ್ಚ್ 4ರಂದು ರಿಲೀಸ್ ಆಗ್ತಿದೆ.

*'...ರೆ' ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ?

- ಪತ್ರಕರ್ತೆ ಪಾತ್ರದಲ್ಲಿ ನಟಿಸಿದ್ದೇನೆ. ರಮೇಶ್ ಅರವಿಂದ್ ಮತ್ತು ಅನಂತ್‌ನಾಗ್ ಜತೆ ಹೆಚ್ಚಾಗಿ ಸ್ಕ್ರೀನ್ ಹಂಚಿಕೊಂಡಿದ್ದೇನೆ. ನನ್ನ ಪಾತ್ರ ಕಾಮಿಡಿಯಾಗೂ ಕಾಣಿಸುತ್ತೆ. ಹಾಗೆ ನೋಡಿದರೆ ಎಲ್ಲರ ಪಾತ್ರಗಳಿಗೂ ಪ್ರಾಮುಖ್ಯತೆ ಇದೆ. ಲೋಕನಾಥ್, ಶಿವರಾಮ್ ಎಲ್ಲರೂ ಚಿತ್ರದುದ್ದಕ್ಕೂ ಇದ್ದಾರೆ.

* ಈ ಸಿನಿಮಾದ ಶೂಟಿಂಗ್ ಅನುಭವ ಹೇಗಿತ್ತು?

- ಶೂಟಿಂಗ್ ಮುಗಿಸಿಕೊಂಡು ಹೋಗುವಾಗ ತುಂಬ ತೃಪ್ತಿ ಇರುತ್ತಿತ್ತು. ಚಿತ್ರದ ನಿರ್ದೇಶಕ ದೇಸಾಯಿಯವರು ತಮಗೆ ಓಕೆ ಅನ್ನಿಸೋವರೆಗೆ ಬಿಡುತ್ತಿರಲಿಲ್ಲ. ಅವರು ಗುಡ್ ಅಂದರೆ ಸಾಕು ಸೆಟ್ ತುಂಬಾ ಖುಷಿಯಾಗಿ ಓಡಾಡಿಬಿಡುತ್ತಿದ್ದೆ. ನಟನೆ ಕಲಿತು ಚಿತ್ರರಂಗಕ್ಕೆ ಬಂದವಳು ನಾನಲ್ಲ. ಸುಮಾರು 10 ಚಿತ್ರಗಳಲ್ಲಿ ನಟಿಸಿದ್ದೆ. ಅವಾರ್ಡ್ ಬಂದಿತ್ತು. ಆದರೂ, ನಟನೆ ಕಲಿಯಬೇಕು ಅನ್ನಿಸುತ್ತಿತ್ತು. ದೇಸಾಯಿಯವರ ಸಿನಿಮಾದಲ್ಲಿ ರೋಲ್ ಸಿಕ್ಕಾಗ ಒಂದು ಇನ್‌ಸ್ಟಿಟ್ಯೂಟ್‌ಗೆ ಸೇರಿದಂತೆ ಅನಿಸಿತ್ತು. ಅದರಲ್ಲೂ ಅನಂತ್‌ನಾಗ್, ರಮೇಶ್ ಅರವಿಂದ್ ಜತೆ ನಟಿಸೋ ಅವಕಾಶ ಸಿಕ್ಕಾಗ ಫುಲ್ ಪ್ಯಾಕೇಜ್ ಸಿನಿಮಾ ಅನ್ನಿಸಿಬಿಡ್ತು. ರಮೇಶ್ ಜತೆ ಎರಡು ಡ್ಯುಯೆಟ್ ಸಾಂಗ್ಸ್ ಇವೆ.

*ಚಿತ್ರೀಕರಣ ಸಂದರ್ಭದಲ್ಲಿ ಮರೆಯಲಾಗದ ಅನುಭವ?

- ಲೋಕನಾಥ್, ಶಿವರಾಂ, ಅನಂತ್‌ನಾಗ್ ಎಲ್ಲರೂ ಬಿಡುವಿದ್ದಾಗ ಒಟ್ಟಿಗೆ ಕುಳಿತು ನಾನಾ ಪುಸ್ತಕಗಳ ಬಗ್ಗೆ, ಬೇರೆ ಬೇರೆ ವಿಚಾರಗಳ ಬಗ್ಗೆ ಮಾತಾಡ್ತಿದ್ರು. ಅವರ ಚರ್ಚೆಗಳನ್ನು ಕೇಳುವಾಗ ನನಗೆ ಪುಸ್ತಕ ಓದಿದ ಹಾಗೆ ಆಗುತ್ತಿತ್ತು.
*ಟಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದೀರಿ. ಯಾವಾಗ ಚಿತ್ರ ರಿಲೀಸ್?

- ತೆಲುಗಿನ 'ಅಪ್ಪುಡಲಾ ಇಪ್ಪುಡಲಾ' ಚಿತ್ರದಲ್ಲಿ ನಟಿಸಿದ್ದೇನೆ. ಮಾರ್ಚ್‌ನಲ್ಲೇ ರಿಲೀಸ್ ಆಗ್ತಿದೆ. ತೆಲುಗಿನಲ್ಲಿ ಇದು ನನ್ನ ಮೊದಲ ಚಿತ್ರ. '...ರೆ' ಚಿತ್ರದಲ್ಲಿ ನಟಿಸುವಾಗಲೂ ನನಗೆ ಮೊದಲ ಚಿತ್ರದಂತೆ ಭಾಸವಾಯ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸಿದ್ದೇನೆ. ಮುಂದೆ ಇನ್ನೂ ಒಳ್ಳೆಯ ಪಾತ್ರಗಳು ಸಿಗುತ್ತವೆ ಅನ್ನೋ ವಿಶ್ವಾಸ ಇದೆ. ಸದ್ಯಕ್ಕೆ ಯಾವ ಚಿತ್ರಕ್ಕೂ ಸಹಿ ಮಾಡಿಲ್ಲ. ಒಳ್ಳೆಯ ಪಾತ್ರ ಸಿಕ್ಕರೆ ನಾಳೆಯಿಂದಲೇ ಶೂಟಿಂಗ್‌ಗೆ ರೆಡಿ.

*ಮದುವೆ ಬಗ್ಗೆ ಏನು ಯೋಚನೆ ಮಾಡಿದ್ದೀರಾ?

- ಈಗಂತೂ ಅದರ ಬಗ್ಗೆ ಯೋಚನೆ ಇಲ್ಲ. 2014ರ ಕೊನೆಯಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿದ್ದೇನೆ. ಈಗ ಶೂಟಿಂಗ್‌ಗೆ ಸ್ವಲ್ಪ ಸಮಯ ಸಿಗ್ತಿದೆ.

*ಮುಂದೆ ಓದಬೇಕು ಅಂತ ಆಸೆ ಇದೆಯಾ?

- ಕೆಎಎಸ್ ಮಾಡಬೇಕು ಅಂತ ಆಸೆ ಇದೆ. ಈ ವರ್ಷ ಪರೀಕ್ಷೆ ಬರೆಯಬೇಕಿತ್ತು. ಮುಂದಿನ ವರ್ಷ ಟ್ರೈ ಮಾಡೋಣ ಅಂತಿದ್ದೀನಿ. ಶೂಟಿಂಗ್ ಜತೆ ಓದಿ ಚೆನ್ನಾಗಿ ಸ್ಕೋರ್ ಮಾಡಿದ್ದೀನಿ. ಓದೋದು ಅಂದ್ರೆ ತುಂಬಾ ಇಷ್ಟ. ಮಾಡಿದ್ರೆ ಡೆಡಿಕೇಟೆಡ್ ಆಗಿ ಮಾಡ್ತೀನಿ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>