Quantcast
Channel: VijayKarnataka
Viewing all articles
Browse latest Browse all 6795

ಬಜೆಟ್ ಪರೀಕ್ಷೆ : ಮಧ್ಯಮವರ್ಗದ ಅಚ್ಛೇ ದಿನ್ ನಿರೀಕ್ಷೆ

$
0
0

*ರೈತರು, ಉದ್ಯಮಿಗಳ ಮನಗೆಲ್ಲುವ ಸವಾಲು *ಜೇಟ್ಲಿ ಪಾಲಿಗಿದು 3ನೇ ಸತ್ವ ಪರೀಕ್ಷೆ * ಮಧ್ಯಮವರ್ಗದ ಅಚ್ಛೇ ದಿನ್ ನಿರೀಕ್ಷೆ

ಹೊಸದಿಲ್ಲಿ : ಜಾಗತಿಕ ಆರ್ಥಿಕ ಪರಿಸ್ಥಿತಿಯ ಮೇಲೆ ಹಿಂಜರಿತದ ಮೋಡ ಕವಿದಿರುವ ಹೊತ್ತಿನಲ್ಲೇ ಹಣಕಾಸು ಸಚಿವ ಅರುಣ್ ಜೇಟ್ಲಿ ಸೋಮವಾರ ಬಹು ನಿರೀಕ್ಷೆಯ ಮುಂಗಡ ಪತ್ರವನ್ನು ಮಂಡಿಸಲಿದ್ದಾರೆ. ಈಗಾಗಲೇ ಎರಡು ಬಜೆಟ್‌ಗಳನ್ನು ಮಂಡಿಸಿದ ಅನುಭವ ಹೊಂದಿರುವ ಜೇಟ್ಲಿ ಅವರ ಮುಂದೆ ರೈತರು, ಉದ್ಯಮಿಗಳು ಮತ್ತು ಮಧ್ಯಮವರ್ಗದ ಅಗತ್ಯಗಳನ್ನು ಸರಿದೂಗಿಸುವ ದೊಡ್ಡ ಸವಾಲಿದೆ.

ಜಾಗತಿಕ ಮಟ್ಟದಲ್ಲಿನ ಸ್ಪರ್ಧೆಗೆ ಅನುಗುಣವಾಗಿ ದೇಶದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತು ಹೆಚ್ಚಿನ ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ಜೇಟ್ಲಿ ಕಾರ್ಯತಂತ್ರ ಏನು ಎಂಬುದು ಬಜೆಟ್‌ನಲ್ಲಿ ಸ್ಪಷ್ಟವಾಗಲಿದೆ.

ಗ್ರಾಮೀಣ ಭಾರತದ ಈಗಿನ ಸ್ಥಿತಿ ಗಂಭೀರವಾಗಿದೆ. ಪದೆ ಪದೇ ಕಾಡುತ್ತಿರುವ ಬರಗಾಲದಿಂದ ಜನ ಕಂಗಾಲಾಗಿದ್ದಾರೆ. ಸಾಮಾಜಿಕ ಯೋಜನೆಗಳು ಮತ್ತು ಕೃಷಿ ವಲಯ ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿದೆ. ಇದೇ ವೇಳೆ ತ್ವರಿತ ಆರ್ಥಿಕ ಸುಧಾರಣೆಗಳ ಮೂಲಕ ವಿದೇಶಿ ಹೂಡಿಕೆದಾರರನ್ನು ಸೆಳೆಯಬೇಕು. 'ಮೇಕ್ ಇನ್ ಇಂಡಿಯಾ' ಘೋಷಣೆಗೆ ಬಜೆಟ್ ಸಾಥ್ ನೀಡುವಂತಿರಬೇಕು. ಮಧ್ಯಮವರ್ಗದವರ ಪಾಲಿನ ಅಚ್ಛೇ ದಿನ್ ಸಾಕಾರಗೊಳ್ಳಬೇಕು. ಅಂತಹ ಒತ್ತಡ ಜೇಟ್ಲಿ ಅವರ ಮೇಲಿದೆ ಎಂಬುದು ನಿಜ.

7ನೇ ವೇತನ ಆಯೋಗದ ಶಿಫಾರಸುಗಳು ಹೇರಿರುವ ಭಾರವನ್ನೂ ಹಣಕಾಸು ಸಚಿವರು ತಡೆದುಕೊಳ್ಳಬೇಕಾಗಿದೆ. ಇದರನ್ವಯ ಕೇಂದ್ರ ಸರಕಾರಿ ನೌಕರರಿಗೆ ವೇತನ ಹೆಚ್ಚಿಸಲು 1.02 ಲಕ್ಷ ಕೋಟಿ ರೂ. ಅಗತ್ಯವಿದೆ. ಇಷ್ಟು ಹಣ ಹೊಂದಿಸುವ ಜವಾಬ್ದಾರಿ ಹೆಗಲ ಮೇಲಿದೆ. ಜತೆಗೆ ವಿತ್ತೀಯ ಕೊರತೆಯನ್ನು ಶೇ.3.5ಕ್ಕೆ ಇಳಿಸುವ ಗುರಿಯೊಂದಿಗೆ ರಾಜಿಯಾಗದೆ ಜೇಟ್ಲಿ ಹೇಗೆ ಮುನ್ನಡೆ ಸಾಧಿಸುತ್ತಾರೆ ಎನ್ನುವ ಕುತೂಹಲವೂ ಇದೆ.

ತೆರಿಗೆ ಮಿತಿ ಯಥಾಸ್ಥಿತಿ:

ಆದಾಯ ತೆರಿಗೆಯ ಮಿತಿಯನ್ನು ಈಗಿನ 2.50 ಲಕ್ಷ ರೂ.ನಿಂದ 4 ಲಕ್ಷಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆಯಿದೆ. ಆದರೆ ಜೇಟ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆಯೇ ಅಧಿಕ. ಆದಾಗ್ಯೂ, ತೆರಿಗೆ ವಿಷಯದಲ್ಲಿ ಒಂದಿಷ್ಟು ವಿನಾಯಿತಿಗಳನ್ನು ನೀಡಿ ಕಣ್ಣೊರೆಸುವುದನ್ನು ಅಲ್ಲಗಳೆಯುವಂತಿಲ್ಲ.

ಹೊಸ ತೆರಿಗೆಗಳು:

ಏರುತ್ತಿರುವ ವೆಚ್ಚಗಳನ್ನು ನಿಭಾಯಿಸಲು ಆದಾಯ ಕ್ರೋಡೀಕರಣಕ್ಕಾಗಿ ವಿತ್ತ ಸಚಿವರು, ಪರೋಕ್ಷ ತೆರಿಗೆಯನ್ನು ಹೆಚ್ಚಿಸುವ ಅಥವಾ ಹೊಸ ತೆರಿಗೆಗಳನ್ನು ಜಾರಿಗೊಳಿಸುವ ಅವಕಾಶಗಳೂ ಇವೆ. ಕಳೆದ ವರ್ಷ ಸೇವಾ ತೆರಿಗೆಯು ಶೇ.14.5ಕ್ಕೆ ಏರಿತ್ತು.

'ಸ್ವಚ್ಛ ಭಾರತ' ಯೋಜನೆಗೆ ಸಂಪನ್ಮೂಲ ಕ್ರೋಡೀಕರಿಸುವ ನಿಟ್ಟಿನಲ್ಲಿ ಹೊಸ ಸೆಸ್ ಕಳೆದ ವರ್ಷ ಜಾರಿಗೊಳಿಸಲಾಗಿತ್ತು. ಇದೇ ಮಾದರಿಯಲ್ಲಿ ಸ್ಟಾರ್ಟಪ್ ಇಂಡಿಯಾ ಅಥವಾ ಡಿಜಿಟಲ್ ಇಂಡಿಯಾ ಮತ್ತಿತರ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಹೊಸ ಸೆಸ್‌ಗಳನ್ನು ಜನರ ಮೇಲೆ ಹಾಕುವ ಸಾಧ್ಯತೆಗಳೂ ಇವೆ.

ಸೋಮವಾರ ನಂಗೆ ಪರೀಕ್ಷೆ

ಸೋಮವಾರ ಬಜೆಟ್ ಮಂಡನೆ ಇದ್ದು, ದೇಶದ 125 ಕೋಟಿ ಜನರ ನಿರೀಕ್ಷೆಗಳಿಗೆ ಸ್ಪಂದಿಸುವ ದೊಡ್ಡ ಹೊಣೆಗಾರಿಕೆ ನನ್ನ ಮೇಲಿದೆ. ನಿಜಕ್ಕೂ ಇದು ನನಗೂ ಪರೀಕ್ಷೆ ಇದ್ದಂತೆ. ಇದನ್ನು ಸಮರ್ಥವಾಗಿ ಎದುರಿಸುವ ಆತ್ಮವಿಶ್ವಾಸ ನನ್ನಲ್ಲಿದೆ. ಹಾಗೆಯೇ ನೀವು (ವಿದ್ಯಾರ್ಥಿಗಳು) ಕೂಡ ಧನಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳಿ

-ನರೇಂದ್ರ ಮೋದಿ, ಪ್ರಧಾನಿ

(ಮನ್ ಕಿ ಬಾತ್‌ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದ್ದು)


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ