Quantcast
Channel: VijayKarnataka
Viewing all articles
Browse latest Browse all 6795

ಹಣ ವಾಪಸ್‌ಗೆ ಮುಂದಾದ ಫ್ರೀಡಂ 251

$
0
0

ಹೊಸದಿಲ್ಲಿ : 'ಫ್ರೀಡಂ 251'ಸ್ಮಾರ್ಟ್‌ಫೋನ್ ಪೂರೈಸುವುದಾಗಿ ಜನರಿಂದ ಮೊದಲ ಹಂತದಲ್ಲಿ ಸಂಗ್ರಹಿಸಿದ್ದ ಹಣವನ್ನು ರಿಂಗಿಂಗ್ ಬೆಲ್ಸ್ ಕಂಪನಿ ವಾಪಸ್ ಮಾಡುತ್ತಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ವೆಬ್‌ಸೈಟ್ ಕ್ರ್ಯಾಶ್ ಆಗುವುದಕ್ಕಿಂತ ಮೊದಲು 30,000 ಆರ್ಡರ್‌ಗಳನ್ನು ಸ್ವೀಕರಿಸಿದ್ದಾಗಿ ಕಂಪನಿ ಹೇಳಿತ್ತು. ಸ್ವೀಕರಿಸಿದ್ದ ಎಲ್ಲ ಹಣವನ್ನು ಗ್ರಾಹಕರಿಗೆ ವಾಪಸ್ ಮಾಡುತ್ತಿರುವುದಾಗಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮೋಹಿತ್ ಗೋಯೆಲ್ ಅವರು ಸ್ಪಷ್ಟ ಪಡಿಸಿದ್ದಾರೆ ಎಂದು ಖಾಸಗಿ ಸುದ್ದಿವಾಹಿನಿ ವರದಿ ಮಾಡಿದೆ.

''ಕ್ಯಾಶ್ ಆನ್ ಡೆಲಿವರಿ ಪದ್ಧತಿ ಅನುಸರಿಸಿ, ಮೊಬೈಲ್‌ಗಳನ್ನು ಗ್ರಾಹಕರಿಗೆ ಪೂರೈಕೆ ಮಾಡುತ್ತೇವೆ. ಇದರಿಂದ ಪಾರದರ್ಶಕ ವ್ಯವಸ್ಥೆಯನ್ನು ಕಾಯ್ದುಕೊಂಡಂತೆ ಆಗುತ್ತದೆ,'' ಎಂದು ಕಂಪನಿಯ ಅಧ್ಯಕ್ಷ ಅಶೋಕ್ ಚಡ್ಡಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

251 ರೂ.ಗಳ ಸ್ಮಾರ್ಟ್‌ಫೋನ್‌ಗಾಗಿ 6 ಕೋಟಿ ನೋಂದಣಿಗಳನ್ನು ಸ್ವೀಕರಿಸಿರುವುದಾಗಿ ಕಂಪನಿ ಹೇಳಿಕೊಂಡಿತ್ತು. ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ನೋಂದಣಿ ಮಾಡಿಕೊಳ್ಳಲು ಕಂಪನಿ ಈ ಮೊದಲು ಸೂಚಿಸಿತ್ತು. ಹೀಗೆ ನೋಂದಣಿ ಮಾಡಿಕೊಂಡವರಿಗೆ ಹಣ ಪಾವತಿಗೆ ಸಂಬಂಧಿಸಿದ ವಿವರಗಳನ್ನು 48 ಗಂಟೆಯೊಳಗೆ ಇಮೇಲ್ ಮೂಲಕ ತಿಳಿಸುವುದಾಗಿ ಕಂಪನಿ ಹೇಳಿಕೊಂಡಿತ್ತು. ಆದರೆ, ನಂತರದ ಪ್ರಕ್ರಿಯೆ ಆರಂಭವಾಗಲಿಲ್ಲ.

ತನಿಖೆ: ನೋಟಿಸ್ ಬಂದಿಲ್ಲ

'ಫ್ರೀಡಂ 251' ಸ್ಮಾರ್ಟ್‌ಫೋನ್ ಅನ್ನು ಕೇವಲ 251 ರೂಪಾಯಿಗೆ(ಶಿಪ್ಪಿಂಗ್ ಚಾರ್ಚ್ 40 ರೂ. ಪ್ರತ್ಯೇಕ) ನೀಡುವುದಾಗಿ ಹೇಳಿದ್ದ ರಿಂಗಿಂಗ್ ಬೆಲ್ಸ್ ಕುರಿತು ಶಂಕೆಗಳು ವ್ಯಕ್ತವಾಗಿದ್ದವು. ಈ ಬೆನ್ನಲ್ಲಿ ಕಂಪನಿ ಮತ್ತು ಅದರ ಪ್ರೊಮೋಟರ್‌ಗಳ ಆರ್ಥಿಕ ವ್ಯವಹಾರ ಮತ್ತು ಬ್ಯಾಂಕ್ ಖಾತೆಗಳನ್ನು ಇಡಿ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ತಮಗೆ ಈ ತನಕ ಸಮನ್ಸ್ ಅಥವಾ ನೋಟಿಸ್‌ಗಳು ತಲುಪಿಲ್ಲ ಎಂದು ನೋಯ್ಡಾ ಮೂಲದ ಕಂಪನಿ ಹೇಳಿಕೊಂಡಿದೆ.

ಉದ್ಯಮದ ಪ್ರಮುಖರು ಈಗಾಗಲೇ ರಿಂಗಿಂಗ್ ಬೆಲ್ಸ್ ವಿರುದ್ಧ ದೂರಿದ್ದು, ಆದಾಯ ತೆರಿಗೆ ಇಲಾಖೆ ಮತ್ತು ಟೆಲಿಕಾಂ ಸಚಿವಾಲಯವು ರಿಂಗಿಂಗ್ ಬೆಲ್ಸ್ ಮೇಲೆ ನಿಗಾ ಇಟ್ಟಿವೆ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>