ಹೊಸದಿಲ್ಲಿ: ಭಾರತದ ಮಾಜಿ ಬ್ಯಾಟಿಂಗ್ ಸಾಮ್ರಾಟ ಸಚಿನ್ ತೆಂಡೂಲ್ಕರ್ ಅವರ ಆತ್ಮ ಚರಿತ್ರೆ 'Playing It My Way' ಪುಸ್ತಕ ಗರಿಷ್ಠ ಪ್ರತಿಗಳ ಮಾರಾಟದ ವಿಚಾರದಲ್ಲಿ ಲಿಮ್ಕಾ ದಾಖಲೆಗೆ ಪಾತ್ರವಾಗಿದೆ.
ಕಾಲ್ಪನಿಕ ಮತ್ತು ಕಾಲ್ಪನಿಕವಲ್ಲದ ವಿಭಾಗಗಳಲ್ಲಿ ಸಚಿನ್ ಅವರ ಆತ್ಮಚರಿತ್ರೆ ಲಿಮ್ಕಾ ದಾಖಲೆ ನಿರ್ಮಿಸಿದೆ. ತೆಂಡೂಲ್ಕರ್ ಅವರ ಜೀವನಗ ವಿವಿಧ ಕಾಲಘಟ್ಟಗಳ ಘಟನಾವಳಿಗಳನ್ನೊಳಗೊಂಡ ಪುಸ್ತಕ 2014ರ ನ.6ರಂದು ಬಿಡುಗಡೆಗೊಂಡಿತ್ತು. ಅಲ್ಲಿಂದ ಇಲ್ಲಿಯವರೆಗೆ 1,50,289 ಪ್ರತಿಗಳು ಮಾರಾಟವಾಗುವ ಮೂಲಕ ಎಲ್ಲಾ ದಾಖಲೆಗಳನ್ನು ಪುಡಿಗಟ್ಟಿದೆ ಎಂದು ತಿಳಿದು ಬಂದಿದೆ.
ಖ್ಯಾತ ಕ್ರಿಕೆಟ್ ವಿಶ್ಲೇಷಕರಾಗಿರುವ ಬೊರಿಯಾ ಮಂಜುಮ್ದಾರ್, ಸಚಿನ್ ತೆಂಡೂಲ್ಕರ್ ಅವರ ಆತ್ಮಚರಿತ್ರೆಯ ಸಹ ಲೇಖಕರಾಗಿದ್ದಾರೆ.
↧
ಲಿಮ್ಕಾ ದಾಖಲೆ ನಿರ್ಮಿಸಿದ ಸಚಿನ್ ಆತ್ಮಚರಿತ್ರೆ
↧