Quantcast
Channel: VijayKarnataka
Viewing all articles
Browse latest Browse all 6795

ಶೇನ್ ವಾರ್ನ್ ತಲೆಗೆ ಕಚ್ಚಿದ ಅನಕೊಂಡಾ!

$
0
0

ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಮತ್ತೆ ಸುದ್ದಿಯಲ್ಲಿದ್ದು, ರಿಯಾಲಿಟಿ ಶೋ ಒಂದರಲ್ಲಿ ವಾರ್ನ್ ಅವರ ತಲೆಗೆ ಅನಕೊಂಡಾ ಹಾವು ಕಚ್ಚಿರುವುದಾಗಿ ವರದಿಯಾಗಿದೆ.

ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಲೆಗ್ ಸ್ಪಿನ್ನರ್ ಎಂದು ಖ್ಯಾತಿ ಪಡೆದಿರುವ ಶೇನ್ ವಾರ್ನ್ ಖಾಸಗಿ ವಾಹಿನಿಯೊಂದರ 'ಐ'ಞ ಅ ಇಛ್ಝಿಛಿಚ್ಟಿಜಿಠಿ... ಎಛಿಠಿ ಛಿ ಣ್ಠಠಿ ಣ್ಛ ಏಛ್ಟಿಛಿ!' ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಈ ವೇಳೆ ಹಾವುಗಳಿಂದ ತುಂಬಿದ್ದ ಪೆಟ್ಟಿಗೆಯೊಂದರ ಒಳಗೆ ತಲೆಯನ್ನು ತೂರಿಸುವ ಸವಾಲನ್ನು ನೀಡಲಾಗಿತ್ತು. ಈ ವೇಳೆ ಅನಕೊಂಡಾ ಒಂದು ವಾರ್ನ್ ತಲೆಗೆ ಕಚ್ಚಿದೆ ಎಂದು ತಿಳಿದು ಬಂದಿದೆ.

ಇದಕ್ಕೂ ಮೊದಲು ವಾರ್ನ್ ಆಫ್ರಿಕಾದ ಕಪ್ಪೆಗಳು, ಚೇಳುಗಳು, ಜಿರಳೆ ಹಾಗೂ ಇಲಿಗಳನ್ನಿಡಲಾಗಿದ್ದ ಪೆಟ್ಟಿಗೆಯೊಳಗೆ ಯಶಸ್ವಿಯಾಗಿ ತಲೆಯನ್ನು ತೂರಿಸಿ ಸವಾಲು (ಟಾಸ್ಕ್) ಪೂರ್ತಿಗೊಳಿಸಿದ್ದರು. ಆದರೆ ಹಾವುಗಳ ಟಾಸ್ಕ್‌ನಲ್ಲಿ ವಾರ್ನ್ ಅವರಿಗೆ ಅಚ್ಚರಿ ಎದುರಾಯಿತು.

ಆದರೆ ರಿಯಾಲಿಟಿ ಶೋನಲ್ಲಿ ಬಳಸಿರುವ ಹಾವುಗಳು ವಿಷಪೂರಿತವಲ್ಲದ ಕಾರಣ, ವಾರ್ನ್ ಅವರಿಗೆ ಯಾವುದೇ ಅಪಾಯಗಳಾಗಿಲ್ಲ. ಹಾವುಗಳೆಂದರೆ ಭಯ ಪಡುವ ವಾರ್ನ್, ಆದರೆ ಹಾವಿನ ಕಡಿತಕ್ಕೊಳಗಾದ ಸಂದರ್ಭದಲ್ಲಿ ತೀವ್ರ ಭಯಭೀತರಾಗಿದ್ದರೂ, ಟಾಸ್ಕ್ ಪೂರ್ತಿಗೊಳಿಸಿದರು. ಬಳಿಕ ಅವರಿಗೆ ಚಿಕಿತ್ಸೆ ನೀಡಲಾಯಿತು ಎಂದು ರಿಯಾಲಿಟಿ ಶೋನ ಕಾರ್ಯಕಾರಿ ನಿರ್ಮಾಪಕ ಸ್ಟೀಫನ್ ಟೇಟ್ ತಿಳಿಸಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>