Quantcast
Channel: VijayKarnataka
Viewing all articles
Browse latest Browse all 6795

ಜಾತಕದಲ್ಲಿ ಗಂಟೆಯ ಲೆಕ್ಕಾಚಾರ

$
0
0

ಅಕ್ಷ ಭ್ರಮಣೆಯಿಂದ ಈ ಭೂಮಿಯ ಮೇಲೆ ಹಗಲು ಮತ್ತು ರಾತ್ರಿ ಉಂಟಾಗುತ್ತವೆ. ಪಥ ಪರಿಭ್ರಮಣೆಯಿಂದ ಈ ಭೂಮಿಯ ಮೇಲೆ ಋತುಗಳು ಮತ್ತು ವರ್ಷಗಳು ಉಂಟಾಗುತ್ತವೆ. ಒಂದು ದಿನದಲ್ಲಿ ಉಂಟಾಗುವ ಹಗಲು ರಾತ್ರಿಗಳಿಗೆ 'ಅಹೋ ರಾತ್ರಿ' ಎಂದು ಕರೆಯುತ್ತಾರೆ. ಈ ಸಂಸ್ಕೃತ ಪದದ ಮೊದಲ ಅಕ್ಷರ 'ಅ' ಹಾಗೂ ಕೊನೆಯ ಅಕ್ಷರ 'ತ್ರ'ವನ್ನು ಬಿಟ್ಟರೆ ಮಧ್ಯದಲ್ಲಿ ಉಳಿದ ಪದ 'ಹೋರಾ' ಎಂದು. ಹೋರಾದಿಂದಲೇ Hour' ಎಂಬ ಇಂಗ್ಲಿಷ್ ಪದ ಹುಟ್ಟಿಕೊಂಡಿತು. ಆದ್ದರಿಂದ ಯಾವುದೇ ಹೋರಾದಲ್ಲಿ ಜನಿಸಿದ ಮಗುವಿನ ಜಾತಕಕ್ಕೆ ಹೊರಾಸ್ಕೋಪ್ ಎಂಬ ಹೆಸರು ಬಂದಿತು.

ಅತಿಂದ್ರೀಯ ಶಕ್ತಿ ಸಂಪನ್ನರಾದ ನಮ್ಮ ಋಷಿಗಳು ತಾರಾ ಗ್ರಹಗಳಾದ ಸಪ್ತ ಗ್ರಹಗಳನ್ನು ಈ ದಿನದ ಸೂರ್ಯೋದಯದಿಂದ ಮರು ದಿನದ ಸೂರ್ಯೋದವರೆಗಿನ ಒಟ್ಟು ಕಾಲಕ್ಕೆ ಒಂದೊಂದು ಹೋರಾಗೆ ಒಂದೊಂದು ಗ್ರಹದಂತೆ ಹೋರಾಧಿಪತಿಗಳಾಗಿ ಮಾಡಿರುತ್ತಾರೆ. ಪ್ರಥಮ ವಾರವಾದ ಭಾನುವಾರದಿಂದ ಪ್ರಥಮ ಗ್ರಹವಾದ ಸೂರ್ಯ ಹೋರಾವು ಸೂರ್ಯೋದಯದ ನಂತರ ಪ್ರಾರಂಭವಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಸೂತ್ರವೊಂದನ್ನು ರೂಪಿಸಲಾಗಿದೆ.

'ಅರ್ಕ ಶುಕ್ರ ಬುಧ:ಚಂದ್ರೋ ಮಂದೋ ಜಿವ ಧರಾಸುತಃ (ರವಿ, ಶುಕ್ರ, ಬುಧ, ಚಂದ್ರ, ಶನಿ, ಗುರು, ಕುಜ)

ದಿನದ 24 ಗಂಟೆಗಳಿಗೆ ಈ 7 ಹೋರಾಗಳನ್ನು ಕ್ರಮವಾಗಿ ಹಂಚಲಾಗಿದೆ. ಮರು ದಿನವೂ ಹಾಗೆಯೇ ಕ್ರಮವಾಗಿ ಮುಂದಕ್ಕೆ ಸಾಗುತ್ತದೆ.

ಉಪಯೋಗ:

ಶುಭ ಹೋರಗಳಾದ ಪೂರ್ಣ ಚಂದ್ರ, ಬುಧ, ಗುರು, ಶುಕ್ರ, ಹೋರಾಗಳಲ್ಲಿ ಎಲ್ಲ ಶುಭ ಕಾರ್ಯಗಳನ್ನೂ ಮಾಡಬಹುದು.

ಈ ಹೋರಾಗಳನ್ನು ಧನ ಸಂಪತ್ತನ್ನು ತಿಳಿಯಲು ಉಪಯೋಗಿಸುತ್ತಾರೆ. ಇದಕ್ಕೆ ಸಂಪತ್ ಹೋರಾ ಎಂದೂ ಕರೆಯುತ್ತಾರೆ.

ರಾಶಿ ಚಕ್ರದಲ್ಲಿ ಹೋರಾ:

ಪ್ರತಿ ರಾಶಿಯನ್ನು ಎರಡು ಸಮ ಭಾಗಗಳನ್ನಾಗಿ ಮಾಡಿದಾಗ ಒಂದೊಂದು ಭಾಗವೂ 15 ಡಿಗ್ರಿ ಹೊಂದುತ್ತದೆ. ಒಂದೊಂದು ಭಾಗವೂ ಒಂದೊಂದು ಹೋರಾವಾಗಿ ಒಂದು ರಾಶಿಗೆ 2 ಹೋರಾಗಳಾಗುತ್ತವೆ. ಮೊದಲನೆ ಹೋರಾಗೆ ಸೂರ್ಯನು ಹಾಗೂ ಎರಡನೇ ಹೋರಾಗೆ ಚಂದ್ರನು ಹೋರಾದಿಪತಿಯಾಗುತ್ತಾನೆ. ಹಾಗೆಯೇ ಸಮ ರಾಶಿಯಲ್ಲಿ ಮೊದಲನೆ ಹೋರಾಗೆ ಚಂದ್ರನೂ ಹಾಗೂ ಎರಡನೇ ಹೋರಾಗೆ ಸೂರ್ಯನು ಹೋರಾಧಿಪತಿಯಾಗುತ್ತಾರೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


BIG NEWS : ಶಾಲೆಗಳ ಪ್ರಥಮ ಮಾನ್ಯತೆ, ಮಾನ್ಯತೆ ನವೀಕರಣದ ಕುರಿತು ‘ಶಿಕ್ಷಣ ಇಲಾಖೆ’ಯಿಂದ...


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>