Quantcast
Channel: VijayKarnataka
Viewing all articles
Browse latest Browse all 6795

‘ಲಾಸ್ಟ್ ಬಸ್’ ಮಿಸ್ ಮಾಡ್ಕೋಬೇಡಿ

$
0
0

ಚಿತ್ರ: ಲಾಸ್ಟ್ ಬಸ್ (ಕನ್ನಡ)


-ಪದ್ಮಾ ಶಿವಮೊಗ್ಗ

ಸಾಲಾಗಿ ಹಾರರ್ ಸಿನಿಮಾಗಳು ಕನ್ನಡದಲ್ಲಿ ಬರುತ್ತಿದೆ. ಆದರೆ, ಎಸ್.ಡಿ. ಅರವಿಂದ್ ನಿರ್ದೇಶನದ ಸೈಕಲಾಜಿಕಲ್ ಮಿಸ್ಟಿರಿ ಚಿತ್ರ 'ಲಾಸ್ಟ್ ಬಸ್' ವಿಭಿನ್ನವಾಗಿದೆ. ಹಾರರ್ ಚಿತ್ರಗಳಲ್ಲಿ ಕಾಣಬಹುದಾದ ಕ್ಲೀಷೆಯಿಂದ ಮುಕ್ತವಾಗಿ ಇಂಟಲೆಕ್ಷುಯಲ್ ಚಿತ್ರವಾಗಿದೆ. ದೆವ್ವ ಇದೆಯೋ ಇಲ್ಲವೋ.. ಅಥವಾ 'ಭಯ'ದ ರೂಪವೇ 'ದೆವ್ವ'ನಾ? ಎಂಬ ತರ್ಕಕ್ಕೆ ಆಸ್ಪದ ಕೊಡುವ ಚಿತ್ರವಿದು. ಎಲ್ಲಾ ವರ್ಗದ ಜನರನ್ನು ರಂಜಿಸುವ ರೀತಿ ಕಟ್ಟಿಕೊಟ್ಟಿರುವ ಅರವಿಂದ್ ಬ್ರಿಲಿಯಂಟ್.

ಕನ್ನಡ ಚಿತ್ರರಂಗಕ್ಕೆ ಹೊಸ ರೀತಿಯ ಸಿನಿಮಾವಿದು. ಸಬ್ಜೆಕ್ಟಿವ್ ಸಿನಿಮಾಗೆ ಸ್ವಲ್ಪ ಅಬ್ಸ್‌ಸ್ಟ್ರಕ್ಟ್ ಟಚ್ ಕೊಟ್ಟಿದ್ದಾರೆ. ಮನುಷ್ಯನಲ್ಲಿರುವ 'ಭಯ' ಎಂಥಾದ್ದು? ಅದು ಹೊರಗೆ ಬಂದಾಗ ಹೇಗಾಡುತ್ತಾನೆ? ಜತೆಗೆ ಇನ್ನೊಬ್ಬರ ಭಯ ಹೇಗೆ ವ್ಯಾಪಾರಿ ಸರಕಾಗಿದೆ ಎಂಬುದನ್ನು ಇಲ್ಲಿ ತೋರಿಸಿದ್ದಾರೆ. ಸಾಮಾನ್ಯ ಚಿತ್ರದಂತೆ ಈ ಸಿನಿಮಾವನ್ನು ನೇರವಾಗಿ ನೋಡಿ ಅರ್ಥೈಸಿಕೊಳ್ಳುವುದು ತಪ್ಪಾಗುತ್ತದೆ. ಯಾಕೆಂದರೆ ಚಿತ್ರದ ಆಂತರ‌್ಯ ಬೇರೆಯದನ್ನೇ ಹೇಳುತ್ತದೆ. ಇಲ್ಲಿ ಸೈಕಾಲಜಿ ಮತ್ತು ಫಿಲಾಸಫಿಗಳಿಂದ ಹುಟ್ಟುವ ಭಯವೂ ಇದೆ.

ಮಲೆನಾಡಿನ ದಟ್ಟವಾದ ಕಾಡಿನ ಮಧ್ಯೆದಿಂದ ನಗರಕ್ಕೆ ಹೋಗಬೇಕಾದವರು ಲಾಸ್ಟ್ ಬಸ್ ಹತ್ತುತ್ತಾರೆ. ದಾರಿಯಲ್ಲಿ ಮರ ಬಿದ್ದು, ಹೆಚ್ಚು ಬಳಕೆಯಿಲ್ಲಿದ ಹಾದಿ ಹಿಡಿಯುತ್ತದೆ ಬಸ್. ಆಗ ಅರ್ಧದಷ್ಟು ಜನ ವಾಪಸ್ಸಾದರೆ, ಕೆಲವರು ಪ್ರಯಾಣ ಮುಂದುವರಿಸುತ್ತಾರೆ. ಆಗ ಅಪಘಾತವಾಗಿ ಇದ್ದಕ್ಕಿದ್ದಂತೆ ಕಾಣೆಯಾದ ಡ್ರೈವರ್ ಟಂಕನನ್ನು ಹುಡುಕಿಕೊಂಡು, ಕಾಡಿನ ಮಧ್ಯೆ ಪಾಳು ಬಿದ್ದ ಮನೆಗೆ ಹೋಗಿ ಬಂಧಿಯಾಗುತ್ತಾರೆ. ಅಲ್ಲಿಂದ ಹೊರಬರಲು ಪ್ರಯತ್ನಿಸಿದಾಗ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ಅದು ದೆವ್ವದ ಕಾಟವೋ ಅಥವಾ ಮನಸ್ಸಿನಾಳದಲ್ಲಿರುವುದರ ಆಟವೋ ಎಂಬುದನ್ನು ನಿರ್ಧರಿಸಲು ಪ್ರೇಕ್ಷಕರಿಗೇ ಬಿಡಲಾಗಿದೆ. ಇದರ ನಡುವೆ ರಿಯಾಲಿಟಿ ಶೋ ಟೀಮ್ ಇದಕ್ಕೆಲ್ಲಾ ಕಾರಣನಾ? ಎಂಬ ಅನುಮಾನ ಹುಟ್ಟುತ್ತೆ. ಒಂದು ರಾತ್ರಿ ಅವರಿಗೆಲ್ಲಾ ಎಂಥ ಅನುಭವಗಳಾಗುತ್ತವೆ ಎನ್ನುವುದೇ ಸಿನಿಮಾ. ಉದಾಹರಣೆಗೆ ಸೆಕ್ಸ್ ವರ್ಕರ್ ಸೀತಕ್ಕಳಿಗೆ ಕನ್ನಡಿಯಲ್ಲಿ ನೋಡಿಕೊಳ್ಳೋ ಚಟ. ಅದೇ ಕನ್ನಡಿ ಆಕೆಯನ್ನು ದೆವ್ವದಂತೆ ಕಾಡುತ್ತದೆ. ಪ್ರತಿಕ್ಷಣವೂ ಕುತೂಹಲ ಕೆರಳಿಸುತ್ತದೆ. ಮನುಷ್ಯ ಬದುಕಿರುವವರೆಗೆ ದೆವ್ವ ಇದೆ ಅಥವಾ ಇಲ್ಲ ಅನ್ನೋ ಎರಡೂ ಗುಂಪುಗಳು ಇದ್ದೇ ಇರುತ್ತೆ. ಆದ್ದರಿಂದ ಕ್ಲೈಮಾಕ್ಸ್‌ನಲ್ಲಿ ತೀರ್ಮಾನಕ್ಕೆ ಬರಲು ಪ್ರೇಕ್ಷಕನಿಗೇ ಬಿಟ್ಟಿದ್ದಾರೆ.

ಛಾಯಾಗ್ರಾಹಕ ಅನಂತ್ ಅರಸ್ ದೃಶ್ಯಗಳನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ. 3ಡಿ ಸಿನಿಮಾದಂತೆ ಥ್ರಿಲ್ ಕೊಡುತ್ತೆ. ನಟರು, ಹಿನ್ನೆಲೆ ಸಂಗೀತ, ಸಂಕಲನ ಎಲ್ಲವೂ ಪ್ರಶಂಸಾರ್ಹ. ಅವಿನಾಶ್, ಮೇಘಶ್ರೀ, ಪ್ರಕಾಶ್ ಬೆಳವಾಡಿ, ಟಂಕ ಪಾತ್ರಧಾರಿ, ಸಮರ್ಥ್ ನರಸಿಂಹರಾಜು ಅಭಿನಯ ಅತ್ಯುತ್ತಮ. ಅವಿನಾಶ್ ಕಲಾ ನಿರ್ದೇಶಕರಾಗಿಯೂ ಯಶಸ್ವಿ. ಕತ್ತಲೆಗೆ ಮುಖವಿಲ್ಲ, ಬೆಳಕಿಗೆ ಬೆನ್ನಿಲ್ಲ ಎಂಬ ಸಾಲುಗಳನ್ನು ಬರೆದ ಕೆ.ವೈ.ಎನ್ ಹಾಡುಗಳು 'ಕಂಡದ್ದು ಉಳಿದಿಲ್ಲ', ಮತ್ತು 'ದೂರಿ' ವಿಶಿಷ್ಟ. ಮರ ಬೀಳುವುದೊಂದನ್ನು ಹೊರತುಪಡಿಸಿದರೆ, ಗ್ರಾಫಿಕ್ ಕ್ರಿಯೇಷನ್‌ಗಳು ಖುಷಿ ಕೊಡುತ್ತವೆ. ಇತ್ತೀಚೆಗೆ ಬಂದ ಪ್ರಯೋಗಾತ್ಮಕ ಚಿತ್ರಗಳಲ್ಲಿ ಉತ್ತಮ ಚಿತ್ರ ಲಾಸ್ಟ್ ಬಸ್.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


BIG NEWS : ಶಾಲೆಗಳ ಪ್ರಥಮ ಮಾನ್ಯತೆ, ಮಾನ್ಯತೆ ನವೀಕರಣದ ಕುರಿತು ‘ಶಿಕ್ಷಣ ಇಲಾಖೆ’ಯಿಂದ...


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>