ಸಾಯುವ 11 ದಿನಗಳ ಮುನ್ನ ಗೋಸ್ವಾಮಿ ಕಾಶ್ಮೀರ ಕಣಿವೆಯಲ್ಲಿ ನಿರಂತರವಾಗಿ ಮೂರು ಉಗ್ರ ವಿರೋಧಿ ಹೋರಾಟದಲ್ಲಿ ಭಾಗಿಯಾಗಿದ್ದರು. ತಮ್ಮ ಹಿರಿಯ ಹಾಗೂ ಕಿರಿಯ ಸಹೋದ್ಯೋಗಿಗಳಿಗೆ ಆಗ ಗಾಯಗಳಾಗಿದ್ದವು. ಅವರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸುವುದರೊಂದಿಗೆ, ಉಗ್ರರೊಂದಿಗಿನ ಹೋರಾಟವನ್ನು ಮುಂದುವರಿಸಿದ್ದರು. ಆಗಲೇ ಅವರಿಗೆ ಏಟೂ ಬಿದ್ದಿತ್ತು. ಆದರೂ ಗೋಸ್ವಾಮಿ ತಮ್ಮ ಹೋರಾಟಕ್ಕೆ ಫುಲ್‌ಸ್ಟಾಪ್ ನೀಡಿರಲಿಲ್ಲ. ನಿರಂತರವಾಗಿ ಹೋರಾಡಿದ ಫಲವಾಗಿಯೇ 10 ಉಗ್ರರನ್ನು ಸದೆ ಬಡಿದಿದ್ದರು. ಆದರೆ, ಬಿದ್ದ ಏಟೂ ಅವರನ್ನೂ ಬಲಿ ತೆಗೆದುಕೊಂಡಿತು.
ಲಷ್ಕರೆ ತೊಯ್ಬಾ ಉಗ್ರರನ್ನು ಬಲಿ ತೆಗೆದುಕೊಂಡಿದ್ದ ಗೋಸ್ವಾಮಿ ಭಾರತಕ್ಕೆ ಒದಗಬಹುದಾಗಿದ್ದ ದೊಡ್ಡ ಕಂಟಕವೊಂದನ್ನು ತಮ್ಮ ಪ್ರಾಣವನ್ನೇ ಬಲಿ ಕೊಟ್ಟು ತಪ್ಪಿಸಿದ್ದರು. ಇವರು ಸಕ್ರಿಯವಾಗಿ ಪಾಲ್ಗೊಂಡಿದ್ದ ಕಾರ್ಯಾಚರಣೆಯಲ್ಲಿ ಲಷ್ಕರೆ ತೊಯ್ಬಾ ಉಗ್ರ ಸಜ್ಜದ್ ಅಹ್ಮದ್ ಅಲಿಯಾಸ್ ಅಬು ಉಬೈದುಲ್ಲಾನನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಸೈನ್ಯ ಯಶ ಕಂಡಿತ್ತು.
ಇಂಥ 'ಉಗ್ರ' ಹೋರಾಟದಲ್ಲಿ ಭಾಗಿಯಾದ ಗೋಸ್ವಾಮಿಗೆ ಮನೆಯಲ್ಲಿರುವ ಪತ್ನಿ, ಆಗ ಏಳು ವರ್ಷವಾಗಿದ್ದ ಮಗಳ ನೆನಪು ಕಾಡಿರಲಿಲ್ಲ. ದೇಶದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಇಂಥ ಯೋಧನಿಗೆ ದೇಶದ ಅತ್ಯುತ್ತಮ ಶೌರ್ಯ ಗೌರವ 'ಅಶೋಕ ಚಕ್ರ' ನೀಡಿ ಗೌರವಿಸಿದೆ.
ಹೊಸದಿಲ್ಲಿ: ನಾವಿಲ್ಲಿ ನೆಮ್ಮದಿಯಿಂದ ಉಸಿರಾಡುತ್ತಿದ್ದೇವೆ ಎಂದರೆ ಗಡೀಲಿ ದೇಶ ಕಾಯುತ್ತಿರುವ ಯೋಧರೇ ಕಾರಣ. ಅವರಿಗೇನು ಹಂಸತೂಲಿಕ ತಲ್ಪ ಇರುವುದಿಲ್ಲ. ಮಳೆ, ಚಳಿ. ಗಾಳಿಯನ್ನೂ ಲೆಕ್ಕಿಸದೇ ಹೋರಾಡುತ್ತಲೇ ಇರುತ್ತಾರೆ. ಹೀಗೆ ಎಡೆಬಿಡದೆ 11 ದಿನ ಹೋರಾಡಿ, 10 ಉಗ್ರರನ್ನು ಬಲಿ ತೆಗೆದುಕೊಂಡು ಲಾನ್ಸ್ ನಾಥ್ ಮೋಹನ್ ನಾಥ್ ಗೋಸ್ವಾಮಿಗೆ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಮರಣೋತ್ತರವಾಗಿ 'ಅಶೋಕ ಚಕ್ರ' ಗೌರವ ಪ್ರದಾನ ಮಾಡಲಾಗಿದೆ.