Quantcast
Channel: VijayKarnataka
Viewing all articles
Browse latest Browse all 6795

ಎನ್‌ಡಿಎ ಸರಕಾರದ ಸಾಧನೆ 'ಉತ್ತಮ'ವಾಗಿದೆ: ಜನಾಭಿಪ್ರಾಯ

$
0
0

ಹೊಸದಿಲ್ಲಿ: ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿ ಅಧಿಕಾರ ಹಿಡಿಯುವಾಗ ದೇಶದ ಜನತೆಯಲ್ಲಿ ಅತೀವ ಭರವಸೆ ಮೂಡಿಸಿದ್ದರು. ಅವರು ಪ್ರಧಾನಿಯಾದರೆ ರಾತ್ರಿ ಬೆಳಗಾಗುವುದರಲ್ಲಿ ದೇಶ ಪ್ರಗತಿಯ ಪಥದಲ್ಲಿ ಸಾಗುತ್ತದೆ ಎಂಬಂತೆ ಬಿಂಬಿಸಲಾಗಿತ್ತು. ಇದೀಗ ಅವರು ಅಧಿಕಾರಕ್ಕೆ ಬಂದು ಒಂದೂವರೆ ವರ್ಷಗಳಾಗಿವೆ. ಅವರ ಆಡಳಿತದ ವೈಖರಿಗೆ ಜನರು ನೀಡಿದ ಸರ್ಟಿಫಿಕೇಟ್ ಹೇಗಿದೆ?

ಎಬಿಪಿ ನ್ಯೂಸ್ ನೀಲ್ಸನ್ ಈ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿದ್ದು, ಶೇ.46 ಮಂದಿ ಮೋದಿ ಸರಕಾರವನ್ನು 'ವೆರಿ ಗುಡ್' ಅಥವಾ 'ಗುಡ್' ಎಂಬ ಸರ್ಟಿಫಿಕೇಟ್ ನೀಡಿದ್ದಾರೆ. ಈ ಸರಕಾರದಲ್ಲಿ ಇತರಿಗೆ ಹೋಲಿಸಿದಲ್ಲಿ ಮೋದಿ ಸಾಧನೆ ಬಗ್ಗೆ ಶೇ..54 ಮಂದಿ ಭೇಷ್ ಎಂಬ ಪ್ರಶಂಸಾ ಪತ್ರ ನೀಡಿದ್ದಾರೆ.

ಅಕಸ್ಮಾತ್ ನಾಳೆಯೇ ಲೋಕಸಭಾ ಚುನಾವಣೆ ನಡೆದರೆ ಫಲಿತಾಂಶ ಹೇಗಿರಬಹುದೆಂಬ ಪ್ರಶ್ನೆಗೆ 'ಶೇ.38 ಕ್ಷೇತ್ರಗಳನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಗಳಿಸಲಿದೆ' ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 339 ಕ್ಷೇತ್ರಗಳನ್ನು ಗೆದ್ದರೆ, ಈ ಅಭಿಪ್ರಾಯದಂತೆ ಇದೀಗ ಕೇವಲ 301 ಸೀಟ್‌ಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಲಿದೆ. ಅದೇ ರೀತಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ 62 ಸೀಟುಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ, ಇದೀಗ 108 ಕೇತ್ರಗಳಲನ್ನು ಗೆಲ್ಲಬಹುದೆಂಬ ಅಭಿಪ್ರಾಯ ವ್ಯಕ್ತವಾಗಿದೆ.

ಮತಗಳ ಪೈಕಿ ಬಿಜೆಪಿ ಶೇ.43ರಷ್ಟು ಮತಗಳನ್ನು ಬಿಜೆಪಿ ಪಡೆದರೆ, ಕಾಂಗ್ರೆಸ್ ಶೇ.14ರಷ್ಟು ಮತ ಪಡೆಯಲಿದೆ ಹಾಗೂ ಆಮ್ ಆದ್ಮಿ ಪಕ್ಷ ಶೇ.4ರಷ್ಟು ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಲಿದೆ ಎಂದಿದ್ದಾರೆ ಜನರು.

'ದೇಶದ ಜನರ ಮನಸ್ಸು ಹೇಗಿದೆ?' ಎಂಬುದನ್ನು ಅರ್ಥ ಮಾಡಿಕೊಡಲು ಈ ಸಮಿಕ್ಷೆ ಹಮ್ಮಿಕೊಂಡಿದ್ದು, ಶೇ.47ರಷ್ಟು ಮಂದಿ ಪ್ರಧಾನಿ ಮೋದಿ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ತಗ್ಗುತ್ತಿದೆ ಎಂದೇ ಅಭಿಪ್ರಾಯ ಪಟ್ಟಿದ್ದಾರೆ. ಶೇ.45 ಮಂದಿ ಇದಕ್ಕೆ ವ್ಯತಿರಿಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>